Lawyer Jagadish statement : ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಸೆನ್ಸೇಷನಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ಮಂಚದ ಸಂಸ್ಕೃತಿ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಅಪರಾಧ ತಡೆಯುವುದಕ್ಕೆ ಕಮಿಟಿಯನ್ನು ರಚಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು ಎಂದು ಜಗದೀಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಂತಹದ್ದೇನು ಇಲ್ಲ ಅಂದ ಮೇಲೆ ವಿರೋಧ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಲಾಯರ್ ಜಗದೀಶ್ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಕನ್ನಡ ಸಿನಿಮಾರಂಗದ ಬಗ್ಗೆ ಮಾತನಾಡಿದ್ದಾರೆ. ಜಗದೀಶ್ ಅವರ ಈ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ. ಯಾವುದೋ ಒಬ್ಬ ಹೆಣ್ಣು ಮಗಳು ಹೀರೋಯಿನ್ ಆಗುವ ಕನಸನ್ನು ಕಾಣ್ತಾಳೆ. ಮೇಕಪ್ ಹಾಕಿ ಕನ್ನಡಿ ಮುಂದೆ ನಿಂತು ತನ್ನ ಸೌಂದರ್ಯ ಕಂಡು ಹೆಮ್ಮೆ ಪಡ್ತಾಳೆ. ನಾನೂ ಐಶ್ವರ್ಯಾ ರೈ ಆಗಬಹುದು ಅಂತ ಭಾವನೆ ಬರುತ್ತೆ ಎಂದಿದ್ದಾರೆ.
ಆಗ ಕೆಲಸ ಕೇಳಿಕೊಂಡು ಬರುತ್ತಾಳೆ. ಹೀಗೆ ಬಂದ ಆ ಹೆಣ್ಣು ಮಗಳಿಗೆ ಬಾರಮ್ಮ ಮಂಚದಲ್ಲಿ ಮಲಗಿಕೋ ಮೊದಲು ನಾವೆಲ್ಲ ಮಜಾ ಮಾಡುತ್ತೇವೆ. ಆಮೇಲೆ ನಿನ್ನನ್ನು ಹೀರೋಯಿನ್ ಮಾಡುತ್ತೇವೆ ಅಂತಾ ಹೇಳಿದರೆ ಇದು ಯಾವ ಸಂಪ್ರದಾಯ? ಎಂದು ಜಗದೀಶ್ ದಿಟ್ಟವಾಗಿ ಪ್ರಶ್ನೆ ಮಾಡಿದ್ದಾರೆ.
ಚಿತ್ರರಂಗದಲ್ಲಿ ಮಂಚದ ಸಂಸ್ಕೃತಿ ಹೆಚ್ಚುತ್ತಿದೆ. ಈಗ ಇದನ್ನ ತಡೆಯೋಕೆ ಅಂತಾನೆ ಕಮಿಟಿ ರಚನೆಯಾಗಿದೆ. ಅವಕಾಶಕ್ಕೆ ಮಂಚಕ್ಕೆ ಕರೆಯುವ ಸಂಸ್ಕೃತಿ ಇನ್ನಾದರೂ ನಿಲ್ಲಿಸಬೇಕು ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. ಈ ಕಮಿಟಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕು ಅಂತ ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಯಪ್ಪೋ ಎನ್ ಮಸ್ತ್ ಅದಾಳೋ ಈಕೆ..! ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ತಂಗಿ ಫೋಟೋಸ್ ವೈರಲ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.