ಈ ಎಲೆ ದೀರ್ಘ ಕಾಲದ ಕೆಮ್ಮಿಗೆ ರಾಮಬಾಣ.. ಇದನ್ನು ಮೂಸಿದ್ರೆ ಸಾಕು ಕಟ್ಟಿದ ಮೂಗು ಸಡಿಲಗೊಳ್ಳುತ್ತೆ.. ಜಗಿದು ರಸ ನುಂಗಿದರೆ ನೆಗಡಿ, ಜ್ವರ ಗುಣವಾಗುವುದು!

Home remedies for cold and cough: ದೊಡ್ಡಪತ್ರೆ ಎಲೆಗಳು ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ದೊಡ್ಡಪತ್ರೆಯನ್ನು ಕಷಾಯಗಳಲ್ಲಿ, ನೀರಿನಲ್ಲಿ ಕುದಿಸಿ ಕುಡಿಯುತ್ತಾರೆ. 

Written by - Chetana Devarmani | Last Updated : Jan 13, 2025, 11:02 AM IST
  • ಒಣ ಕೆಮ್ಮಿಗೆ ಮನೆ ಮದ್ದು
  • ಒಣ ಕೆಮ್ಮು ಬರಲು ಕಾರಣ
  • ನೆಗಡಿ ಗುಣಪಡಿಸುವ ಕಷಾಯ
ಈ ಎಲೆ ದೀರ್ಘ ಕಾಲದ ಕೆಮ್ಮಿಗೆ ರಾಮಬಾಣ.. ಇದನ್ನು ಮೂಸಿದ್ರೆ ಸಾಕು ಕಟ್ಟಿದ ಮೂಗು ಸಡಿಲಗೊಳ್ಳುತ್ತೆ.. ಜಗಿದು ರಸ ನುಂಗಿದರೆ ನೆಗಡಿ, ಜ್ವರ ಗುಣವಾಗುವುದು! title=
cold and cough Home Remedy

Home remedies for cold and cough: ದೊಡ್ಡಪತ್ರೆ ಎಲೆಗಳು ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ದೊಡ್ಡಪತ್ರೆಯನ್ನು ಕಷಾಯಗಳಲ್ಲಿ, ನೀರಿನಲ್ಲಿ ಕುದಿಸಿ ಕುಡಿಯುತ್ತಾರೆ. ಸುವಾಸನೆ ಭರಿತ ಮತ್ತು ರುಚಿಕರವಾದ ದೊಡ್ಡಪತ್ರೆ ಎಲೆ ದೀರ್ಘ ಕಾಲದ ಒಣಕೆಮ್ಮನ್ನು ಗುಣಪಡಿಸುತ್ತದೆ. 

ಅನೇಕ ಔಷಧೀಯ ಗುಣಗಳಿಂದ ತುಂಬಿರುವುದರಿಂದ ದೊಡ್ಡಪತ್ರೆ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಶೀತ, ಜ್ವರ ಮತ್ತು ಕೆಮ್ಮಿನಂತಹ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ಇದರಲ್ಲಿರುವ ಥೈಮೋಲ್ ಎಂಬ ಅಂಶವು ಸೋಂಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ದೊಡ್ಡಪತ್ರೆ ಎಲೆಗಳು ಮೂಳೆಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ದೊಡ್ಡಪತ್ರೆ ಎಲೆಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಒಂದು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು? ಇದರ ಅತಿಯಾದ ಸೇವನೆಯಿಂದ ಏನಾಗುತ್ತೆ ಗೊತ್ತಾ..?

ದೊಡ್ಡಪತ್ರೆ ಎಲೆಗಳನ್ನು ಅಗಿಯುವುದರಿಂದ ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ನಂಜುನಿರೋಧಕ ಗುಣಗಳಿಂದ ತುಂಬಿರುವ ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಶೀತ, ಕೆಮ್ಮು ಮತ್ತು ಅಸ್ತಮಾ ಮುಂತಾದ ಉಸಿರಾಟದ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಅದರ ಎಲೆಗಳನ್ನು ಪೇಸ್ಟ್ ಮಾಡಿ ವಾಸನೆ ನೋಡಿದರೆ ಸಾಕು ಕಟ್ಟಿದ ಮೂಗಿಗೆ ಪರಿಹಾರ ಸಿಗುವುದು.

ದೊಡ್ಡಪತ್ರೆ ನೋವು ನಿವಾರಕ ಗುಣಗಳನ್ನು ಹೊಂದಿದ್ದು, ಹಲ್ಲುನೋವು, ತಲೆನೋವು ಮತ್ತು ದೇಹದ ನೋವಿನಿಂದ ಪರಿಹಾರ ನೀಡುತ್ತದೆ. ದೊಡ್ಡಪತ್ರೆ ಎಲೆಯ ಪೇಸ್ಟ್ ಅನ್ನು ನೋವಿನ ಪ್ರದೇಶದ ಮೇಲೆ ಹಚ್ಚಿದರೆ ಊತ ಕಡಿಮೆಯಾಗಿ ನೋವು ಗುಣವಾಗುತ್ತದೆ. ಹೊಟ್ಟೆ ನೋವು ಕಾಣಿಸಿಕೊಂಡರೆ ದೊಡ್ಡಪತ್ರೆ ಎಲೆಗಳಿಗೆ ಇಂಗು, ಕಪ್ಪು ಉಪ್ಪು ಬೆರೆಸಿ ಉಗುರು ಬೆಚ್ಚಗಿನ ನೀರು ಕುಡಿದರೆ ತಕ್ಷಣ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಹೃದಯಾಘಾತ ತಡೆಯುವ ಸಂಜೀವಿನಿ ಹಿತ್ತಲಲ್ಲೇ ಸಿಗುವ ಈ ಎಲೆ! ಜಜ್ಜಿ ರಸ ಮಾಡಿ ಕುಡಿದರೇ ಶುಗರ್‌ ಕೂಡ ಹೆಚ್ಚಾಗಲ್ಲ..

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News