KSRP Constable Recruitment 2024: ಪೊಲೀಸ್‌ ಇಲಾಖೆಯ 2400 KSRP ಕಾನ್ಸ್‌ಟೇಬಲ್‌ ನೇಮಕಕ್ಕೆ ಸರ್ಕಾರ ಆದೇಶ

KSRP Constable Recruitment 2024: ಪೊಲೀಸ್‌ ಇಲಾಖೆಯ ಸಶಸ್ತ್ರ ಮೀಸಲು ಪಡೆಯಲ್ಲಿ 2 ಹೊಸ ಬೆಟಾಲಿಯನ್ ಪ್ರಾರಂಭಕ್ಕೆ ರಾಜ್ಯ ಸರ್ಕಾರವು ಹಸಿರು ನಿಶಾನೆ ನೀಡಿದ್ದು, ದೇವನಹಳ್ಳಿ ಬಳಿ 100 ಎಕರೆ, KGF ಬಳಿ 50 ಎಕರೆ ಸ್ಥಳವನ್ನು ಗುರುತಿಸಲಾಗಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ. 

Written by - Puttaraj K Alur | Last Updated : Dec 3, 2024, 09:57 PM IST
  • ನಿರುದ್ಯೋಗಿ ಯುವಕ-ಯುವತಿಯರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದ ರಾಜ್ಯ ಸರ್ಕಾರ
  • ಬರೋಬ್ಬರಿ 2400 KSRP ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಕ್ಕೆ ಪೊಲೀಸ್‌ ಇಲಾಖೆಗೆ ಆದೇಶ
  • KSRP ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಅರ್ಹತೆ ಏನು?
KSRP Constable Recruitment 2024: ಪೊಲೀಸ್‌ ಇಲಾಖೆಯ 2400 KSRP ಕಾನ್ಸ್‌ಟೇಬಲ್‌ ನೇಮಕಕ್ಕೆ ಸರ್ಕಾರ ಆದೇಶ title=
KSRP Constable Recruitment 2024

KSRP Constable Recruitment 2024: ರಾಜ್ಯ ಸರ್ಕಾರವು SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಬರೋಬ್ಬರಿ 2400 KSRP ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಕ್ಕೆ ಪೊಲೀಸ್‌ ಇಲಾಖೆಗೆ ಆದೇಶ ನೀಡಲಾಗಿದೆ. ಪೊಲೀಸ್‌ ಇಲಾಖೆಯ ಸಶಸ್ತ್ರ ಮೀಸಲು ಪಡೆಯಲ್ಲಿ 2 ಹೊಸ ಬೆಟಾಲಿಯನ್ ಪ್ರಾರಂಭಕ್ಕೆ ರಾಜ್ಯ ಸರ್ಕಾರವು ಹಸಿರು ನಿಶಾನೆ ನೀಡಿದ್ದು, ದೇವನಹಳ್ಳಿ ಬಳಿ 100 ಎಕರೆ, KGF ಬಳಿ 50 ಎಕರೆ ಸ್ಥಳವನ್ನು ಗುರುತಿಸಲಾಗಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ. 

ಸಶಸ್ತ್ರ ಮೀಸಲು ಪಡೆ (KSRP)ಯಲ್ಲಿ ಹೊಸದಾಗಿ 2400 ಪೊಲೀಸ್‌ ಸಿಬ್ಬಂದಿಗಳ 2 ಬೆಟಾಲಿಯನ್‌ಗಳ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಸರ್ಕಾರ ಆದೇಶಿಸಿದೆ. KSRP ಪಡೆಯಲ್ಲಿ ಇಂಡಿಯನ್ ಬೆಟಾಲಿಯನ್‌ಗಳನ್ನು (IRB) ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ KSRP ವಿಭಾಗದ ಉಮೇಶ್ ಕುಮಾರ್‌ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಗ್ರೀನ್‌ ಸಿಗ್ನಲ್ ನೀಡಿದೆ. ಪ್ರಸ್ತುತ 12 KSRP ಹಾಗೂ 2 IRB ಬೆಟಾಲಿಯನ್‌ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿದಂತೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್‌ಗಳ ಅಗತ್ಯತೆ ಇತ್ತು. ಈ ಹಿನ್ನೆಲೆ ಹೊಸ ಬೆಟಾಲಿಯನ್‌ಗಳನ್ನು ಸಿದ್ಧತೆಗೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿ ರಾಜ್ಯ ಪತ್ರ ಬರೆದಿದೆ ಅಂತಾ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳ ಜಾಮೀನು ಅರ್ಜಿ

ಈ ಬೆಟಾಲಿಯನ್‌ಗಳಿಗೆ ಗುರುತಿಸಲಾದ ಸ್ಥಳಗಳಲ್ಲಿ ತರಬೇತಿ ಹಾಗೂ ವಸತಿ ಸೇರಿ ಇತರೆ ಸೌಲಭ್ಯಗಳನ್ನು ಸಿಬ್ಬಂದಿಗಳಿಗೆ ಕಲ್ಪಿಸಲಾಗುತ್ತದೆ. ತಲಾ ಬೆಟಾಲಿಯನ್‌ನಲ್ಲಿ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ ಒಟ್ಟು 2400 ಪೊಲೀಸರ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಆದೇಶ ಹಿನ್ನೆಲೆ ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಶುರುಮಾಡಲಿದ್ದು, ಸರ್ಕಾರಿ ಸೇವೆ ಸೇರಲು ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳು ಬೇಕಾದ ಸಿದ್ಧತೆ ಮಾಡಿಕೊಳ್ಳಬಹುದು.

ಅಧಿಸೂಚನೆ & ಅರ್ಜಿ ಪ್ರಕ್ರಿಯೆ ಆರಂಭ ಯಾವಾಗ?

ಪ್ರಸ್ತುತ ಸರ್ಕಾರ ನೇಮಕಕ್ಕೆ ಆದೇಶ ನೀಡಿದ್ದು, ಈ ಹುದ್ದೆಗಳಿಗೆ ಮೀಸಲಾತಿ, ವೃಂದ, ನಿಯಮ ಹೀಗೆ ಎಲ್ಲಾದರ ಕುರಿತ ಕರಡು ಅಧಿಸೂಚನೆ ಸಿದ್ಧಪಡಿಸಬೇಕಾಗುತ್ತದೆ. ನಂತರ ಇದಕ್ಕೆ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಬಿಡುಗಡೆ ಮಾಡುವ ಮೂಲಕ ಅರ್ಜಿ ಸ್ವೀಕಾರ ಆರಂಭಿಸಲಾಗುತ್ತದೆ. ಈ ಪ್ರಕ್ರಿಯೆಗೆ 1-2 ತಿಂಗಳ ಕಾಲಾವಕಾಶ ಬೇಕಾಗುತ್ತದೆ.

ಇದನ್ನೂ ಓದಿ:  ಯತ್ನಾಳ್‌ ಉಚ್ಛಾಟನೆಗೆ ಬಿಜೆಪಿ ನಾಯಕರ ಒತ್ತಡ

KSRP ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಅರ್ಹತೆ

* SSLC ಅಥವಾ 10ನೇ ತರಗತಿ ಪಾಸ್‌ ಮಾಡಿರುವ ಅಭ್ಯರ್ಥಿಗಳು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
* ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, SC/ST, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News