ಲಕ್ಷಾಂತರ ತೆರಿಗೆದಾರರಿಗೆ ಗುಡ್ ನ್ಯೂಸ್: ಶೀಘ್ರವೇ ಹೊಸ ತೆರಿಗೆ ಪದ್ಧತಿ ಘೋಷಣೆ: ತೆರಿಗೆ ವಿನಾಯಿತಿ ಸಾಧ್ಯತೆ!

New Tax Regime: ಬಜೆಟ್'ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಮೇಲೆ ಹೆಚ್ಚು ಗಮನಹರಿಸಬಹುದು. ವಿಶೇಷವಾಗಿ ಬೆಲೆ ಏರಿಕೆಯಿಂದ ಬೇಸರಗೊಂಡಿರುವ ಉದ್ಯೋಗಿಗಳು ಮತ್ತು ತೆರಿಗೆದಾರರಿಗೆ ಹೊಸ ತೆರಿಗೆ ವಿನಾಯಿತಿ ನೀಡಬಹುದು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Dec 19, 2024, 07:48 AM IST
  • ಹಳೆಯ ತೆರಿಗೆ ಪದ್ದತಿಯಲ್ಲಿ ಇಪಿಎಫ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.
  • ಇದು ಉದ್ಯೋಗದಾತರಿಂದ ಫಾರ್ಮ್ 16ರಲ್ಲಿ ಕಡಿತವೂ ಸೇರಿದೆ.
  • 1.5 ಲಕ್ಷ ರೂಪಾಯಿವರೆಗಿನ ತೆರಿಗೆ ವಿನಾಯಿತಿಯನ್ನು ಒಳಗೊಂಡಿದೆ.
ಲಕ್ಷಾಂತರ ತೆರಿಗೆದಾರರಿಗೆ ಗುಡ್ ನ್ಯೂಸ್: ಶೀಘ್ರವೇ ಹೊಸ ತೆರಿಗೆ ಪದ್ಧತಿ ಘೋಷಣೆ: ತೆರಿಗೆ ವಿನಾಯಿತಿ ಸಾಧ್ಯತೆ! title=

New Tax Regime: 2025ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಮೇಲೆ ಹೆಚ್ಚು ಗಮನಹರಿಸಬಹುದು. ವಿಶೇಷವಾಗಿ ಬೆಲೆ ಏರಿಕೆಯಿಂದ ಬೇಸರಗೊಂಡಿರುವ ಉದ್ಯೋಗಿಗಳು ಮತ್ತು ತೆರಿಗೆದಾರರಿಗೆ ಕೆಲವು ರಿಯಾಯತಿ ನೀಡುವತ್ತ ಚಿತ್ತವರಿಸಬಹುದು. ಅದಕ್ಕಾಗಿ ಹೊಸ ತೆರಿಗೆ ಪದ್ದತಿಯನ್ನು ಪರಿಚಯಿಸಿ ಅದರಲ್ಲಿ ಹೊಸ ತೆರಿಗೆ ವಿನಾಯಿತಿ ನೀಡಬಹುದು ಎಂದು ಹೇಳಲಾಗುತ್ತಿದೆ. 

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಹೊಸ ತೆರಿಗೆ ಪದ್ದತಿಯಲ್ಲಿ ಎಲ್ಲಾ ಸ್ಲ್ಯಾಬ್ ಗಳಿಗೆ EPF (ಉದ್ಯೋಗಿಗಳ ಭವಿಷ್ಯ ನಿಧಿ) ಅನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ. ಈ ಮೂಲಕ ಹೊಸ ತೆರಿಗೆ ಪದ್ದತಿಯನ್ನು ಹೆಚ್ಚು ಹೆಚ್ಚು ಜನರು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಗಮನಹರಿಸಲಿದೆ. 

ಇದನ್ನೂ ಓದಿ- ಸೇವಿಂಗ್ಸ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ TAX ಬೀಳೋದು ಗ್ಯಾರಂಟಿ..!

2023ರಿಂದ ಸರ್ಕಾರವು ಹೊಸ ತೆರಿಗೆ ಪದ್ದತಿಯನ್ನು ಡಿಫಾಲ್ಟ್ ಮಾಡಿರುವುದು ನಿಮಗೆ ಗೊತ್ತೇ ಇದೆ. ಈಗ ಮುಂಬರುವ ಬಜೆಟಿನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಘೋಷಣೆ ಮಾಡಿ ಅದಕ್ಕೆ ಹೆಚ್ಚೆಚ್ಚು ಉದ್ಯೋಗಿಗಳು ಮತ್ತು ನೌಕರರಿಗೆ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಮೇಲೆ ವಿನಾಯಿತಿ ನೀಡುವ ಸಾಧ್ಯತೆಗಳು ಇವೆ. 

ಇದನ್ನೂ ಓದಿ- ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!

ಹಳೆಯ ತೆರಿಗೆ ಪದ್ದತಿಯಲ್ಲಿ ಇಪಿಎಫ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಉದ್ಯೋಗದಾತರಿಂದ ಫಾರ್ಮ್ 16ರಲ್ಲಿ ಕಡಿತವೂ ಸೇರಿದೆ. 1.5 ಲಕ್ಷ ರೂಪಾಯಿವರೆಗಿನ ತೆರಿಗೆ ವಿನಾಯಿತಿಯನ್ನು ಒಳಗೊಂಡಿದೆ. ತಜ್ಞರ ಪ್ರಕಾರ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇಪಿಎಫ್ ಸೇರ್ಪಡೆಯಲ್ಲಿ 80C ವಿಂಡೋವನ್ನು ತೆರೆಯುವ ಸಾಧ್ಯತೆ ಇದೆ. ಹಳೆಯ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ ಈಗ ಸರಳವಾಗಿ ಮತ್ತು ಹೆಚ್ಚಿನ ಕಡಿತಗಳಿಲ್ಲದೆ ಪರಿಚಯಿಸುವ ಸಾಧ್ಯತೆ ಇದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News