Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಎಲ್ಲೇ ಹೋಗಲಿ ಬಿಗಿ ಭದ್ರತೆ ಇರುತ್ತದೆ. ಆದರೆ ಕೊಹ್ಲಿ ಇದೀಗ ಭದ್ರತೆ ಲೆಕ್ಕಿಸದೆ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು ತಬ್ಬಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು, ಇಂಗ್ಲೆಂಡ್ ವಿರುದ್ಧದ ೨ನೇ ಏಕದಿನ ಪಂದ್ಯದ ನಂತರ ಭಾರತ ತಂಡವು ಅಹಮದಾಬಾದ್ಗೆ ತೆರಳಲು ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಳೆ ನರಂದ್ರ ಮೋದಿ ಸ್ಟೇಡಿಯಂನಲ್ಲಿ ಸರಣಿಯ ೩ನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ತನ್ನ ಸಂಪೂರ್ಣ ಕೆರಿಯರ್ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಕ್ರಿಕೆಟಿಗ ಯಾರು ಗೊತ್ತಾ? ಈ ದಿಗ್ಗಜ ಟೀಂ ಇಂಡಿಯಾದವರೇ..
ಬೆನ್ನ ಹಿಂದೆ ಬ್ಯಾಗ್ ಮತ್ತು ಟ್ರಾಲಿ ಹಿಡಿದುಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವಿರಾಟ್ ಕೊಹ್ಲಿಯವರನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ನೆರೆದಿದ್ದರು. ಈ ವೇಳೆ ನಗುನಗುತ್ತಲೇ ಬಂದ ಕೊಹ್ಲಿ ಮಹಿಳೆಯೊಬ್ಬರನ್ನು ಆತ್ಮಿಯವಾಗಿ ತಬ್ಬಿಕೊಂಡರು. ಈ ವೇಳೆ ಅವರ ಜೊತೆಗೆ ಮಾತನಾಡಿದ ಕೊಹ್ಲಿ ಮತ್ತೆ ಸಿಗುತ್ತೇನೆ ಅಂತಾ ಹೇಳಿ ಬೈ ಬೈ ಮಾಡಿದರು. ಈ ವೇಳೆ ಅಪಾರ ಜನರು ನೆರೆದಿದ್ದ ಕಾರಣ ಭದ್ರತಾ ಸಿಬ್ಬಂದಿ ಜೊತೆಗೆ ಕೊಹ್ಲಿ ಹೋದರು.
Virat Kohli met a lady (close relative) at Bhubaneswar airport🥹❤️ pic.twitter.com/r71Du0Uccf
— 𝙒𝙧𝙤𝙜𝙣🥂 (@wrognxvirat) February 10, 2025
ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಮಹಿಳೆಯೊಬ್ಬರನ್ನ ತಬ್ಬಿಕೊಂಡಿರುವ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಅಪ್ಪಿಕೊಂಡ ಆ ಮಹಿಳೆ ಯಾರು? ಆಕೆಯ ಜೊತೆಗೆ ಕೊಹ್ಲಿ ಆತ್ಮಿಯವಾಗಿ ಮಾತನಾಡಿದ್ದು ಏಕೆ? ಕೊನೆಗೆ ಆಕೆಗೆ ಮತ್ತೆ ಸಿಗುತ್ತೇನೆ ಅಂತಾ ಹೇಳಿ ಹೋಗಿದ್ದೇಕೆ? ಅಂತಾ ನೆಟಿಜನ್ಸ್ ಚರ್ಚಿಸುತ್ತಿದ್ದಾರೆ.
ಏರ್ಪೋರ್ಟ್ನಲ್ಲಿ ಕೊಹ್ಲಿಯವರ ಬಾಡಿ ಲಾಂಗ್ವೇಜ್ ನೋಡಿದ್ರೆ ಆ ಮಹಿಳೆ ಅಭಿಮಾನಿಯಲ್ಲ, ಅವರ ಸಂಬಂಧಿ ಇರಬೇಕು ಅಂತಾ ಹೇಳಲಾಗಿದೆ. ಹತ್ತಿರದ ಸಂಬಂಧಿಯಾಗಿದ್ದರಿಂದಲೇ ಕೊಹ್ಲಿಯವರು ಆ ರೀತಿ ಆತ್ಮಿಯವಾಗಿ ನಡೆದುಕೊಂಡಿದ್ದು, ಅಪ್ಪಿ ಮಾತನಾಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಕೊಹ್ಲಿಯವರ ಸರಳತೆ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.