ಹೀನಾಯ ಸೋಲಿಗೆ ತೆರಬೇಕಾಗುತ್ತಿದೆ ಬೆಲೆ : ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಿಸಿಸಿಐ ಕಟ್ಟುನಿಟ್ಟಿನ ಕ್ರಮ :ಕ್ರಿಕೆಟಿಗರ ಕುಟುಂಬಗಳಿಗೆ ಹೊಸ ನಿಯಮ

ಭಾರತೀಯ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮ ರೂಪಿಸಲು ಬಿಸಿಸಿಐ ಮುಂದಾಗಿದೆ ಎಂಬ ಸುದ್ದಿ ಬಂದಿದೆ.ಈ ನಿಯಮದ ಪ್ರಕಾರ ಆಟಗಾರರ ಪತ್ನಿಯರು ಯಾವುದೇ ಪ್ರವಾಸದಲ್ಲಿ ಅವರೊಂದಿಗೆ ಹೋಗಲು ಸಾಧ್ಯವಾಗುವುದಿಲ್ಲ.

Written by - Ranjitha R K | Last Updated : Jan 14, 2025, 11:38 AM IST
  • ಭಾರತೀಯ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮ
  • ಶನಿವಾರ ನಡೆದ ಸಭೆ ತೀರ್ಮಾನ
  • ಗಂಭೀರ್ ಮ್ಯಾನೇಜರ್ ವಿರುದ್ಧವೂ ಕ್ರಮ ಕೈಗೊಳ್ಳಬಹುದು
ಹೀನಾಯ ಸೋಲಿಗೆ ತೆರಬೇಕಾಗುತ್ತಿದೆ ಬೆಲೆ : ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಿಸಿಸಿಐ ಕಟ್ಟುನಿಟ್ಟಿನ ಕ್ರಮ :ಕ್ರಿಕೆಟಿಗರ ಕುಟುಂಬಗಳಿಗೆ ಹೊಸ ನಿಯಮ  title=

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡ ನಂತರ ತಂಡದ  ನಾಯಕ, ಆಟಗಾರರು ಮತ್ತು ತರಬೇತುದಾರರು ಕ್ರಿಕೆಟ್ ಪ್ರೇಮಿಗಳ ಟೀಕೆಗೆ ಗುರಿಯಾಗಬೇಕಾಯಿತು. ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ಇದಾದ ನಂತರ ಭಾರತೀಯ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮ ರೂಪಿಸಲು ಬಿಸಿಸಿಐ ಮುಂದಾಗಿದೆ ಎಂಬ ಸುದ್ದಿ ಬಂದಿದೆ.ಈ ನಿಯಮದ ಪ್ರಕಾರ ಆಟಗಾರರ ಪತ್ನಿಯರು ಯಾವುದೇ ಪ್ರವಾಸದಲ್ಲಿ ಅವರೊಂದಿಗೆ ಹೋಗಲು ಸಾಧ್ಯವಾಗುವುದಿಲ್ಲ. 

ಶನಿವಾರ ನಡೆದ ಸಭೆ : 
ಟೀಂ ಇಂಡಿಯಾ ಸೋಲಿನ ಬಳಿಕ ಬಿಸಿಸಿಐ ಸಭೆ ಆಯೋಜಿಸಿತ್ತು. ಮುಂಬೈನಲ್ಲಿ ಶನಿವಾರ ನಡೆದ ಸಭೆಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಉಪಸ್ಥಿತರಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಮಂಡಳಿಯು ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗೆ ಹೊಸ ಮಾರ್ಗಸೂಚಿಗಳನ್ನು ಸಿದ್ದಪಡಿಸುತ್ತಿದೆ. ಆಟಗಾರರ ಕುಟುಂಬಗಳ ಬಗ್ಗೆಯೂ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಇಡೀ 45 ದಿನಗಳ ವಿದೇಶಿ ಪ್ರವಾಸದಲ್ಲಿ  ಕ್ರಿಕೆಟಿಗರ ಪತ್ನಿಯರು ಅವರೊಂದಿಗೆ ತೆರಳುವಂತಿಲ್ಲ. 

ಇದನ್ನೂ ಓದಿ : ರೋಹಿತ್, ವಿರಾಟ್‌ಗೆ ಮತ್ತೆ ಅವಕಾಶ ಸಿಗುತ್ತಾ? ಬಿಸಿಸಿಐ ತೆಗೆದುಕೊಂಡ ನಿರ್ಧಾರ ಏನು! ।

ಮಾಧ್ಯಮ ವರದಿಗಳ ಪ್ರಕಾರ, ಆಟಗಾರರನ್ನು ಗರಿಷ್ಠ ಎರಡು ವಾರಗಳವರೆಗೆ ಕುಟುಂಬದೊಂದಿಗೆ ಇರಿಸಲಾಗುತ್ತದೆ. ಅಂದರೆ 2019ರ ಮೊದಲು ಇದ್ದ ನಿಯಮಗಳು ಮತ್ತೊಮ್ಮೆ ಅನ್ವಯಿಸುತ್ತವೆ. ವಿದೇಶಿ ಪ್ರವಾಸದಲ್ಲಿರುವಾಗ ಆಟಗಾರರೊಂದಿಗೆ  ಕುಟುಂಬ ಸದಸ್ಯರು ಉಳಿದುಕೊಳ್ಳುವುದರಿಂದ ಅದು ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಆಟಗಾರರ ಕುಟುಂಬಗಳು ವಿದೇಶಿ ಪ್ರವಾಸಗಳಲ್ಲಿ 14 ದಿನಗಳ ಕಾಲ ಮಾತ್ರ ಒಟ್ಟಿಗೆ ಇರಲು ಅವಕಾಶ ನೀಡಲಾಗುತ್ತದೆ. 

ಇದಲ್ಲದೇ ಗಂಭೀರ್ ಮ್ಯಾನೇಜರ್ ವಿರುದ್ಧವೂ ಕ್ರಮ ಕೈಗೊಳ್ಳಬಹುದು.ತಂಡದ ಕೋಚ್ ಆಗಿರುವ ಗೌತಮ್ ಗಂಭೀರ್ ಮ್ಯಾನೇಜರ್ ಗೌರವ್ ಅರೋರಾ ಸದಾ ಗಂಭೀರ್ ಜೊತೆಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ಮ್ಯಾನೇಜರ್ ಗೌರವ್ ಅರೋರಾಗೆ ಗಂಭೀರ್  ಜೊತೆ ಹೋಟೆಲ್‌ನಲ್ಲಿ ಉಳಿಯಲು ಅಥವಾ ವಿಐಪಿ ಬಾಕ್ಸ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ. ಇದಲ್ಲದೇ ಯಾವುದೇ ಆಟಗಾರರು ವಿಮಾನದಲ್ಲಿ 150 ಕೆ.ಜಿ.ಗಿಂತ ಹೆಚ್ಚು ಲಗೇಜ್ ಹೊಂದಿದ್ದರೆ ಅದಕ್ಕೆ ಮಂಡಳಿ ಹಣ ನೀಡುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News