ಬೆಂಗಳೂರು : ಭಾರತ್ ಜೋಡೋ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸುರ್ಜೇವಾಲಾ, "ಸಚಿವರು ತಮ್ಮ ಕಾರ್ಯ ವೈಖರಿಯನ್ನು ಸುಧಾರಿಸದಿದ್ದರೆ ಅವರ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ. ಕಳೆದ 18 ತಿಂಗಳ ಸಚಿವರ ಕಾರ್ಯಕ್ಷಮತೆ ಕುರಿತ ವರದಿ ಈಗಾಗಲೇ ಹೈಕಮಾಂಡ್‌ಗೆ ರವಾನಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಕಾರ್ಯಚಟುವಟಿಕೆಗಳನ್ನು ಗತಿಯನ್ನೊಳಪಡಿಸುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ. "ಪ್ರತಿ ಜಿಲ್ಲೆಗೆ ಭೇಟಿ ನೀಡಿ, ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ" ಎಂಬ ನೇರ ಸೂಚನೆ ನೀಡಲಾಗಿದೆ.
ಡಿನ್ನರ್ ಸಭೆಗಳಿಗೆ ಬ್ರೇಕ್:
ಪದೇ ಪದೇ ಡಿನ್ನರ್ ಸಭೆಗಳ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ತೊಡಕು ತರುತ್ತಿದ್ದವರಿಗೆ ಇದೀಗ ಖಡಕ್ ಎಚ್ಚರಿಕೆ ಬಂದಿದೆ. "ಪಕ್ಷದ ಶಿಸ್ತನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸುರ್ಜೇವಾಲಾ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಖಂಡಿಸಿದ್ದಾರೆ. "ನಮಗೆ ಕಾರ್ಯಕರ್ತರು ಮುಖ್ಯ, ಸರ್ಕಾರದ ದೌರ್ಬಲ್ಯಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ" ಎಂಬ ಸಂದೇಶ ಸ್ಪಷ್ಟವಾಗಿದೆ.
ಪಕ್ಷದ ಹಿತಕ್ಕಾಗಿ ಅಧಿಕಾರ ತ್ಯಾಗ ಅಗತ್ಯ
ಸುರ್ಜೇವಾಲಾ, ಸೋನಿಯಾ ಗಾಂಧಿ ತ್ಯಾಗದ ಉದಾಹರಣೆ ನೀಡುತ್ತಾ, "ಪಕ್ಷದ ಹಿತಕ್ಕಾಗಿ ಕೆಲವೊಮ್ಮೆ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ" ಎಂದು ಸೂಚಿಸಿದರು. ಎರಡು ತಿಂಗಳ ನಂತರ ಸಂಪುಟ ಪುನಾರಚನೆ ಅನಿವಾರ್ಯವಾಗಲಿದ್ದು, ಫಲಿತಾಂಶ ತೋರದ ಸಚಿವರು ತಮ್ಮ ಸ್ಥಾನಕ್ಕೆ ವಿದಾಯ ಹೇಳಬೇಕಾಗುತ್ತದೆ.
ಹಿರಿಯ ಸಚಿವರ ಅಸಮಾಧಾನ:
ಸರ್ವ ಸದಸ್ಯರ ಸಭೆಯಲ್ಲಿ ಸಚಿವರ ಕಾರ್ಯ ವೈಖರಿಯ ಬಗ್ಗೆ ಸುರ್ಜೇವಾಲಾ ನೇರವಾಗಿ ಮಾತನಾಡಿರುವುದು ಕೆಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ಪಕ್ಷಕ್ಕೆ ದಶಕಗಳಿಂದ ಸೇವೆ ಸಲ್ಲಿಸಿದ್ದೇವೆ, ಎಲ್ಲರ ಮುಂದೆ ಈ ರೀತಿ ಎಚ್ಚರಿಕೆ ನೀಡುವುದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಕೆಲ ನಾಯಕರು ಬೇಸರ ಹೊರಹಕಿದ್ದಾರೆ.
ಸಚಿವ ಸಂಪುಟದಲ್ಲಿ ಬದಲಾವಣೆ: ತೀವ್ರ ಚರ್ಚೆ
ಹಿರಿಯ ನಾಯಕರು ಸುರ್ಜೇವಾಲಾ ವಿರುದ್ಧ ಹೈಕಮಾಂಡ್‌ಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. "ರಾಜ್ಯ ಉಸ್ತುವಾರಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್ ಚರ್ಚಿಸಬೇಕು" ಎಂಬ ಬೇಡಿಕೆಗಳು ಕೇಳಿ ಬಂದಿವೆ.
ಸಚಿವರ ಕಾರ್ಯಕ್ಷಮತೆ, ಶಿಸ್ತು , ಮತ್ತು ಪವರ್ ಶೇರಿಂಗ್ ಸಮಸ್ಯೆಗಳಲ್ಲಿ ಸ್ಪಷ್ಟತೆ ನೀಡಲು ಹೈಕಮಾಂಡ್ ಅಗತ್ಯ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ಆದರೆ, ಈ ತೀರ್ಮಾನಗಳು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆ ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್