Virat Kohli Anushka Sharma : ಬಿಡುವಿಲ್ಲದ ಸಮಯ ಮತ್ತು ಕೆಲಸಗಳಿಂದ ಹೊರ ಬಂದಿರುವ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮಗಳು ವಮಿಕಾ ಅವರೊಂದಿಗೆ ಉತ್ತರಾಖಂಡ್ನ ನೈನಿತಾಲ್ಗೆ ಭೇಟಿ ನೀಡಿದ್ದಾರೆ. ಈ ಕುರಿತ ದಂಪತಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅನುಷ್ಕಾ, ವಿರಾಟ್ ಕೊಹ್ಲಿ ಪ್ರಸ್ತುತ ಉತ್ತರಾಖಂಡದಲ್ಲಿ ತಮ್ಮ ಪುಟ್ಟ ಮಗಳು ವಾಮಿಕಾ ಕೊಹ್ಲಿಯೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ನೈನಿತಾಲ್ನ ಕೈಂಚಿ ಧಾಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ, ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ತೆಗೆಸಿಕೊಂಡ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಇನ್ನು ಉತ್ತರಾಖಂಡ್ನ ಬೆಟ್ಟಗಳಲ್ಲಿ ಚಳಿಗಾಲವನ್ನು ಈ ಸ್ಟಾರ್ ಜೋಡಿ ಆನಂದಿಸುತ್ತಿದೆ.
ಇದನ್ನೂ ಓದಿ: ರಿಯಲ್ ಸ್ಟಾರ್ ಕನಸು ಏನ್ ಗೊತ್ತಾ..! ಫ್ಯಾನ್ಸ್ ಮುಂದೆ ಉಪ್ಪಿ ಮನದ ಮಾತು
#viratkholi and #AnushkaSharma visit Kainchi Dham in #Uttarakhand with their little one.#Cricket #Bollywood @imVkohli @AnushkaSharma pic.twitter.com/cj8Ttt7O3H
— CricketCountry (@cricket_country) November 17, 2022
ವಿರಾಟ್ ದಂಪತಿ ಜೊತೆ ಫೋಟೋ ತೆಗೆಸಿಕೊಂಡಿರುವ ಅವರ ಅಭಿಮಾನಿಗಳು ಟ್ವಿಟರ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿರುಷ್ಕಾ ಆಶ್ರಮದ ಜನರಿಗೆ ಕಂಬಳಿಗಳನ್ನು ವಿತರಿಸುವುದನ್ನು ಕಾಣಬಹುದು. ಅನುಷ್ಕಾ ಮತ್ತು ವಿರಾಟ್ ಜಾಕೆಟ್ಗಳು, ಕೋಟ್ಗಳು, ಮಫ್ಲರ್ಗಳು, ಸ್ವೆಟರ್ಗಳು ಮತ್ತು ಬೀನಿ ಕ್ಯಾಪ್ಗಳನ್ನು ಒಳಗೊಂಡಂತೆ ಬೆಚ್ಚಗಿನ ಬಟ್ಟೆಗಳಲ್ಲಿ ಸುತ್ತಿಕೊಂಡಿರುವುದನ್ನು ನೋಡಬಹುದು.
I am grateful to our founder @HanumanDassGD and our organisation @GoDharmic for sharing Maharajis prasad all over the world.I sit here at Kakrighat, Neem Karoli Baba temple with @imVkohli and @AnushkaSharma content to feel the peace and unconditional love of Neem Karoli Baba pic.twitter.com/wlGM0osia9
— Martand dass (@mayankbhadouri5) November 18, 2022
ಇತ್ತೀಚೆಗೆ, ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತರ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಿಂದ ಮುಂಬೈಗೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಮರಳಲಿದ್ದಾರೆ. ಇನ್ನು ಅನುಷ್ಕಾ 2021 ರಲ್ಲಿ ಹೆರಿಗೆ ನಂತರ ಸಿನಿ ಪ್ರಯಣವನ್ನು ಪುನರಾರಂಭಿಸಿದ್ದಾರೆ. 2018 ರಲ್ಲಿ ಶಾರುಖ್ ಖಾನ್ ಅವರೊಂದಿಗೆ ಜೀರೋದಲ್ಲಿ ಕೊನೆಯದಾಗಿ ಅನುಷ್ಕಾ ನಟಿಸಿದ್ದರು. ಸದ್ಯ ನಟ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಚಕ್ದಾ ಎಕ್ಸ್ಪ್ರೆಸ್ಗಾಗಿ ಚಿತ್ರೀಕರಣ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.