ಹತ್ತಿರವಾಯಿತು ಮಹಾ ಪ್ರಳಯದ ದಿನ !ಭೂಪಟದಿಂದಲೇ ಮಾಯವಾಗಲಿದೆ ಈ ದೇಶ !ಮನೆ ಮಠ ಖಾಲಿ ಮಾಡಿ ತೆರಳುವಂತೆ ದೇಶವಾಸಿಗಳಿಗೆ ಸೂಚನೆ

ಆಸ್ಟ್ರೇಲಿಯಾದ ಈಶಾನ್ಯ ಭಾಗದಲ್ಲಿರುವ ತುವಾಲು ದ್ವೀಪವು ಜಾಗತಿಕ ತಾಪಮಾನದಿಂದ ಸಮುದ್ರದೊಳಗೆ ಸೇರುತ್ತಿದೆ.ಸಮುದ್ರದ ನೀರಿನಲ್ಲಿ ನಿರಂತರವಾಗಿ  ಈ ದ್ವೀಪ ಮುಳುಗುತ್ತಿದೆ.
 

ಮಹಾ ಪ್ರಳಯದ ದಿನಗಳು ಸಮೀಪಿಸುತ್ತಿವೆ ಎಂದು ಹಲವು ಜ್ಯೋತಿಷಿಗಳು, ಭವಿಷ್ಯಕಾರರು ದಿನಾಂಕಗಳನ್ನು ಹೇಳುತ್ತಲೇ ಇದ್ದಾರೆ. ಇದೀಗ ಈ ದೇಶದ ಮೇಲೆ ಪ್ರಳಯದ ಭೀತಿ ಕಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ತುವಾಲು ದ್ವೀಪವು ಪೆಸಿಫಿಕ್ ಮಹಾಸಾಗರದಲ್ಲಿ ನೆಲೆಗೊಂಡಿರುವ ದೇಶವಾಗಿದ್ದು, ಕೆಲವೇ ವರ್ಷಗಳಲ್ಲಿ ವಿಶ್ವ ಭೂಪಟದಿಂದ ಕಣ್ಮರೆಯಾಗುತ್ತದೆ. ಈ ದೇಶ ದಿನೇ ದಿನೇ ಹಂತ ಹಂತವಾಗಿ ವಿನಾಶದತ್ತ ಸಾಗುತ್ತಿದ್ದು ಮುಂದೊಂದು ದಿನ ಸಂಪೂರ್ಣ ನಾಶವಾಗಲಿದೆ.  

2 /6

ಆಸ್ಟ್ರೇಲಿಯಾದ ಈಶಾನ್ಯ ಭಾಗದಲ್ಲಿರುವ ತುವಾಲು ದ್ವೀಪವು ಜಾಗತಿಕ ತಾಪಮಾನದಿಂದ ಸಮುದ್ರದೊಳಗೆ ಸೇರುತ್ತಿದೆ.ಸಮುದ್ರದ ನೀರಿನಲ್ಲಿ ನಿರಂತರವಾಗಿ  ಈ ದ್ವೀಪ ಮುಳುಗುತ್ತಿದೆ.  

3 /6

ವ್ಯಾಟಿಕನ್ ಸಿಟಿಯ ನಂತರ ತುವಾಲು ದ್ವೀಪವು ವಿಶ್ವದಲ್ಲೇ ಕಡಿಮೆ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಇಲ್ಲಿ ಕೇವಲ 11 ಸಾವಿರ ಜನರು ವಾಸಿಸುತ್ತಿದ್ದಾರೆ. ತಮ್ಮ ಜೀವ ಮತ್ತು ಮುಂದಿನ ಪೀಳಿಗೆಯ ಜೀವಗಳನ್ನು ಉಳಿಸಿಕೊಳ್ಳಲು ಇಲ್ಲಿಂದ ವಲಸೆ ಹೋಗುತ್ತಿದ್ದಾರೆ. ಗಬೇಕಾದವರು. ಇದು ಅವರಿಗೆ ಇರುವ ಏಕೈಕ ಆಯ್ಕೆಯಾಗಿದೆ.  

4 /6

9 ಸಣ್ಣ ಉಂಗುರದ ಆಕಾರದ ದ್ವೀಪಗಳಿರುವ ತುವಾಲು ದೇಶದ ಸರಾಸರಿ ಎತ್ತರವು ಸಮುದ್ರ ಮಟ್ಟದಿಂದ ಕೇವಲ 2 ಮೀಟರ್ ಅಷ್ಟೇ. ಕಳೆದ ಮೂರು ದಶಕಗಳಲ್ಲಿ ತುವಾಲು ಸಮುದ್ರ ಮಟ್ಟವು 15 ಸೆಂಟಿಮೀಟರ್‌ಗಳಷ್ಟು ಏರಿಕೆಯಾಗಿದೆ.   

5 /6

NASA ಪ್ರಕಾರ, ತುವಾಲುವಿನ ಅರ್ಧದಷ್ಟು ಭಾಗವು 2050 ರ ವೇಳೆಗೆ ಸಂಪೂರ್ಣ ಮುಳುಗಡೆಯಾಗುತ್ತದೆ. ಈ ಕಾರಣದಿಂದಾಗಿ 2023ರಲ್ಲಿ ತುವಾಲು ಮತ್ತು ಆಸ್ಟ್ರೇಲಿಯಾ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಇದರ ಅಡಿಯಲ್ಲಿ, 2025 ರಿಂದ ಪ್ರತಿ ವರ್ಷ, ಆಸ್ಟ್ರೇಲಿಯಾಕ್ಕೆ ಇಲ್ಲಿನ 280 ಜನರು ಶಾಶ್ವತವಾಗಿ ಸ್ಥಳಾಂತರಗೊಳ್ಳುತ್ತಾರೆ. ಇದರಿಂದಾಗಿ ದೇಶ ಮುಳುಗುವ ಮೊದಲು ಎಲ್ಲರೂ ಸುರಕ್ಷಿತ ಧಾಮ ಸೇರುತ್ತಾರೆ.   

6 /6

ತುವಾಲುದಲ್ಲಿ, ಉಪ್ಪು ನೀರು ಅಂತರ್ಜಲವನ್ನು ಕಲುಷಿತಗೊಳಿಸಿದೆ. , ಇದು ಸಿಹಿನೀರಿನ ಕೊರತೆಗೆ ಕಾರಣವಾಗುತ್ತದೆ. ಇಲ್ಲಿ ಮಳೆ ನೀರನ್ನು ಸಂಗ್ರಹಿಸಿ ತೊಟ್ಟಿಗಳಲ್ಲಿ ಇಟ್ಟು ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ಬೆಳೆಯುತ್ತಾರೆ. ಇಲ್ಲಿ ತೀವ್ರ ನೀರಿನ ಸಮಸ್ಯೆ ಇದೆ.