FD Rules: 2025ರ ಪ್ರಥಮ ಹಣಕಾಸು ನೀಸ್ತಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇನಿಡ್ಯಾ ರೆಪೋ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಸ್ಥಿರ ಠೇವಣಿ ಎಂದರೆ ಎಫ್‌ಡಿ ಬಡ್ಡಿದರಗಳನ್ನು ಕಡಿಮೆ ಮಾಡುವ ಬಗ್ಗೆಯೂ ಚರ್ಚೆಗಳು ತೀವ್ರಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಎಫ್‌ಡಿ ಹೂಡಿಕೆದಾರರು ವಾಣಿಜ್ಯ ಬ್ಯಾಂಕ್ ಗಳು ಎಫ್‌ಡಿ ಬಡ್ಡಿದಾರವನ್ನು ಪರಿಷ್ಕರಿಸುವ ಮೊದಲು ತಮ್ಮ ಅಸ್ತಿತ್ವದಲ್ಲಿರುವ ಎಫ್‌ಡಿ ಯೋಜನೆಗಳನ್ನು ಆಕಾಲಿಕವಾಗಿ ಹಿಂತೆಗೆದುಕೊಳ್ಳುವ ಮೊದಲು ಹೊಸ ನಿಯಮವನ್ನು ತಿಳಿದಿರುವುದು ಅತ್ಯಗತ್ಯ.
ಅವಧಿ ಪೂರ್ವ 'ಎಫ್‌ಡಿ' ಹಿಂಪಡೆಯುವಿಕೆಗೆ ದಂಡ:
ವಾಸ್ತವವಾಗಿ, ಹೂಡಿಕೆದಾರರು ಆಕಾಲಿಕವಾಗಿ ಹಿಂಪಡೆಯುವ ಎಫ್‌ಡಿಗೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಇದರಿಂದ ಎಫ್‌ಡಿ ಹೂಡಿಕೆದಾರರಿಗೆ ನಷ್ಟವಾಗುತ್ತದೆ. ಆದಾಗ್ಯೂ, ಎಫ್‌ಡಿ ಯನ್ನು ಆಕಾಲಿಕವಾಗಿ ಹಿಂಪಡೆಯುವಾಗ ಕೆಲವು ಷರತ್ತುಗಳ ಆಧಾರದ ಮೇಲೆ ದಂಡವನ್ನು ಮನ್ನಾ ಮಾಡಲಾಗುತ್ತದೆ.
ಇದನ್ನೂ ಓದಿ- Income Tax Notice: ಪತ್ನಿ ಕೈಯಲ್ಲಿ ಇಷ್ಟು ಹಣ ನೀಡಿದ್ರೂ ಬರಬಹುದು ಐಟಿ ನೊಟೀಸ್..!
ಇಂತಹ ಪರಿಸ್ಥಿತಿಯಲ್ಲಿ ಮಾತ್ರವೇ ಮನ್ನಾ ಆಗುತ್ತೆ ದಂಡ:
ಒಂದೊಮ್ಮೆ ನೀವು ಪ್ರಸ್ತುತ ಇರುವ ಎಫ್‌ಡಿ ಅನ್ನು ಹಿಂಪಡೆದು ಮತ್ತೆ ಅದೇ ಬ್ಯಾಂಕಿನಲ್ಲಿ ದೀರ್ಘಾವಧಿಗಾಗಿ ಮರು ಹೂಡಿಕೆ ಮಾಡಿದರೆ ಅಂತ ಸಂದರ್ಭದಲ್ಲಿ ದಂಡ ಮನ್ನಾ ಮಾಡಬಹುದು. ಹಾಗಾಗಿ, ನಿಮ್ಮ ಪ್ರಸ್ತುತ ಇರುವ 'ಸ್ಥಿರ ಠೇವಣಿ' ಅನ್ನು ಹಿಂಪಡೆಯುವ ಮೊದಲು ಹೂಡಿಕೆದಾರರು ಬ್ಯಾಂಕಿನ ದಂಡ ರಚನೆ, ಅಕಾಲಿಕ ಹಿಂಪಡೆಯುವಿಕೆ ಮೇಲೆ ಎಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ.
ಇದನ್ನೂ ಓದಿ- ಈ ಮಹಿಳೆಯರಿಗೆ 'ಗೃಹಲಕ್ಷ್ಮೀ' ಯೋಜನೆಯ ಹಣ ರದ್ದು: ಹೆಚ್ಚಿನ ಮಾಹಿತಿ ಇಲ್ಲಿದೆ!
ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಎಫ್‌ಡಿ ಅಕಾಲಿಕ ಹಿಂಪಡೆಯುವಿಕೆಗೆ ವಿಭಿನ್ನ ದಂಡಗಳನ್ನು ವಿಧಿಸುತ್ತದೆ. ಈ ದಂಡವು ಸಾಮಾನ್ಯವಾಗಿ 0.5% ರಿಂದ 1% ನಡುವೆ ಇರುತ್ತದೆ. ನಷ್ಟವನ್ನು ತಪ್ಪಿಸಲು ನೀವು ಯಾವ ಬ್ಯಾಂಕಿನಲ್ಲಿ ಎಫ್‌ಡಿ ಇರಿಸಿದ್ದೀರೋ ಆ ಬ್ಯಾಂಕಿನಲ್ಲಿ ಆಕಾಲಿಕವಾಗಿ ಎಫ್‌ಡಿ ಹಿಂಪಡೆಯಲು ಇರುವ ನಿಯಮವನ್ನು ಮೊದಲು ತಿಳಿಯಿರಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.