Stock Market Updates: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಇದರಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
Indian Economy Forecast: ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿ ಮುಂದುವರೆದಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ, 2022-23 ರಲ್ಲಿ ಬೆಳವಣಿಗೆ ದರವು ಶೇ. 7.2 ರಷ್ಟಿತ್ತು. ಈ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಚೀನಾದ ಬೆಳವಣಿಗೆಯ ದರವು ಶೇ 4.5 ರಷ್ಟಿತ್ತು.
ಮುಂದಿನ ವರ್ಷ ಶೇ 5ರಷ್ಟು ಪ್ರಗತಿ ಸಾಧಿಸಿದರೆ ದೇಶ ಅದೃಷ್ಟಶಾಲಿಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.ರಾಹುಲ್ ಗಾಂಧಿ ಅವರ ಜೊತೆಗಿನ ಮಾತುಕತೆ ವೇಳೆ ಅವರು ಈ ಅಭಿಪ್ರಾಯಪಟ್ಟಿದ್ದಾರೆ.
GDP Growth - GDP Data 2021-22: ಪ್ರಸಕ್ತ ಹಣಕಾಸು ವರ್ಷ ಅಂದರೆ 2021-22 ರಲ್ಲಿ GDP ಶೇ.9.2 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2020-21 ರಲ್ಲಿ, GDP (ಮೈನಸ್) -7.3 ಪ್ರತಿಶತದಷ್ಟಿತ್ತು.
RBI: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಶೇಕಡಾ 9.5 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಆರ್ಥಿಕತೆಯು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 6.6 ರಷ್ಟು ಮತ್ತು 2021-22 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 6 ರಷ್ಟು ವಿಸ್ತರಿಸುವ ನಿರೀಕ್ಷೆಯಿದೆ.
RBI Monetary Policy - ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹಣಕಾಸು ಸಮಿತಿಯ ಸಭೆಯ ಫಲಿತಾಂಶ ಪ್ರಕಟಗೊಂಡಿವೆ. ಆರ್ಬಿಐ ಮತ್ತೊಮ್ಮೆ ರೆಪೊ ದರವನ್ನು ಸ್ಥಿರವಾಗಿರಿಸಿದೆ. ಅಂದರೆ ರೆಪೊ ದರವು ಶೇ.4 ರಷ್ಟು ಮುಂದುವರೆಯಲಿದೆ. ಇದರರ್ಥ ನಿಮ್ಮ ಬ್ಯಾಂಕ್ EMI ಕಡಿಮೆಯಾಗುವುದಿಲ್ಲ.
India Growth Projection By IMF - ಕರೋನಾದ ಎರಡನೇ ಅಲೆ (Coronavirus Second Wave) ಭಾರತದ ಆರ್ಥಿಕತೆಯ (Indian Economy) ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವರದಿ ಈ ಅಂಶ ಬಹಿರಂಗಪಡಿಸಿದೆ.
ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2020 ರ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಒಟ್ಟಾರೆ ರಫ್ತು (ಸರಕು ಮತ್ತು ಸೇವೆಗಳು) 25.42% ರಷ್ಟು ಕುಸಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಸ್ವಾತಂತ್ರ್ಯದ ನಂತರದ ಕನಿಷ್ಠ ಮಟ್ಟವನ್ನು ಮುಟ್ಟಬಹುದು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಹೇಳಿದ್ದಾರೆ.ಆರ್ಥಿಕತೆಯನ್ನು ಮತ್ತೆ ಹಾದಿಯಲ್ಲಿ ತರಬೇಕು ಮತ್ತು ಜನರು ರೋಗಕಾರಕದೊಂದಿಗೆ ಬದುಕಲು ಸಿದ್ಧರಾಗಿರಬೇಕು ಎಂದು ಹೇಳಿದರು.
2020-21ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರ ಕೇವಲ ಶೇ..1.9ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ಮತ್ತು ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ನಿಶ್ಚಲತೆಯಿಂದಾಗಿ ಜಾಗತಿಕ ಆರ್ಥಿಕತೆಯು ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂದು IMF ಹೇಳಿದೆ.
ಭಾರತವು 2020-21ರಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 2 ರಷ್ಟನ್ನು ದಾಖಲಿಸಬಹುದು, 30 ವರ್ಷಗಳ ಹಿಂದೆ ಆರ್ಥಿಕತೆಯನ್ನು ಉದಾರೀಕರಣಗೊಳಿಸಿದ ನಂತರದ ನಿಧಾನಗತಿಯಾಗಿದೆ ಎಂದು ಫಿಚ್ ರೇಟಿಂಗ್ಸ್ ಶುಕ್ರವಾರ ಹೇಳಿದೆ, ಇದು ಕೊರೊನಾದ ನಂತರ ಅಂತರರಾಷ್ಟ್ರೀಯ ಏಜೆನ್ಸಿಗಳು ಮಾಡಿದ ಬೆಳವಣಿಗೆಯ ಅಂದಾಜಿನ ಅನುಗುಣವಾಗಿದೆ ಎನ್ನಲಾಗಿದೆ.
ಭಾರತದ ಆರ್ಥಿಕ ವೃದ್ಧಿ ದರದ ಕುರಿತು ವರದಿ ಪ್ರಕಟಿಸಿರುವ Moody's, ವರ್ಷ 2020ರಲ್ಲಿ ಭಾರತದ GDP ಶೇ.2.5ಕ್ಕೆ ಕುಸಿಯಲಿದೆ ಎಂದು ಹೇಳಿದೆ. ಕೊರೊನಾ ವೈರಸ್ ಪ್ರಭಾವದಿಂದ ಜಾಗತಿಕ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.