ನವದೆಹಲಿ: ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ದ ಜನಪ್ರತಿನಿಧಿ ಕಾಯ್ದೆ 1951 ನ್ನು ಉಲ್ಲಂಘಿಸಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ " ರಾಜ್ಯದಾದ್ಯಂತ ವಿವಿಧ ಪತ್ರಿಕೆಗಳಲ್ಲಿ 03.05.2018 ರಂದು ಸುಳ್ಳು ಮತ್ತು ತಪ್ಪುದಾರಿ ಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಲ್ಲದೆ ರಾಹುಲ್ ಗಾಂಧಿ ಅವರ ಛಾಯಾಚಿತ್ರಗಳನ್ನು ಬಳಸಿ ಸುಳ್ಳು, ಆಧಾರರಹಿತವಾದ ಮತ್ತು ಅಸಮಂಜಸವಾದ ಆರೋಪಗಳನ್ನು ಮಾಡಿದೆ,ಅಲ್ಲದೆ ಅವರಿಗೆ ನೀತಿ ಸಂಹಿತೆ ಇದೆ ಎನ್ನುವ ಅರಿವಿದ್ದರೂ ಕೂಡ ಈ ರೀತಿ ಮಾಡಲಾಗಿದೆ ಎಂದು ಅದು ಆರೋಪಿಸಿದೆ.
ಪತ್ರಿಕೆಗಳಲ್ಲಿ ಪ್ರಕಟಿಸಿರುವ ಜಾಹಿರಾತುಗಳೆಲ್ಲವು ಸಹಿತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ಚಾರಿತ್ರ್ಯವಧೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಿದೆ. ಈ ಹಿಂದೆ ಏಪ್ರಿಲ್ 27 ರಂದು ಕಾಂಗ್ರೆಸ್ ಪಕ್ಷವು ನೀತಿ ಸಂಹಿತ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಅಮಿತ್ ಷಾ, ರಾಜ್ಯ ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಿಯಮ ಉಲ್ಲಂಘನೆಯ ವಿರುದ್ದ ಕ್ರಮ ಕೈಗೊಳ್ಳಲು ಅದು ಕೇಸ್ ದಾಖಲಿಸಿತ್ತು.