Curd Cumin Combination: ಹುರಿದ ಜೀರಿಗೆಯೊಂದಿಗೆ ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

Curd And Cumin Combination: ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ನೀವು ಇದಕ್ಕೆ ಸ್ವಲ್ಪ ಹುರಿದ ಜೀರಿಗೆಯನ್ನು ಸೇರಿಸಿದರೆ 5 ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Mar 15, 2022, 02:19 PM IST
  • ಮೊಸರು ಮತ್ತು ಜೀರಿಗೆಯಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ.
  • ಈ ಗುಣಲಕ್ಷಣಗಳು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
  • ನಿಮ್ಮ ದೇಹದ ರಕ್ತದೊತ್ತಡವನ್ನು ಸಮತೋಲನದಲ್ಲಿಡುವಲ್ಲಿ ಮೊಸರು ಮತ್ತು ಜೀರಿಗೆ ಪರಿಣಾಮಕಾರಿ.

Trending Photos

Curd Cumin Combination: ಹುರಿದ ಜೀರಿಗೆಯೊಂದಿಗೆ ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ title=
Curd Jeera Benefits

Curd And Cumin Combination: ಬಹುತೇಕ ಮಂದಿಗೆ ಮೊಸರು ಎಂದರೆ ತುಂಬಾ ಇಷ್ಟ. ಕೆಲವರು ಊಟಕ್ಕೆ ಮೊಸರಿಲ್ಲದಿದ್ದರೆ ಊಟವೇ ಮಾಡುವುದಿಲ್ಲ. ವಾಸ್ತವವಾಗಿ, ಮೊಸರು ಅನೇಕ ಪ್ರಯೋಜನಗಳನ್ನು ಹೊಂದಿದೆ, ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲು ಮತ್ತು ಚರ್ಮಕ್ಕೂ  ಒಳ್ಳೆಯದು. ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ನೀವು ಇದಕ್ಕೆ ಸ್ವಲ್ಪ ಹುರಿದ ಜೀರಿಗೆಯನ್ನು ಸೇರಿಸಿ ಸವಿದರೆ  5 ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?

ಮೊಸರಿನೊಂದಿಗೆ  ಹುರಿದ ಜೀರಿಗೆ ಬೆರೆಸಿ ಸೇವಿಸಿದರೆ ಈ ಸಮಸ್ಯೆಗಳಿಂದ ಸಿಗುತ್ತೆ ಮುಕ್ತಿ :
ಮೊಸರಿನೊಂದಿಗೆ  ಹುರಿದ ಜೀರಿಗೆ ಬೆರೆಸಿ ಸೇವಿಸಿದರೆ (Curd And Cumin Combination) ಇದು ಮೊಸರಿನ ರುಚಿಯನ್ನು ಹೆಚ್ಚಿಸುವುದಲ್ಲದೆ, ಹಲವಾರು ರೋಗಗಳಿಂದ ದೂರವಿರಲು ಸಹ ಸಹಕಾರಿಯಾಗಿದೆ. ಮೊಸರಿನಲ್ಲಿ ಹುರಿದ ಜೀರಿಗೆಯನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ. 

1. ಹಸಿವು ಹೆಚ್ಚಾಗುತ್ತದೆ:
ನೀವು ಮೊಸರಿನಲ್ಲಿ ಹುರಿದ ಜೀರಿಗೆ ಬೆರೆಸಿ ತಿಂದಾಗ, ನಿಮ್ಮ ಹಸಿವು ಹೆಚ್ಚಾಗುತ್ತದೆ. ನಮಗೆ ಹಸಿವೇ ಆಗುವುದಿಲ್ಲ, ಸದಾ ಹೊಟ್ಟೆ ತುಂಬಿದಂತೆಯೇ ಭಾಸವಾಗುತ್ತದೆ ಎನ್ನುವವರಿಗೆ  ಇದು ಉತ್ತಮವಾಗಿದೆ. ಇದಕ್ಕಾಗಿ ಪ್ರತಿದಿನ ಕನಿಷ್ಠ ಅರ್ಧ ಚಮಚ ಹುರಿದ ಜೀರಿಗೆಯನ್ನು ಮೊಸರಿನಲ್ಲಿ ಬೆರೆಸಿ ತಿನ್ನಿರಿ. 

ಇದನ್ನೂ ಓದಿ- Health Tips: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರತಿದಿನವೂ ಈ ಹಣ್ಣುಗಳನ್ನು ಸೇವಿಸಿ

2. ಮಲಬದ್ಧತೆಗೆ ಪರಿಹಾರ:
ಅನೇಕ ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಪ್ರತಿದಿನ ಮೊಸರಿನಲ್ಲಿ ಹುರಿದ ಜೀರಿಗೆಯನ್ನು ಮಿಕ್ಸ್ ಮಾಡಿ ತಿನ್ನಿರಿ. ಇವೆರಡೂ ಜೀರ್ಣಕ್ರಿಯೆಯನ್ನು ತ್ವರಿತಗೊಳಿಸುತ್ತವೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತವೆ.

3. ಕಣ್ಣುಗಳಿಗೆ ಪರಿಣಾಮಕಾರಿ:
ಮೊಸರು ಮತ್ತು ಜೀರಿಗೆ (Curd And Jeera) ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ, ಇವೆರಡರಲ್ಲೂ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ, ಅಂತಹ ಪರಿಸ್ಥಿತಿಯಲ್ಲಿ, ಮೊಸರು ಮತ್ತು ಜೀರಿಗೆಯನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ಇದನ್ನು ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ದೃಢಪಡಿಸಿದೆ.

4. ಮಧುಮೇಹವನ್ನು ತಡೆಯುತ್ತದೆ:
ಮೊಸರು ಮತ್ತು ಜೀರಿಗೆಯಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ, ಈ ಗುಣಲಕ್ಷಣಗಳು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. 

ಇದನ್ನೂ ಓದಿ- ಸೌತೆ ಕಾಯಿ ತಿಂದ ಕೂಡಲೇ ನೀರು ಕುಡಿಯುವ ತಪ್ಪನ್ನು ಎಂದು ಮಾಡಬೇಡಿ

5. ರಕ್ತದೊತ್ತಡವು ಸಮತೋಲನದಲ್ಲಿರುತ್ತದೆ:
ನಿಮ್ಮ ದೇಹದ ರಕ್ತದೊತ್ತಡವನ್ನು ಸಮತೋಲನದಲ್ಲಿಡುವಲ್ಲಿ ಮೊಸರು ಮತ್ತು ಜೀರಿಗೆ ಪರಿಣಾಮಕಾರಿ. ಮೊಸರು ಮತ್ತು ಜೀರಿಗೆ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ, ಇದು ರಕ್ತದೊತ್ತಡದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News