ಲಕ್ಷ್ಮಿ ನಿವಾಸದಲ್ಲಿ ದಿಶಾ ಮದನ್:‌ ದಶಕದ ಬಳಿಕ ಕಿರುತೆರೆಗೆ ಮರಳಿದ ನಟಿ!

Disha Madhan: ಕಿರುತೆರೆ ನಟಿ ದಿಶಾ ಮದನ್‌ ಕುಲವಧು ಧಾರಾವಾಹಿಯಿಂದ ಹೊರನಡೆದ ಮೇಲೆ 10 ವರ್ಷಗಳ ಬಳಿಕ ಮತ್ತೆ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ.  

Written by - Zee Kannada News Desk | Last Updated : Nov 27, 2023, 11:45 AM IST
  • ನಟಿ ದಿಶಾ ಮದನ್ ಕಲರ್ಸ್ ಕನ್ನಡ ವಾಹಿನಿಯ 'ಕುಲವಧು'ನಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು.
  • ನಟಿ ದಿಶಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
  • ದಿಶಾ 'ಕುಲವಧು' ಧಾರಾವಾಹಿಯಿಂದಹೊರಬಂದ ಮೇಲೆ ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಆಗಿ ಗುರುತಿಸಿಕೊಂಡರು.
ಲಕ್ಷ್ಮಿ ನಿವಾಸದಲ್ಲಿ ದಿಶಾ ಮದನ್:‌ ದಶಕದ ಬಳಿಕ ಕಿರುತೆರೆಗೆ ಮರಳಿದ ನಟಿ! title=

Disha Madhan Come Back : ನಟಿ ದಿಶಾ ಮದನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ 'ಕುಲವಧು'ವಿನಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಈ ನಟಿ ಕಾರಣಾಂತರಗಳಿಂದ ಒಂದಿಷ್ಟು ದಿನ ಧಾರಾವಾಹಿಯಿಂದ ಹಿಂದೆ ಸರಿದಿದ್ದವರು, ಇದೀಗ ದಿಶಾ ಮದನ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಇದರ ಜೊತೆಗೆ ಈ ಸಂತಸದ ವಿಚಾರವನ್ನು ಸ್ವತಃ ದಿಶಾ ಮದನ್ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಕಿರುತೆರೆ ನಟಿ ದಿಶಾ ಮದನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ "ಹತ್ತು ವರ್ಷದ ಹಿಂದೆ ನಾನು ಮೊದಲ ಬಾರಿಗೆ ನಟಿಯಾಗಿ ಕಾಣಿಸಿಕೊಂಡಿದ್ದೆ. ಸಾಕಷ್ಟು ಪ್ರೀತಿಯನ್ನು, ಪ್ರೋತ್ಸಾಹವನ್ನು ನಾನು ವಚನಾ ಪಾತ್ರಕ್ಕಾಗಿ ಗಿಟ್ಟಿಸಿಕೊಂಡಿದ್ದೆ. ಇದೀಗ ಹತ್ತು ವರ್ಷಗಳ ಬಳಿಕ ನಾನು ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಅದು ಭಾವನಾಳಾಗಿ. ಮತ್ತೆ ಕಂ ಬ್ಯಾಕ್ ಆಗುತ್ತಿರುವುದಕ್ಕೆ ಒಂದು ಕಡೆ ಖುಷಿಯಾಗುತ್ತಿದ್ದರೆ, ಇನ್ನೊಂದೆಡೆ ನರ್ವಸ್ ಕೂಡಾ ಆಗುತ್ತಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗಿರಲಿ" ಎಂದು ದಿಶಾ ಮದನ್ ಬರೆದುಕೊಂಡಿದ್ದಾರೆ . 

ಇದನ್ನೂ ಓದಿ: ತಮನ್ನಾ ಜೊತೆ ಮದುವೆ ಫಿಕ್ಸ್! ವಿಜಯ್ ವರ್ಮಾ ಬಿಚ್ಚಿಟ್ಟರು ಆ ಗುಟ್ಟು

 

ಹೌದು.. ನಟಿ ದಿಶಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ವಾಹಿನಿಯು ಈ ಹೊಸ ಧಾರಾವಾಹಿಯ ಪ್ರೋಮೋವೊಂದನ್ನು ಕೂಡಾ ರಿಲೀಸ್ ಮಾಡಿದ್ದು, ದಿಶಾ ಮದನ್ ಅದರಲ್ಲಿ ಕಾಣಸಿದ್ದಾರೆ. ಇನ್ನು ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಪತ್ರಕರ್ತೆ ಮಾಲಿನಿ ಪಾತ್ರದ ಮೂಲಕ ದಿಶಾ ಮೋಡಿ,  ಶ್ರೀಮುತ್ತು ಸಿನಿ ಸರ್ವೀಸಸ್ ಹಾಗೂ ಸಕ್ಕತ್ ಸ್ಟುಡಿಯೋ ನಿರ್ಮಾಣದಲ್ಲಿ ಮೂಡಿ ಬಂದ ವೆಬ್ ಸಿರೀಸ್ 'ಹೇಟ್ ಯೂ ರೋಮಿಯೋ'ದಲ್ಲಿ ಚಾರ್ವಿ ಪಾತ್ರಕ್ಕೆ ಜೀವ ತುಂಬಿದ ದಿಶಾ ಮದನ್ ನಂತರ 'ಹಂಬಲ್ ಪೋಲಿಟಿಶಿಯನ್ ನೊಗರಾಜ್' ವೆಬ್ ಸಿರೀಸ್‌ನಲ್ಲಿಯೂ ಬಣ್ಣ ಹಚ್ಚಿದ್ದಾರೆ. 

ನಟಿ ದಿಶಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದಿಶಾ ಮದನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸೀರಿಯಲ್ ಪ್ರಿಯರಿಗೆ ಸಂತಸ ತಂದಿದೆ. ದಿಶಾ 'ಕುಲವಧು' ಧಾರಾವಾಹಿಯಿಂದಹೊರಬಂದ ಮೇಲೆ ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಆಗಿ ಗುರುತಿಸಿಕೊಂಡು, ಡಬ್ ಸ್ಮ್ಯಾಶ್, ರೀಲ್ಸ್, ಮ್ಯೂಸಿಕಲಿ ಆ್ಯಪ್‌ಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಮಿಲಿಯನ್ ಫಾಲೋವರ್ಸ್ ಪಡೆದು ಸಾಕಷ್ಟು ಸದ್ದು ಮಾಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News