ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ವಂಡರ್ಲಾ ವಿಶೇಷ ಕೊಡುಗೆ : ಟಿಕೆಟ್ಸ್, ಕಪಲ್ ಪಾಸಸ್ ಮೇಲೆ 35% ವರೆಗೆ ರಿಯಾಯಿತಿ 

ಮುಂಬರುವ ವ್ಯಾಲೆಂಟೈನ್ಸ್ ಡೇ ಮತ್ತು ಸಿಂಗಲ್ಸ್ ವೀಕೆಂಡ್ ಆಚರಣೆಗೆ ವಂಡರ್ಲಾ ವಿಶೇಷ ರಿಯಾಯಿತಿ ಜೊತೆಗೆ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆಸಕ್ತರು ಈ ಕೆಳಗೆ ನೀಡಿರುವ ಮಾಹಿತಿಗಳಿಗೆ ಅನುಗುಣವಾಗಿ ವಂಡರ್ಲಾಗೆ ಭೇಟಿ ನೀಡಬಹುದು.. ಹೆಚ್ಚಿನ ವಿವರ ಇಲ್ಲಿದೆ..

Written by - Krishna N K | Last Updated : Feb 12, 2025, 06:28 PM IST
    • ವ್ಯಾಲೆಂಟೈನ್ಸ್ ಡೇ ಮತ್ತು ಸಿಂಗಲ್ಸ್ ವೀಕೆಂಡ್ ಆಚರಣೆಗೆ ವಂಡರ್ಲಾ ವಿಶೇಷ ರಿಯಾಯಿತಿ
    • ವಿಶೇಷ ರಿಯಾಯಿತಿ ಜೊತೆಗೆ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದ ವಂಡರ್ಲಾ
    • ಫೆಬ್ರವರಿಯಲ್ಲಿ ಬೆಂಗಳೂರು ಪಾರ್ಕ್‌ನಲ್ಲಿ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಗಳು ಇಲ್ಲಿವೆ
ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ವಂಡರ್ಲಾ ವಿಶೇಷ ಕೊಡುಗೆ : ಟಿಕೆಟ್ಸ್, ಕಪಲ್ ಪಾಸಸ್ ಮೇಲೆ 35% ವರೆಗೆ ರಿಯಾಯಿತಿ  title=

ಬೆಂಗಳೂರು : ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಚೈನ್ ಆದ ವಂಡರ್ಲಾ ಹಾಲಿಡೇಸ್ ಲಿ., ಈ ಫೆಬ್ರವರಿಯಲ್ಲಿ ಬೆಂಗಳೂರು ಪಾರ್ಕ್‌ನಲ್ಲಿ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಗಳು ಹಾಗೂ ಆಚರಣೆಗಳನ್ನು ಘೋಷಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೇಮಿಗಳ ದಿನಾಚರಣೆ ಆಚರಿಸಲು ಸಿದ್ಧವಾಗಿರುವ ಜೋಡಿಗಳಿಗೆ, ವಂಡರ್ಲಾ ಬೆಂಗಳೂರು, ಫೆಬ್ರವರಿ 7ರಿಂದ 14ವರೆಗೆ ಅತ್ಯಂತ ನಿರೀಕ್ಷೆಯ ಸ್ಕೈ ವೀಲ್ ಡೈನ್ ಒಳಗೊಂಡಿದ್ದು, ಸುಂದರ ದೃಶ್ಯಗಳೊಂದಿಗೆ ನಯನಮನೋಹರ ಡೈನಿಂಗ್ ಅನುಭವ ಒದಗಿಸಲಿದೆ. ಫೆಬ್ರವರಿ 14ರಂದು, ವೇವ್ ಪೂಲ್ ಡಿನ್ನರ್, ಲೈವ್‌ ಮ್ಯೂಸಿಕ್‌, ಡೆಕೋರ್ ಮತ್ತು ಎಮ್‌ಸೀ-ನಡೆಸಿಕೊಡುವ ಮನರಂಜನೆಯೊಂದಿಗೆ ಸಂಗೀತಮಯ ಸಂಜೆಯನ್ನು ಸೃಷ್ಟಿಸಿ, ಜೋಡಿಗಳು ತಮ್ಮ ಪ್ರೀತಿಯನ್ನು ಆಚರಿಸಿಕೊಳ್ಳಲು ಅತಿಸೂಕ್ತ ಸೆಟ್ಟಿಂಗ್ ಒದಗಿಸಲಿದೆ. 

