ಪ್ರತಿದಿನ ಈ ಎಲೆಗಳನ್ನು ಜಗಿಯುವುದರಿಂದ ಹಳದಿ ಹಲ್ಲುಗಳು ಶಾಶ್ವತವಾಗಿ ಬಿಳಿಯಾಗುತ್ತವೆ..!

Teeth whitening tips : ಕೆಲವು ಸಸ್ಯಗಳ ಎಲೆಗಳು ಹಳದಿ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ. ಇವುಗಳು ಕಠಿಣ ಹಳದಿ ಹಲ್ಲುಗಳನ್ನು ಸಹ ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ.. ಪ್ರತಿದಿನ ಈ ಎಲೆಗಳನ್ನು ಅಗಿಯುವುದರಿಂದ ಶಾಶ್ವತವಾಗಿ ಹಳದಿ ಹಲ್ಲುಗಳು ಬಿಳಿಯಾಗುತ್ತವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jan 11, 2025, 09:13 AM IST
    • ಕೆಲವು ಸಸ್ಯಗಳ ಎಲೆಗಳು ಹಳದಿ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ.
    • ಕಠಿಣ ಹಳದಿ ಹಲ್ಲುಗಳನ್ನು ಸಹ ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ..
    • ಈ ಎಲೆಗಳನ್ನು ಅಗಿಯುವುದರಿಂದ ಶಾಶ್ವತವಾಗಿ ಹಳದಿ ಹಲ್ಲುಗಳು ಬಿಳಿಯಾಗುತ್ತವೆ..
ಪ್ರತಿದಿನ ಈ ಎಲೆಗಳನ್ನು ಜಗಿಯುವುದರಿಂದ ಹಳದಿ ಹಲ್ಲುಗಳು ಶಾಶ್ವತವಾಗಿ ಬಿಳಿಯಾಗುತ್ತವೆ..! title=

Home made teeth whitening paste : ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ವಿವಿಧ ರೀತಿಯ ಟೂತ್‌ ಪೆಸ್ಟ್‌ಗಳನ್ನು ಬಳಸಲಾಗುತ್ತದೆ. ಆದರೆ ಕೆಲವು ಸಸ್ಯಗಳ ಹಸಿರು ಎಲೆಗಳು ಹಳದಿ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ. ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಕೆಳಗೆ ನೀಡಿರುವ ಎಲೆಯನ್ನು ಅಗಿಯಿರಿ ಸಾಗು... ಇದು ಕಠಿಣ ಹಳದಿ ಹಲ್ಲುಗಳನ್ನೂ ಬೆಳ್ಳಗಾಗಿಸುತ್ತವೆ..

ಬೇವಿನ ಟೂತ್‌ಪೇಸ್ಟ್ ಯಾವಾಗಲೂ ಹಿರಿಯರ ಮೊದಲ ಆಯ್ಕೆಯಾಗಿದೆ. ಆಯುರ್ವೇದದಲ್ಲಿ ಬೇವಿನ ಎಲೆಗಳು ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಂಡುಬರುತ್ತವೆ.

ಇದನ್ನೂ ಓದಿ:ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವುದರಿಂದ ಆಗುವ ಪ್ರಯೋಜನಗಳು

ಬೇವಿನ ಎಲೆಯಲ್ಲಿರುವ ವಸ್ತುಗಳು ಹಲ್ಲುಗಳಲ್ಲಿನ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತವೆ. ನೋವು ಮತ್ತು ಉರಿಯೂತವನ್ನು ನಿವಾರಿಸುತ್ತದೆ. ಪ್ರತಿದಿನ ಬೇವಿನ ಎಲೆಗಳನ್ನು ಜಗಿಯುವುದರಿಂದ ನಿಮ್ಮ ಹಲ್ಲು ಮತ್ತು ವಸಡುಗಳನ್ನು ಆರೋಗ್ಯವಾಗಿಡಬಹುದು. ಅಲ್ಲದೆ, ಬೇವಿನ ಎಲೆಗಳನ್ನು ಜಗಿಯುವುದರಿಂದ ಹಲ್ಲುಗಳ ಮೇಲಿನ ಕಪ್ಪು ಮತ್ತು ಹಳದಿ ಕಲೆಗಳು ಕಡಿಮೆಯಾಗುತ್ತವೆ.

ಆಂಟಿಬ್ಯಾಕ್ಟೀರಿಯಲ್ ಮತ್ತು ನಂಜುನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ತುಳಸಿ ಎಲೆಗಳು ನಿಮ್ಮ ಬಾಯಿಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಸಿ ತುಳಸಿ ಎಲೆಗಳನ್ನು ಜಗಿಯುವುದರಿಂದ ನಿಮ್ಮ ಹಲ್ಲುಗಳು ಚೆನ್ನಾಗಿ ಸ್ವಚ್ಛವಾಗುತ್ತವೆ. ಇದರೊಂದಿಗೆ ಹಲ್ಲುಗಳ ಹಳದಿ ಬಣ್ಣವೂ ಕಡಿಮೆಯಾಗುತ್ತದೆ. ಒಸಡುಗಳ ಆರೋಗ್ಯವನ್ನು ಸುಧಾರಿಸಲು ನೀವು ತುಳಸಿ ಎಲೆಗಳನ್ನು ಸಹ ಅಗಿಯಬಹುದು.

ಇದನ್ನೂ ಓದಿ:ತೆಳ್ಳಗಾಗಬೇಕು ಎಂದು ಚಿಯಾ ಬೀಜಗಳನ್ನು ಇದರ ಜೊತೆಗೆ ಮಾತ್ರ ಸೇವಿಸಬೇಡಿ! ಸಣ್ಣ ಆಗುವ ಬದಲು ದೇಹ ಊದಿಕೊಳ್ಳುತ್ತಲೇ ಹೋಗುವುದು !

ಬೆಳಿಗ್ಗೆ ಎದ್ದ ನಂತರ ಮೊದಲನೆಯದು ಹಲ್ಲುಜ್ಜುವುದು. ಅದರ ನಂತರ, ಬೇವಿನ ಎಲೆ ಇಲ್ಲವೆ.. ತುಳಸಿ ಗಿಡದಿಂದ 5-6 ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಿಂದ ತೊಳೆಯಿರಿ. ನಂತರ ನಿಧಾನವಾಗಿ ಆ ಎಲೆಗಳನ್ನು ಅಗಿಯುವುದರಿಂದ ಕ್ರಮೇಣ ನಿಮ್ಮ ಹಳದಿ ಹಲ್ಲುಗಳು ಮಾಯವಾಗುತ್ತವೆ..

ಸೂಚನೆ: ಈ ಸುದ್ದಿಯಲ್ಲಿ ನೀಡಲಾದ ಎಲ್ಲಾ ವಿಷಯಗಳು ಕೇವಲ ಮಾಹಿತಿಗಾಗಿ ಮಾತ್ರ. ಇವುಗಳನ್ನು ಅಳವಡಿಕೊಳ್ಳುವುದಕ್ಕು ಮುನ್ನ ನಿಮ್ಮ ವೈದ್ಯರ ಅಭಿಪ್ರಾಯ ಪಡೆಯಿತಿ.. Zee Kannada News ಇದನ್ನು ಖಚಿತ ಪಡಿಸುವುದಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News