ಹೊಸ ಆದಾಯ ತೆರಿಗೆ ಮಸೂದೆ 'ಕ್ಯಾಪಿಟಲ್ ಅಸೆಟ್ಸ್' ವ್ಯಾಖ್ಯಾನವನ್ನು ಬದಲಿಸುತ್ತದೆಯೇ?

New Income Tax Bill 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶೀಘ್ರದಲ್ಲೇ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದು, ಎಲ್ಲರ ಚಿತ್ತ ಸಂಸತ್ ನತ್ತ ನೆಟ್ಟಿದೆ. 

Written by - Yashaswini V | Last Updated : Feb 13, 2025, 11:26 AM IST
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶೀಘ್ರದಲ್ಲೇ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಿದ್ದಾರೆ
  • ಹೊಸ ಆದಾಯ ತೆರಿಗೆ ಮಸೂದೆ ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಲಿದೆ.
  • ಇದರಲ್ಲಿ 'ಕ್ಯಾಪಿಟಲ್ ಆಸೆಟ್ಸ್ ' ವ್ಯಾಖ್ಯಾನವನ್ನು ಬದಲಿಸಲಾಗುತ್ತದೆಯೇ..!
ಹೊಸ ಆದಾಯ ತೆರಿಗೆ ಮಸೂದೆ 'ಕ್ಯಾಪಿಟಲ್ ಅಸೆಟ್ಸ್' ವ್ಯಾಖ್ಯಾನವನ್ನು ಬದಲಿಸುತ್ತದೆಯೇ?  title=

New Income Tax Bill 2025: ಕೇಂದ್ರದ ಮೋದಿ ಸರ್ಕಾರ 64ವರ್ಷಗಳ ಹಳೆಯದಾದ ಆದಾಯ ತೆರಿಗೆ ಮಸೂದೆಯನ್ನು ಬದಲಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆಯಲ್ಲಿ 'ಹೊಸ ಆದಾಯ ತೆರಿಗೆ ಮಸೂದೆ 2025' ಅನ್ನು ಮಂಡಿಸಲಿದ್ದು ಸದ್ಯ ಎಲ್ಲರ ಚಿತ್ತ ಹೊಸ ಐ‌ಟಿ ಬಿಲ್ 2025
ರತ್ತ ನೆಟ್ಟಿದೆ. 

ಹೊಸ ಆದಾಯ ತೆರಿಗೆ ಮಸೂದೆಯು ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ಹೊಸ ಆದಾಯ ತೆರಿಗೆ ಮಸೂದೆಯು ಬಂಡವಾಳ ಸ್ವತ್ತುಗಳ ವ್ಯಾಖ್ಯಾನವನ್ನು ಬದಲಿಸಬಹುದು ಎಂದು ಅಂದಾಜಿಸಲಾಗುತ್ತಿದೆ. 

ಇದನ್ನೂ ಓದಿ- ತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ' ಪ್ರಮುಖ ಅಂಶಗಳು..! 

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 2(14) ರ ಅಡಿಯಲ್ಲಿ ನಗದೀಕೃತ ಆಸ್ತಿ ಅಥವಾ ಕ್ಯಾಪಿಟಲ್ ಆಸೆಟ್ಸ್ ಎಂಬ ಪದವನ್ನು ಒಬ್ಬ ಕರದಾತ ಹೊಂದಿರುವ ಯಾವುದೇ ರೀತಿಯ ಆಸ್ತಿ ಎಂದು ವ್ಯಾಖ್ಯಾನಿಸಲಾಗಿದೆ. 

ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಬಂಡವಾಳ ಸ್ವತ್ತುಗಳ ವ್ಯಾಖ್ಯಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ಆದಾಗ್ಯೂ, ಅದರ ವಿಭಾಗವನ್ನು 1(22) ಕ್ಕೆ ಬದಲಾಯಿಸಲಾಗಿದೆ ಎನ್ನಲಾಗುತಿದೆ. 

ಇದನ್ನೂ ಓದಿ- ಬಸ್ ದರದ ಬೆನ್ನಲ್ಲೇ ಮೆಟ್ರೋ ದರವೂ ಏರಿಕೆ: ಚಿಂತೆಬಿಡಿ,  ಅಧಿಕ ಮೈಲೇಜ್ ನೀಡುವ ಬೈಕ್‌ಗಳು ಅಗ್ಗದ ಬೆಲೆಯಲ್ಲೇ ಲಭ್ಯ.! 

ಆದಾಯ ತೆರಿಗೆ ಮಸೂದೆಯ ಪ್ರಕಾರ, ಕ್ಯಾಪಿಟಲ್ ಅಸೆಟ್ಸ್ ಈ ಕೆಳಗಿನ ಅಂಶಗಳನ್ನು ಸೂಚಿಸುತ್ತದೆ:- 
* ತೆರಿಗೆದಾರರು ಹೊಂದಿರುವ ಯಾವುದೇ ರೀತಿಯ ಆಸ್ತಿಯನ್ನು ಕ್ಯಾಪಿಟಲ್ ಅಸೆಟ್ಸ್ ಒಳಗೊಂಡಿರುತ್ತದೆ. ಇದು ಆತನ ವೃತ್ತಿ, ವ್ಯವಹಾರಕ್ಕೆ ಸಂಬಂಧಿಸಿರಬಹುದು ಅಥವಾ ಇಲ್ಲದಿರಬಹುದು. 
* ಅವರು 1992ರ ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ ಕಾಯ್ದೆಯ ಅಡಿಯಲ್ಲಿ ಮಾಡಲಾದ ನಿಯಮಗಳ ಪ್ರಕಾರ ಹೂಡಿಕೆ ಮಾಡಿದ್ದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೊಂದಿರುವ ಅಥವಾ ಸೆಕ್ಷನ್ 224 (10) (a) ನಲ್ಲಿ ನಿರ್ದಿಷ್ಟಪಡಿಸಿದ ಹೂಡಿಕೆ ನಿಧಿಯಿಂದ ಹೊದಿರುವ ಯಾವುದೇ ಭದ್ರತೆಗಳು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News