Mysore Dasara Jamboo Savari: ಮೈಸೂರು ದಸರಾ ಅಂಗವಾಗಿ ಶನಿವಾರ ವಿಜಯದಶಮಿಯಂದು ಅದ್ಧೂರಿ ಜಂಬೂ ಸವಾರಿ ನಡೆಯಲಿದೆ. ಇದಕ್ಕೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾದಾಗಿನಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಸಾಕು ಆನೆಗಳ ಬಳಿ ಫೋಟೋ, ಸೆಲ್ಫಿ, ರೀಲ್ಸ್ಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಈ ಬಾರಿ ಜಿಲ್ಲೆಗಳ ಸ್ತಬ್ದಚಿತ್ರಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು. ಮೈಸೂರು ದಸರಾ 2023 ಜಂಬೂಸವಾರಿಯಲ್ಲಿ ಮೇಳೈಸಿದ 49 ಸ್ತಬ್ಧ ಚಿತ್ರಗಳು, ಯಾವ್ಯಾವ ಜಿಲ್ಲೆಯವು.. ಏನೇನು ವಿಶೇಷತೆ ಓಲೈಸುತ್ತೆ. ಅವುಗಳ ಪ್ರಾಮುಖ್ಯತೆ ಏನು ಅಂತ ಹೇಳ್ತಿವಿ ಈ ಸ್ಟೋರಿ ನೋಡಿ...
Mysuru Dasara: ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ 1909 ಇಸವಿಯಿಂದ 1970 ರವರೆಗೆ ವಿದೇಶಗಳಲ್ಲಿ ಬಳಕೆಯಲ್ಲಿದ್ದ ವಿಂಟೇಜ್ ಕಾರುಗಳನ್ನ ಮೈಸೂರಿನ ಉದ್ಯಮಿ ಗೋಪಿನಾಥ್ ಶೆಣೈಎಂಬುವರು ಸಂಗ್ರಹ ಮಾಡಿ, ದಸರಾ ಹಿನ್ನೆಲೆ ಸಾರ್ವಜನಿಕ ಪ್ರದರ್ಶನ ಮಾಡಲಾಯಿತು.
ಕಾಂಗ್ರೆಸ್ ನಾಯಕರಿಗೆ ದುಡ್ಡು ಸಂಗ್ರಹಿಸುವ ಗುರಿ ನೀಡಿರುವುದಾಗಿ ಬಿಜೆಪಿಯ ಸಿ.ಟಿ.ರವಿಯವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಸಿ.ಟಿ.ರವಿಯವರ ಹೇಳಿಕೆಗಳು ಸದಾ ಸುಳ್ಳಿನಿಂದ ಕೂಡಿರುತ್ತದೆ. ಅವರ ಸುಳ್ಳು ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ರೀತಿಯ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದರು.
ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು. ಪ್ರಾತಃಕಾಲ 5.30 ರಿಂದ ಆರಂಭಗೊಂಡ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ಗಂಟೆ ವರೆಗೂ ನೆರವೇರಿತು. ಅರಮನೆಯ ಆವರಣದಲ್ಲಿ ಆಯುಧ ಪೂಜೆ ನಡೆಯಿತು.
ಸಾಂಸ್ಕೃತಿಕ ನಗರಿ ಮೈಸೂರು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಶ್ವವಿಖ್ಯಾತವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.