ಇದನ್ನೂ ಓದಿ:ಫೆಬ್ರವರಿ ೧೪ಕ್ಕೆ ತೆರೆಗೆ ಬರಲಿರುವ ʼಭುವನಂ ಗಗನಂʼ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ಸಾಥ್!

ವ್ಯಾಲೆಂಟೈನ್ಸ್ ಡೇ ನಂತರ, ಈ ಗಮನಕೇಂದ್ರೀಕರಣವು, ಫೆಬ್ರವರಿ 15 ಮತ್ತು 16ರಂದು ನಡೆಯಲಿರುವ ಸಿಂಗಲ್ಸ್ ಡೇ ಆಚರಣೆಗಳ ಮೇಲಿರುತ್ತದೆ. ಫೆಬ್ರವರಿ 15ರಂದು ವಂಡರ್ಲಾ ಬೆಂಗಳೂರು, ನೇರ ಡಿಜೆ ನೈಟ್ ನಡೆಸಿಕೊಡುವ ಮೂಲಕ ಸಿಂಗಲ್ಸ್‌ಗಳಿಗೆ ಸಂಗೀತವನ್ನು ಆನಂದಿಸುವ, ಹೊಸ ಜನರನ್ನು ಭೇಟಿ ಮಾಡುವ ಮತ್ತು ಮರೆಯಲಾಗದ ಕ್ಷಣಗಳನ್ನು ಪಡೆದುಕೊಳ್ಳುವ ಅವಕಾಶ ಒದಗಿಸುತ್ತದೆ. 

ಕಪಲ್ ಪಾಸಸ್ ಮತ್ತು ವಿಶೇಷ ಆಹಾರ, ಟಿಕೆಟ್ ಕಾಂಬೋಗಳ ಮೇಲೆ 35%ವರೆಗೆ ರಿಯಾಯಿತಿ: ಈ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸಲು ವಂಡರ್ಲಾ, ಆನ್‌ಲೈನ್ ಬುಕ್ ಮಾಡಿದಾಗ ಪಾರ್ಕ್ ಟಿಕೆಟ್‌ಗಳು ಹಾಗೂ ವಿಶೇಷ ಆಹಾರ ಮತ್ತು ಟಿಕೆಟ್ ಕಾಂಬೋಗಳ ಮೇಲೆ 35%ವರೆಗೆ ರಿಯಾಯಿತಿ ಒದಗಿಸಲಿದೆ. ಈ ಭರ್ಜರಿ ಡೀಲ್‍ಅನ್ನು, ವಂಡರ್ಲಾದ ಆನ್‌ಲೈನ್ ಬುಕಿಂಗ್ ವೇದಿಕೆಯ ಮೇಲೆ ವಿಶೇಷವಾಗ ಫೆಬ್ರವರಿ 7ರಿಂದ 14ವರೆಗೆ ವಿಶೇಷವಾಗಿ ಪಡೆದುಕೊಳ್ಳಬಹುದು. ಬುಕಿಂಗ್‌ಗಳು ಸಹ ಪ್ರಾರಂಭವಾಗಿವೆ. 

ವಂಡರ್ಲಾ ಹಾಲಿಡೇಸ್ ಲಿ., ನ ಎಕ್ಸಿಕ್ಯೂಟಿವ್ ಚೇರ್ಮನ್ ಮತ್ತು ಎಮ್‌ಡಿ ಅರುಣ್ ಕೆ. ಚಿಟ್ಟಿಲಪಲ್ಲಿ, ಪ್ರೀತಿಪಾತ್ರರೊಡನೆ ಆನಂದ ಕ್ಷಣಗಳನ್ನು ಸೃಷ್ಟಿಸಲು ಅಥವಾ ’ಕೇವಲ ನಿಮಗಾಗಿ’ ಉತ್ತಮ ಸಮಯವನ್ನು ಕಳೆಯಲು  ವ್ಯಾಲೆಂಟೈನ್ಸ್ ಡೇ ಮತ್ತು ಸಿಂಗಲ್ಸ್ ವೀಕೆಂಡ್ ಒಳ್ಳೆಯ ಅವಕಾಶಗಳಾಗಿವೆ. ವಂಡರ್ಲಾ ಬೆಂಗಳೂರಿನ ಅತಿಥಿಗಳಿಗೆ, ವಿಶಿಷ್ಟವಾದ ಆಕರ್ಷಣೆಗಳು, ವಿಶೇಷವಾಗಿ ರಚಿಸಲಾಗಿರುವ ಕಾರ್ಯಕ್ರಮಗಳು ಹಾಗೂ ಅದ್ಭುತ ರಿಯಾಯಿತಿಗಳನ್ನು ಒದಗಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಪ್ರತಿಯೊಂದು ಕ್ಷಣವನ್ನು ಅವಿಸ್ಮರಣೀಯಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

