ಹಾಲು ಮಾರುವವ V/S ಚಿರತೆ.. ಭೀಕರ ಕಾಳಗದ ವಿಡಿಯೋ ವೈರಲ್‌..! ಕೊನೆಯಲ್ಲಿ ಏನಾಯ್ತು ಗೊತ್ತೆ..?

Cheetah viral video : ಇತ್ತೀಚೆಗೆ ಹೆಚ್ಚಾಗಿ ಕಾಡು ಪ್ರಾಣಿಗಳು ನಗರಕ್ಕೆ ನುಗ್ಗುತ್ತಿವೆ. ಇದರಕ್ಕೆ ಕಾರಣ ಮನುಷ್ಯನ ಅತಿಯಾದ ಆಸೆ.. ಕಾಡು ನಾಶ.. ಸದ್ಯ ರಾಜಸ್ಥಾನದ ಉದಯಪುರ ನಗರದಲ್ಲಿ ರಾತ್ರಿ 8.30 ರ ಸುಮಾರಿಗೆ ಬೈಕ್ ಮತ್ತು ಚಿರತೆ ಡಿಕ್ಕಿ ಹೊಡೆದಿತ್ತು.. ಆಗ ಹಾಲುವ ಮಾರುವ ವ್ಯಕ್ತಿ ಮತ್ತು ಚಿರತೆ ಎದುರು ಬದುರು ಬಿದ್ದರು.. ನಂತರ.. 

Written by - Krishna N K | Last Updated : Feb 12, 2025, 01:05 PM IST
    • ಇತ್ತೀಚೆಗೆ ಹೆಚ್ಚಾಗಿ ಕಾಡು ಪ್ರಾಣಿಗಳು ನಗರಕ್ಕೆ ನುಗ್ಗುತ್ತಿವೆ.
    • ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ.
    • ಈ ಸಮಸ್ಯೆಗೆ ಯಾವುದೇ ಪ್ರಾಯೋಗಿಕ ಪರಿಹಾರವನ್ನು ಇನ್ನೂ ಕಂಡುಕೊಂಡಿಲ್ಲ.
ಹಾಲು ಮಾರುವವ V/S ಚಿರತೆ.. ಭೀಕರ ಕಾಳಗದ ವಿಡಿಯೋ ವೈರಲ್‌..! ಕೊನೆಯಲ್ಲಿ ಏನಾಯ್ತು ಗೊತ್ತೆ..? title=

Wild animal viral : ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಪ್ರಪಂಚದಾದ್ಯಂತದ ಕಾಡುಗಳಲ್ಲಿ ಉಷ್ಣತೆ ಹೆಚ್ಚುತ್ತಿದೆ. ನೀರು ಮತ್ತು ಆಹಾರ ಕಡಿಮೆಯಾಗುತ್ತಿದೆ. ಒಂದೇ ಜಾತಿಯ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಸಮಸ್ಯೆಗೆ ಯಾವುದೇ ಪ್ರಾಯೋಗಿಕ ಪರಿಹಾರವನ್ನು ಇನ್ನೂ ಕಂಡುಕೊಂಡಿಲ್ಲ. 

ಇತ್ತೀಚೆಗೆ ರಾಜಸ್ಥಾನದ ಉದಯಪುರ ನಗರದಲ್ಲಿ ರಾತ್ರಿ 8.30 ರ ಸುಮಾರಿಗೆ ಬೈಕ್ ಮತ್ತು ಚಿರತೆ ಡಿಕ್ಕಿ ಹೊಡೆದಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಸಿಟಿವಿ ವಿಡಿಯೋದಲ್ಲಿ, ಗೋಡೆ ಹಾರಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಚಿರತೆಯೊಂದು ಎದುರು ಬದಿಯಲ್ಲಿ ಹಾಲು ಸಾಗಿಸುತ್ತಿದ್ದ ವ್ಯಕ್ತಿಯ ಬೈಕ್‌ಗೆ ಡಿಕ್ಕಿ ಹೊಡೆದಿದೆ. 

ಇದನ್ನೂ ಓದಿ: ಮಹಿಳೆಯರ ಬಗ್ಗೆ ಚಾಣಕ್ಯ ನೀತಿ: ದೇಹದ ಈ ಭಾಗವನ್ನು ನೋಡಿ ಅವರು ಯಾವ ರೀತಿಯ ಮಹಿಳೆ ಎಂದು ನೀವು ಸುಲಭವಾಗಿ ಹೇಳಬಹುದು.

ಅಪಘಾತದಲ್ಲಿ ಬೈಕ್ ಪಲ್ಟಿಯಾಗಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಅಲ್ಲದೆ, ಬೈಕ್‌ನಲ್ಲಿ ಮಾರಾಟಕ್ಕೆ ಸಾಗಿಸುತ್ತಿದ್ದ ಹಾಲು ಎಲ್ಲವೂ ರಸ್ತೆಗೆ ಬಿದ್ದಿತು. ಅಪಘಾತದ ನಂತರ, ಚಿರತೆ ಎದ್ದೇಳಲು ಸಾಧ್ಯವಾಗದೆ ರಸ್ತೆಯಲ್ಲೇ ಮಲಗಿತ್ತು. ಇದೆಲ್ಲವೂ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ ವಿಡಿಯೋ ಈಗ ವೈರಲ್ ಆಗಿದೆ.

ಸ್ವಲ್ಪ ಸಮಯದ ನಂತರ, ಚಿರತೆ ಹೇಗೋ ಎದ್ದು ಅಲ್ಲಿಂದ ಹೊರಟುಹೋಯಿತು. ನಂತರ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬೈಕರ್‌ಗೆ ಸಹಾಯ ಮಾಡಿದರು. ಈ ಮಧ್ಯ, ಉದಯಪುರದಲ್ಲಿ ಚಿರತೆ ದಾಳಿ ನಡೆದ ಮೊದಲ ಪ್ರಕರಣ ಇದಲ್ಲ ಎಂದು ಹೇಳಲಾಗುತ್ತದೆ. 2023 ರಲ್ಲಿ ಉದಯಪುರ ಒಂದರಲ್ಲೇ 80 ಚಿರತೆ ದಾಳಿಗಳು ದಾಖಲಾಗಿವೆ.\

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News