ತಾಯಿ ಮಕ್ಕಳ ಮರಣ ಪ್ರಮಾಣ ಕಡಿಮೆಗೊಳಿಸಲು ದಿನದ 24 ಗಂಟೆಯೂ ತಜ್ಞ ವೈದ್ಯರ ಸೇವೆ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ತಾಯಿ ಮುಗುವಿನ ಮರಣ ಪ್ರಮಾಣ ಲಕ್ಷಕ್ಕೆ 64 ಇದೆ. ಇದನ್ನ ಶೂನ್ಯಕ್ಕೆ ತರಬೇಕು. ಆದರೆ ಕೆಲವು ವೈದ್ಯಕೀಯ ಕಾರಣಗಳಿಂದ ಸಾವುಗಳು ಸಂಭವಿಸುತ್ತವೆ. ಸಾವಾಗದಂತೆ ತಡೆಯಲು ಸಾಧ್ಯವಿರುವ ಪ್ರಕರಣಗಳ ವಿಚಾರದಲ್ಲಿ ನಾವು ಹೆಚ್ಚು ಒತ್ತು ನೀಡಿ ತಾಯಿ ಮಗುವಿನ ಮರಣ ಪ್ರಮಾಣವನ್ನ ಕಡಿಮೆಗೊಳಿಸಬಹುದಾಗಿದೆ.

Written by - Bhavishya Shetty | Last Updated : Jan 23, 2025, 10:03 AM IST
    • ತಾಯಿ‌ ಮಗುವಿನ ಮರಣ ಪ್ರಮಾಣವನ್ನ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾತೃತ್ವ ಸುರಕ್ಷಾ ಅಭಿಯಾನ
    • ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ
    • ರಾಜ್ಯಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯಲಿದೆ ಎಂದ ಸಚಿವ
ತಾಯಿ ಮಕ್ಕಳ ಮರಣ ಪ್ರಮಾಣ ಕಡಿಮೆಗೊಳಿಸಲು ದಿನದ 24 ಗಂಟೆಯೂ ತಜ್ಞ ವೈದ್ಯರ ಸೇವೆ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ title=

ರಾಜ್ಯದಲ್ಲಿ ತಾಯಿ‌ ಮಗುವಿನ ಮರಣ ಪ್ರಮಾಣವನ್ನ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಅಭಿಯಾನದ ಮೂಲಕ ಪ್ರತಿ ತಿಂಗಳು 9 ಮತ್ತು 24 ರಂದು ಎರಡು ಬಾರಿ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಯಲಿದ್ದು, ರಾಜ್ಯಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: ಬಾಡಿಗೆ ಮನೆ ಕೇಳಲು ಹೋದ Bigg Boss ಸ್ಪರ್ಧಿಗೆ ಧರ್ಮ-ಜಾತಿ ಪ್ರಶ್ನೆ..! ನಟಿ ಅಂದ್ರೆ ಮನೆನೂ ತೋರಿಸಲ್ವಂತೆ..

ರಾಜ್ಯದಲ್ಲಿ ತಾಯಿ ಮುಗುವಿನ ಮರಣ ಪ್ರಮಾಣ ಲಕ್ಷಕ್ಕೆ 64 ಇದೆ. ಇದನ್ನ ಶೂನ್ಯಕ್ಕೆ ತರಬೇಕು. ಆದರೆ ಕೆಲವು ವೈದ್ಯಕೀಯ ಕಾರಣಗಳಿಂದ ಸಾವುಗಳು ಸಂಭವಿಸುತ್ತವೆ. ಸಾವಾಗದಂತೆ ತಡೆಯಲು ಸಾಧ್ಯವಿರುವ ಪ್ರಕರಣಗಳ ವಿಚಾರದಲ್ಲಿ ನಾವು ಹೆಚ್ಚು ಒತ್ತು ನೀಡಿ ತಾಯಿ ಮಗುವಿನ ಮರಣ ಪ್ರಮಾಣವನ್ನ ಕಡಿಮೆಗೊಳಿಸಬಹುದಾಗಿದೆ.  ಈ ಗುರಿಯೊಂದಿಗೆ ಮಾತೃತ್ವ ಸುರಕ್ಷಾ ಅಭಿಯಾನವನ್ನ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಕೈಗೊಳ್ಳಲು ಮುಂದಾಗಿದ್ದೇವೆ.. ರಾಯಚೂರಿನಲ್ಲಿ ತಾಯಿ ಮಗುವಿನ ಮರಣ ಪ್ರಮಾಣ ಹೆಚ್ಚಿರುವುದರಿಂದ ಇಲ್ಲಿಂದಲೇ ಅಭಿಯಾನ ಆರಂಭಿಸುತ್ತಿರುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ದಿನದ 24 ಗಂಟೆಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ತಜ್ಞ ವೈದ್ಯರ ಸೇವೆ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಒಬ್ಬರು ಸ್ತ್ರೀರೋಗ ತಜ್ಞರ ಬದಲಿಗೆ ಇಬ್ಬರು ತಜ್ಞ ವೈದ್ಯರನ್ನ ನೇಮಿಸಲು ಕ್ರಮ ವಹಿಸಲಾಗುತ್ತಿದೆ. ಹೀಗಾಗಿ ರಾತ್ರಿ ವೇಳೆಯಲ್ಲಿಯೂ ಗರ್ಭಿಣಿಯರಿಗೆ ತಜ್ಞ ವೈದ್ಯರ ಆರೋಗ್ಯ ಸೇವೆ ಲಭ್ಯವಾಗಲಿದೆ. ಯಾರೇ ವೈದ್ಯೆರು ತಮ್ಮ ಕರ್ತವ್ಯ ಸ್ಥಳದಲ್ಲಿರದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದರು.

