ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಮತದಾನ. ನಗರದ ಬಸವನಹಳ್ಳಿ ಶಾಲೆಯಲ್ಲಿ ಮತದಾನ. ಬಸವನಹಳ್ಳಿ ಶಾಲೆ ಮತಗಟ್ಟೆ ಸಂಖ್ಯೆ 200ರಲ್ಲಿ ಮತದಾನ. ಪತ್ನಿ, ತಾಯಿ, ಮಗನ ಜೊತೆ ಆಗಮಿಸಿ ವೋಟಿಂಗ್.
ಚುನಾವಣೆ ಮತ ಪ್ರಚಾರಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳು ಎದುರಾಳಿಗಳಿಗೆ ಪೈಪೋಟಿ ನೀಡುವಲ್ಲಿ ನಿರತರಾಗಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ ರಾಜಗೋಪಾಲನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಜೆಡಿಎಸ್ನ ಪಂಚರತ್ನ ಯೋಜನೆಗಳನ್ನು ಮನವರಿಕೆ ಮಾಡಿಸಿ ಮತ ಪ್ರಚಾರ ಮಾಡಿದರು.
ಮೋದಿ ರೋಡ್ ಶೋ ವೇಳೆ ಷಡ್ಯಂತ್ರಕ್ಕೆ ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.. ರೋಡ್ ಶೋ ವೇಳೆ ಆಂಬುಲೆನ್ಸ್ ಕಳಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ..
ಚಾಮರಾಜನಗರದಲ್ಲಿ ಸೋಮಣ್ಣ ಪರ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದಾರೆ.. ಪ್ರಚಾರದ ವೇಳೆ ಸಚಿವ ವಿ. ಸೋಮಣ್ಣ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.. ಕೂಡಲೇ ಸೋಮಣ್ಣನನ್ನ ಸುದೀಪ್ ಆಪ್ತ ಸಹಾಯಕ ರಕ್ಷಣೆ ಮಾಡಿದ್ದಾರೆ..
KR ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರ ಕಿರುತೆರೆ ನಟ-ನಟಿಯರ ಅಬ್ಬರದ ಪ್ರಚಾರ ನಡೆಸ್ತಿದ್ದಾರೆ.. ಹೆಬ್ಬಾಳು ಹೋಬಳಿಯ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತಿದ್ದಾರೆ..
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ಖಾಸಗಿ ಹೋಟೆಲ್ನಲ್ಲಿ ಪ್ರಣಾಳಿಕೆಗೆ ಅರಿಷಿಣ ಕುಂಕುಮವಿಟ್ಟು ಪೂಜೆ ಮಾಡಿದ ಬಳಿಕ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಿಲೀಸ್ ಮಾಡಿದ್ರು
ಕೆ.ಸಿ.ವೀರೇಂದ್ರ ಪಪ್ಪಿ ಕಾಂಗ್ರೆಸ್ ಸೇನೆಯೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಹಗಲಿರುಳು ಪ್ರಚಾರ ಮಾಡುತ್ತಿದ್ದಾರೆ. 25 ವರ್ಷಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಈ ಬಾರಿ "ಕೋಟೆಯ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ವೀರೇಂದ್ರ ಪಪ್ಪಿ ಶತಾಯಗತಾಯ ಹೋರಾಟ" ನಡೆಸುತ್ತಿದ್ದು ಬಿರು ಬಿಸಿಲಿನಲ್ಲಿಯೂ ಪ್ರಚಾರದಲ್ಲಿ ವೇಳೆ ನಮ್ಮ ಚಿತ್ರದುರ್ಗ ಜಿಲ್ಲಾ ವರದಿಗಾರರಾದ ಮಾಲತೇಶ್ ಅರಸ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.