ಬೆಂಗಳೂರು : ಫ್ರಿಡ್ಜ್ ಒಂದು ಕಾಲದಲ್ಲಿ ಐಷಾರಾಮದ ಸೂಚಕವಾಗಿತ್ತು. ಆದರೆ ಇಂದು ಅದು ಅನಿವಾರ್ಯವಾಗಿದೆ. ಮನೆ ದೊಡ್ಡದಿರಲಿ ಅಥವಾ ಚಿಕ್ಕದಿರಲಿ, ಮನೆಗೊಂದು ಫ್ರಿಡ್ಜ್ ಬೇಕೇ ಬೇಕು. ಉಳಿದ ಆಹಾರದಿಂದ ಮಸಾಲೆವರೆಗೆ ಎಲ್ಲವನ್ನೂ ಇಟ್ಟುಕೊಳ್ಳಲು ಫ್ರಿಜ್ ಬೇಕು. ಇನ್ನು ಫ್ರೀಜರ್ ನಲ್ಲಿ ಐಸ್ ಕ್ರೀಮ್ನಿಂದ ಹಿಡಿದು ಫ್ರೋಜನ್ ಬಟಾಣಿಗಳವರೆಗೆ, ಮೀನು, ಮಾಂಸ ಎಲ್ಲವನ್ನೂ ಇರಿಸಲಾಗುತ್ತದೆ.
ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ :
USDA ಅಂದರೆ US ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ, ಬೇಯಿಸಿದ ಆಹಾರವನ್ನು 2 ಗಂಟೆಗಳಿಗಿಂತ ಹೆಚ್ಚು ಕಾಲ ರೆಫ್ರಿಜರೇಟರ್ ನಲ್ಲಿ ಇಡಬಾರದು. ಇದಕ್ಕಿಂತ ಹೆಚ್ಚು ಕಾಲ ಫ್ರಿಜ್ ನಲ್ಲಿಡುವ ಆಹಾರದಲ್ಲಿ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಫ್ರೋಜನ್ ಪಕೋಡ, ಚೀಸ್ ಬೈಟ್ಸ್, ಸ್ಮೈಲಿಗಳಿಗೆ ಬಹಳ ಬೇಡಿಕೆ ಇದೆ. ಇದು ದುಡಿಯುವ ತಾಯಂದಿರಿಗೆ ವರದಾನವಾಗಿದೆ. ಆದರೆ ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ!
ಅಪ್ಪಿತಪ್ಪಿಯೂ ಇಂತಹ ಕೆಲಸ ಮಾಡಬೇಡಿ :
ನೀವು ಮಾಂಸ ಅಥವಾ ತರಕಾರಿಗಳ ಪ್ಯಾಕೆಟ್ ಅನ್ನು ಡಿಫ್ರಾಸ್ಟ್ ಮಾಡಿ ಮತ್ತು ಅದನ್ನು ಮತ್ತೆ ಫ್ರೀಜರ್ನಲ್ಲಿ ಇಡುತ್ತೀರಿ ಎಂದಾದರೆ ನಿಮಗೊಂದು ಸಲಹೆ. ಪ್ರತಿ ಬಾರಿ ನೀವು ಆಹಾರವನ್ನು ಹೊರ ತೆಗೆದು ಅದನ್ನು ಕರಗಿಸಿ ನಂತರ ಫ್ರೀಜ್ ಮಾಡಲು ಫ್ರೀಜರ್ನಲ್ಲಿ ಬಿಟ್ಟಾಗ, ಬ್ಯಾಕ್ಟೀರಿಯಾ ಬೆಳೆಯಲು ಪರಿಪೂರ್ಣ ವಾತಾವರಣವನ್ನು ನೀವೇ ನಿರ್ಮಾಣ ಮಾಡಿ ಕೊಡುತ್ತೀರಿ. ಫ್ರೀಜರ್ನಲ್ಲಿ ಇಟ್ಟಿರುವ ವಸ್ತುಗಳನ್ನು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗಿನ ಗಾಳಿಗೆ ಒಡ್ಡಿಕೊಳ್ಳದಂತೆ ನೋಡಿಕೊಳ್ಳಿ. ಚಳಿಗಾಲದಲ್ಲಿ ಸಿಗುವ ಅವರೆಕಾಳು ಖರೀದಿಸಿ ವರ್ಷಗಳವರೆಗೆ ಅದನ್ನು ಇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಫ್ರೀಜರ್ ನಲ್ಲಿ ಇಟ್ಟುಕೊಂಡು ಈ ಪದಾರ್ಥಗಳನ್ನು ನಾವು ಬಳಸಬಹುದು. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ಇದು ತಂದೊಡ್ಡುತ್ತದೆ.
USDA ಯ ಆಹಾರ ಸುರಕ್ಷತೆ ಮತ್ತು ತಪಾಸಣೆ ಸೇವೆಯ ಪ್ರಕಾರ, ಫ್ರೋಜನ್ ಆಹಾರವನ್ನು ಮೂರರಿಂದ ನಾಲ್ಕು ತಿಂಗಳೊಳಗೆ ಸೇವಿಸಬೇಕು. ನಂತರ ಅವುಗಳ ಗುಣಮಟ್ಟ ಕುಸಿಯುತ್ತದೆ. ಆರು ತಿಂಗಳಿಗಿಂತ ಹೆಚ್ಚು ಕಾಲ ನೀವು ಫ್ರೀಜರ್ನಲ್ಲಿ ಏನನ್ನಾದರೂ ಇಟ್ಟುಕೊಂಡು ತಿಂದರೆ ಅದು ಸ್ಲೋ ಪಾಯಿಸನ್ ರೀತಿ ಕೆಲಸ ಮಾಡುತ್ತದೆ.
ಇದನ್ನೂ ಓದಿ : ಹಾರ್ಟ್ಅಟ್ಯಾಕ್ ಆಗದಂತೆ ತಡೆಯಬಲ್ಲ ಹಣ್ಣಿದು! ದಿನಕ್ಕೆ ಒಂದೇ ಒಂದು ಪೀಸ್ ತಿಂದರೇ ಸಾಕು ಶುಗರ್-ಬಿಪಿ ಎರಡೂ ಹೆಚ್ಚಾಗಲ್ಲ..
ಫ್ರೀಜರ್ ನಲ್ಲಿಟ್ಟ ಆಹಾರ ಸುರಕ್ಷಿತವಲ್ಲವೇ?:
ಹೊಳೆಯುವ ಎಲ್ಲಾ ವಸ್ತು ಚಿನ್ನವಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ ಫ್ರೀಜರ್ನಲ್ಲಿ ಇಟ್ಟಿರುವ ಪ್ರತಿಯೊಂದು ಆಹಾರ ಪದಾರ್ಥಗಳು ತಿನ್ನಲು ಸುರಕ್ಷಿತವಲ್ಲ. ಎಲ್ಲಾ ರೀತಿಯ ಆಹಾರವನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಫ್ರೀಜರ್ ಉತ್ತಮ ಮಾರ್ಗವಾಗಿದೆ. ಆದರೆ ಇದು ನಿಮ್ಮ ಆಹಾರದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
( ಸೂಚನೆ :ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.