ಇನ್ನು ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಗರ್ಭಿಣಿಯರು ANC ನೊಂದಣಿ ಮಾಡಿಸಿಕೊಂಡು ಉಚಿತ ತಪಾಸಣೆ ಹಾಗೂ ಔಷಧಿಗಳನ್ನ ಪಡೆಯಬಹುದು. ತಪಾಸಣೆ ವೇಳೆ ಗರ್ಭಿಣಿಯರ ಸ್ಕ್ಯಾನಿಂಗ್ ಸೇರಿದಂತೆ ಇಸಿಜಿ ಟೆಸ್ಟಿಂಗ್ ಕೂಡ ಮಾಡಿಸಲಾಗುವುದು. ಅಪಾಯದಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆಯ ಸಲಹೆಯ ಜೊತೆಗೆ ಗರ್ಭಿಣಿಯರ ಆರೋಗ್ಯ ಸ್ಥಿತಿ ಕುರಿತು ಆಗಾಗ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.

ರಾಯಚೂರಿನಲ್ಲಿ ನಡೆದ ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ 700 ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡು ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿಕೊಂಡರು.

ಮುನ್ನೆಚ್ಚರಿಕೆ, ಪೌಷ್ಟಿಕ ಆಹಾರ ಸೇವನೆ ಕುರಿತಂತೆ ತಜ್ಞ ವೈದ್ಯರು ಗರ್ಭಿಣಿಯರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು. ರಕ್ತದೊತ್ತಡ, ಮಧುಮೇಹ ಸೇರಿ ಅನೇಕ ಸಮಸ್ಯೆಗಳನ್ನ ಹೊಂದಿರುವ ಗರ್ಭಿಣಿಯರನ್ನ ಆರಂಭದಲ್ಲೇ ಪತ್ತೆ ಹಚ್ಚುವಲ್ಲಿ  ಆರೋಗ್ಯ ಶಿಬಿರ ಹೆಚ್ಚು ಸಹಕಾರಿಯಾಗಿದ್ದು, ಗರ್ಭಿಣಿಯರ ಅಪಾಯದ ಸ್ಥಿತಿ ತಲುಪದಂತೆ ಮುನ್ನೆಚ್ಚಿರಿಕೆ ವಹಿಸುವ ನಿಟ್ಟಿನಲ್ಲಿ ಈ ರೀತಿಯ ಶಿಬಿರಗಳು ಹೆಚ್ವು ಅನುಕೂಲಕರವಾಗಿವೆ.

ಇದನ್ನೂ ಓದಿ: ಔಷಧೀಯ ಗಣಿ ಈ ಮಸಾಲೆಗಳು: ಇವುಗಳನ್ನು ಬಳಸಿದ್ರೆ ಹೈ ಶುಗರ್ ಸಹ ಆಗುತ್ತೆ ನಾರ್ಮಲ್, ಮಧುಮೇಹ ಎಂದೂ ಹೆಚ್ಚಾಗಲ್ಲ...!

ರಾಯಚೂರಿಗೆ 8 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಾನ್ವಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ  ರಾಯಚೂರು ನಗರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಇದೇ ವೇಳೆ ಹೇಳಿದರು. ಅಲ್ಲದೇ ಜಿಲ್ಲೆಯ ಒಂದು ತಾಲೂಕಿಗೆ 200 ಹಾಸಿಗೆ ಸಬ್ ಡಿವಿಷನ್ ಆಸ್ಪತ್ರೆಗೆ ಯೋಜನೆ ರೂಪಿಸಿದ್ದೇವೆ ಎಂದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News