Vijay Hazare Trophy: ದೇವದತ್ ಪಡಿಕ್ಕಲ್ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡವು ಬರೋಡಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5 ರನ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ ಬಳಿಕ ಕರ್ನಾಟಕದ ಆಟಗಾರ ಪಡಿಕ್ಕಲ್ ಬೆಂಚ್ ಕಾದಿದ್ದರು. ಇದೀಗ ಅವರು ರಾಜ್ಯ ತಂಡಕ್ಕೆ ಮರಳಿದ್ದು, ಶನಿವಾರ ಶತಕ ಸಿಡಿಸುವ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.
ಇದನ್ನೂ ಓದಿ: ತಂದೆಯಂತೆ ಬ್ಯಾಟ್ ಹಿಡಿಯಲಿಲ್ಲವಾದರೂ ಸೌರವ್ ಗಂಗೂಲಿ ಮಗಳು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ, ಆಕೆಯ ಆಸ್ತಿ ಎಷ್ಟು ಗೊತ್ತಾ?
ವಡೋದರಾದ ಮೋತಿ ಬಾಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬರೋಡಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 281 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಆರಂಭಿಕ ಬ್ಯಾಟರ್ ಪಡಿಕ್ಕಲ್ 99 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್ ಸಹಿತ 102 ರನ್ ಗಳಿಸಿ ಮಿಂಚಿದರು. ಅನೀಶ್ ಕೆವಿ 52 ರನ್ ಗಳಿಸುವ ಮೂಲಕ ಪಡಿಕ್ಕಲ್‌ಗೆ ಸಾಥ್ ನೀಡಿದರು. ಸ್ಮರಣ್ ರವಿಚಂದ್ರನ್ 28, ಕೆ.ಶ್ರೀಜಿತ್ 28, ಅಭಿನವ್ ಮನೋಹರ್ 21, ಶ್ರೇಯಸ್ ಗೋಪಾಲ್ 16 ಮತ್ತು ಪ್ರಸಿದ್ ಕೃಷ್ಣ ಔಟಾಗದೆ 12 ರನ್ ಗಳಿಸಿ ತಂಡಕ್ಕೆ ನೆರವಾದರು.
ಈ ಗುರಿ ಬೆನ್ನತ್ತಿದ ಬರೋಡ 49.5 ಓವರ್‌ಗಳಲ್ಲಿ 276 ರನ್ ಗಳಿಸಿ ಆಲೌಟ್ ಆಯಿತು. ಬರೋಡ ಪರ ಶಾಶ್ವತ್ ರಾವತ್ (104) ಭರ್ಜರಿ ಶತಕ ಸಿಡಿಸಿದರು. ಅತಿತ್ ಶೇಠ್ 56, ಕೃನಾಲ್ ಪಾಂಡ್ಯ 30, ಭಾನು ಪಾನಿಯಾ 22, ಭಾರ್ಗವ್ ಭಟ್ 20 ಮತ್ತು ನಿನಾದ್ ಅಶ್ವಿನ್‌ಕುಮಾರ್ ರಥ್ವ 14 ರನ್ ಗಳಿಸಿದರು.
1️⃣8️⃣th domestic ton! ✅
Devdutt powered Karnataka's quarterfinal charge in the Quarter Final of #VijayHazareTrophy, setting the stage for a massive total! 💪#PlayBold #ನಮ್ಮRCB pic.twitter.com/GB6kg6r2t2
— Royal Challengers Bengaluru (@RCBTweets) January 11, 2025
ಇದನ್ನೂ ಓದಿ: ವಿರಾಟ್ ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾ ಆಟಗಾರ ಸ್ಯಾಮ್ ಹೇಳಿದ್ದೇನು? ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ!
ಆರ್‌ಸಿಬಿ ಫ್ಯಾನ್ಸ್ ಫುಲ್ ಖುಷ್!!
ಶತಕ ಬಾರಿಸುವ ಮೂಲಕ ಕರ್ನಾಟಕಕ್ಕೆ ಗೆಲುವು ತಂದುಕೊಟ್ಟ ಪಡಿಕ್ಕಲ್ ಬ್ಯಾಟಿಂಗ್ ನೋಡಿದ ಆರ್‌ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಏಕೆಂದರೆ 2025ರ ಮೆಗಾ ಹರಾಜಿನಲ್ಲಿ ಪಡಿಕ್ಕಲ್ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಪಡಿಕ್ಕಲ್ ಆರ್‌ಸಿಬಿ ತಂಡದ ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಅವರ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.