Tabu on Marriage : ಇತ್ತೀಚಿಗೆ ಚಿತ್ರರಂಗದಲ್ಲಿ ಮದುವೆಯ ಸದ್ದು ಜೋರಾಗಿಯೇ ಮೊಳಗುತ್ತಿದೆ. ಅನೇಕ ತಾರೆಯರು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಕೆಲವು ಹೀರೋ ಹೀರೋಯಿನ್ಗಳು ವಯಸ್ಸಾದರೂ ಮದುವೆ ಬಗ್ಗೆ ಮಾತನಾಡುತ್ತಲೇ ಇಲ್ಲ.. ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ.. ಇದೀಗ ಸಿಂಗಲ್ ಸ್ಟಾರ್ ನಟಿ ಒಬ್ಬರು ಮದುವೆ ಕುರಿತು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ..
ಚಿತ್ರರಂಗದ ಸೆಲೆಬ್ರಿಟಿಗಳು ಸಿನಿಮಾ ಮಾತ್ರವಲ್ಲದೆ ತಮ್ಮ ವೈಯಕ್ತಿಕ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವು ಯುವ ಸುಂದರಿಯರು ರಾತ್ರೋರಾತ್ರಿ ಸ್ಟಾರ್ ಆಗುತ್ತಿದ್ದಾರೆ.
ಇನ್ನು ಕೆಲವರು ಸಾಲು ಸಾಲು ಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಹಾಗೆಯೇ ಇನ್ನು ಕೆಲವು ಮುದ್ದಾದ ಹುಡುಗಿಯರು ಪ್ಯಾನ್ ಇಂಡಿಯಾ ನಾಯಕಿಯರಾಗಿ ಮಿಂಚುತ್ತಿದ್ದಾರೆ.
ಈ ನಡುವೆ ಕೆಲವರು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ಕೆಲವರು ಡೇಟಿಂಗ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಕೆಲವರು ಮದುವೆಯ ಬಗ್ಗೆ ಯೋಚಿಸದೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ವಯಸ್ಸಾದರೂ ಮದುವೆ, ಪ್ರೀತಿ ಇಲ್ಲದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಲವು ನಾಯಕಿಯರು ಒಂಟಿಯಾಗಿಯೇ ಉಳಿದಿದ್ದಾರೆ. ಈ ಪೈಕಿ ಬಿಟೌನ್ ಸುಂದರಿಯೊಬ್ಬರು ಇಂದಿಗೂ ಸಿಂಗಲ್...
ಐವತ್ತರ ಹರೆಯಕ್ಕೆ ಬಂದರೂ ಸ್ಟಿಲ್ ಸಿಂಗಲ್ ಈಕೆ.. ಇಂದಿಗೂ ತನ್ನ ವೈಯಾರದಿಂದ ಯುವ ನಾಯಕಿಯರನ್ನೂ ಬೆರಗುಗೊಳಿಸುತ್ತಿದ್ದಾಳೆ. ಹೌದು.. ಆಕೆ ಬೇರೆ ಯಾರೂ ಅಲ್ಲ.. ನಟಿ ಟಬು..
ಈಗ ಈ ಚೆಲುವೆಗೆ 50 ವರ್ಷ ದಾಟಿದೆ.. ಇನ್ನೂ ಹಾಟ್ ಲುಕ್ನಿಂದ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಿದ್ದಾಳೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಟಬು ಮದುವೆ ಕುರಿತು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ..
ವೈವಾಹಿಕ ಜೀವನ ಮನುಷ್ಯನ ಜೀವನವನ್ನು ನಿರ್ಧರಿಸುವುದಿಲ್ಲ. ನನ್ನ ಜೀವನವನ್ನು ಇತರರು ನಿರ್ಣಯಿಸುವುದು ನನಗೆ ಇಷ್ಟವಿಲ್ಲ ಅಂತ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಟಬು ಮದುವೆ ಬಗ್ಗೆ ಶಾಕಿಂಗ್ ಕಾಮೆಂಟ್ಗಳನ್ನು ಮಾಡಿದ್ದಾರೆ.
ಅಲ್ಲದೆ, ನನಗೆ ಮದುವೆಯ ಬಗ್ಗೆ ಆಸಕ್ತಿ ಇಲ್ಲ, ಪುರುಷನೊಂದಿಗೆ ಹಾಸಿಗೆ ಹಂಚಿಕೊಳ್ಳಲು ಮಾತ್ರ ಇಚ್ಛಿಸುತ್ತೇನೆ ಎನ್ನುತ್ತಾರೆ ಟಬು. ಸಿಂಗಲ್ ಆಗಿ ಖುಷಿಯ ಜೀವನ ನಡೆಸುತ್ತಿದ್ದರೂ ಕೆರಿಯರ್ ಕಡೆ ಹೆಚ್ಚು ಗಮನ ಹರಿಸಲು ಬಯಸುತ್ತೇನೆ ಎಂದಿದ್ದಾರೆ..