ವಿಶೇಷ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ವಿವರ

ಸ್ಕೈ ವೀಲ್ ಡೈನ್ (ಫೆಬ್ರವರಿ 7ರಿಂದ–14ರವರೆಗೆ ಲಭ್ಯ): ಅತಿಥಿಗಳು, ಸ್ಕೈ ವೀಲ್ ಮೇಲೆ  ತನ್ನ ವಿಧದಲ್ಲೇ ವಿಶಿಷ್ಟವಾದ ಡೈನಿಂಗ್ ಅನುಭವ ಆನಂದಿಸಬಹುದು. ಪ್ರೀತಿಯ ಋತುವನ್ನು ಆಚರಿಸುತ್ತಿರುವ ಜೋಡಿಗಳಿಗೆ ನಿಖರವಾದ ಒಂದು ಪ್ರೇಮಮಯ ವಾತಾವರಣದಲ್ಲಿ ಸ್ವಾದಿಷ್ಟ ಆಹಾರ ಸವಿಯುತ್ತಲೇ ಬೆಂಗಳೂರಿನ ಅದ್ಭುತ ದೃಶ್ಯಗಳನ್ನು ನೋಡಿ. 

ವೇವ್ ಪೂಲ್ ಡಿನ್ನರ್ (ಫೆಬ್ರವರಿ 7ರಿಂದ–14ರವರೆಗೆ ಲಭ್ಯ): ವ್ಯಾಲೆಂಟೈನ್ಸ್ ಮುನ್ನಾದಿನ, ಅತಿಥಿಗಳು, ವೇವ್ ಪೂಲ್‌ನಲ್ಲಿ ಮನೋಹರ ಡಿನ್ನರ್ ಆನಂದಿಸಬಹುದು. ನಕ್ಷತ್ರಗಳಡಿ ವಿಶೇಷ ಭೋಜನ ಸೇವಿಸುತ್ತಲೇ ನಿಮ್ಮ ಸುತ್ತಲೂ ರಭಸದಿಂದ ಬರುತ್ತಿರುವ ಅಲೆಗಳಿರುವ ವಿಶಿಷ್ಟ ಸೆಟ್ಟಿಂಗ್ ಅನುಭವಿಸಿ-ಈ ಮಾಯಾ ಸಂಜೆಯಂದು ಪ್ರೀತಿಯನ್ನು ಆಚರಿಸುವ ಅತ್ಯಂತ ನಿಖರ ವಿಧಾನ ಇದಾಗಿರುತ್ತದೆ. 

ಸಿಂಗಲ್ಸ್ ವೀಕೆಂಡ್ (ಫೆಬ್ರವರಿ  15 ಮತ್ತು 16): 15 DJ ರಾತ್ರಿಯಂದು, ಸಂಗೀತ ಮತ್ತು ಮನರಂಜನೆ ಒಳಗೊಂಡ ಲೈವ್‌ ಸೆಲೆಬ್ರೆಷನ್‌ 

ಆನ್‌ಲೈನ್ ಪೋರ್ಟಲ್ https://bookings.wonderla.com/ ಮೂಲಕ ಅಥವಾ ಬೆಂಗಳೂರು ಪಾರ್ಕ್‌ಅನ್ನು +91 80372 30333, +91 9945557777ದಲ್ಲಿ ಸಂಪರ್ಕಿಸುವ ಮೂಲಕ ತಮ್ಮ ಟಿಕೆಟ್ಟುಗಳನ್ನು ಮುಂಗಡವಾಗಿಯೇ ಬುಕ್ ಮಾಡಿಕೊಳ್ಳಲು ವಂಡರ್ಲಾ ಸಂದರ್ಶಕರನ್ನು ಪ್ರೋತ್ಸಾಹಿಸುತ್ತದೆ. ಅದ್ಭುತ ರೈಡ್‌ಗಳು, ಸ್ವಾದಿಷ್ಟ ಆಹಾರ ಮತ್ತು ಜೀವಂತ ಮನರಂಜನೆಯೊಂದಿಗೆ ಪ್ರೀತಿ ಮತ್ತು ಸ್ನೇಹದ ಋತುವನ್ನು ಆಚರಿಸಿ ಮೋಜು ಮಾಡಲು ವಂಡರ್ಲಾ ಕಪಲ್‌ಗಳು, ಸಿಂಗಲ್ಸ್ ಮತ್ತು ಕುಟುಂಬಗಳನ್ನು ಆಹ್ವಾನಿಸುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News