ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ..‌. ಇನ್ಮುಂದೆ ಟೀಂ ಇಂಡಿಯಾ ಆಡುವ ಈ ಪಂದ್ಯಕ್ಕೆ ಫ್ಯಾನ್ಸ್‌ ಪ್ರವೇಶ ನಿಷೇಧ: ಬಿಸಿಸಿಐ ಇಂಥಾ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನು?

Adelaide Test: ಶುಕ್ರವಾರದಿಂದ ಪ್ರಾರಂಭವಾಗುವ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ತಂಡದ ಅಭ್ಯಾಸದ ಸಮಯದಲ್ಲಿ ಕೆಲವು ಪ್ರೇಕ್ಷಕರು 'ಅಸಭ್ಯ' ಕಾಮೆಂಟ್‌ಗಳನ್ನು ಮಾಡಿದ್ದರು.

Written by - Bhavishya Shetty | Last Updated : Dec 4, 2024, 06:36 PM IST
    • ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ
    • ಇದು ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯ
    • ಭಾರತೀಯ ಆಟಗಾರರ ಕಾರಣದಿಂದ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ..‌. ಇನ್ಮುಂದೆ ಟೀಂ ಇಂಡಿಯಾ ಆಡುವ ಈ ಪಂದ್ಯಕ್ಕೆ ಫ್ಯಾನ್ಸ್‌ ಪ್ರವೇಶ ನಿಷೇಧ: ಬಿಸಿಸಿಐ ಇಂಥಾ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನು? title=
File Photo

Adelaide Test: ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಇದು ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯ. ಇದಕ್ಕೂ ಮುನ್ನ ಭಾರತೀಯ ಆಟಗಾರರ ಕಾರಣದಿಂದ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಶುಕ್ರವಾರದಿಂದ ಪ್ರಾರಂಭವಾಗುವ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ತಂಡದ ಅಭ್ಯಾಸದ ಸಮಯದಲ್ಲಿ ಕೆಲವು ಪ್ರೇಕ್ಷಕರು 'ಅಸಭ್ಯ' ಕಾಮೆಂಟ್‌ಗಳನ್ನು ಮಾಡಿದ್ದರು. ಹೀಗಾಗಿ ಕಠಿಣ ತೀರ್ಮಾನ ಕೈಗೊಂಡ ಬಿಸಿಸಿಐ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ಅಭ್ಯಾಸದ ಅವಧಿಗಳಲ್ಲಿ ಅಭಿಮಾನಿಗಳಿಗೆ ಇನ್ನು ಮುಂದೆ ಪ್ರವೇಶ ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಚಾಲೆಂಜ್‌ ಮಾಡ್ತೀನಿ ಗುರು..! "4"ರ ಗುಂಪಿನಲ್ಲಿ "A" ಅಕ್ಷರ ಎಲ್ಲಿದೆ ಅಡಗಿದೆ ಹೇಳಿ.. ನೋಡೋಣ..? 

ಅಭ್ಯಾಸದ ಅವಧಿಯಲ್ಲಿ ಸ್ಟೇಡಿಯಂಗೆ ಆಗಮಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿತ್ತು. ಸೀಮಿತ ಸಂಖ್ಯೆಯ ಪ್ರೇಕ್ಷಕರು ಆಸ್ಟ್ರೇಲಿಯಾದ ಅಭ್ಯಾಸವನ್ನು ವೀಕ್ಷಿಸಲು ಬಂದಿದ್ದರೆ, ಭಾರತ ತಂಡವನ್ನು ವೀಕ್ಷಿಸಲು ಸಾವಿರಾರು ಜನರು ಜಮಾಯಿಸಿದ್ದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ಗೌಪ್ಯತೆಯ ಷರತ್ತಿನ ಮೇಲೆ ಪಿಟಿಐಗೆ ಒಂದಷ್ಟು ವಿಚಾರಗಳನ್ನು ತಿಳಿಸಿದ್ದಾರೆ, "ಇದು ಸಂಪೂರ್ಣ ಅವ್ಯವಸ್ಥೆ. ಆಸ್ಟ್ರೇಲಿಯನ್ ತರಬೇತಿ ಅವಧಿಯಲ್ಲಿ 70 ಕ್ಕಿಂತ ಹೆಚ್ಚು ಜನರು ಬಂದಿರಲಿಲ್ಲ, ಆದರೆ ಭಾರತದ ಅಭ್ಯಾಸದ ಸಂದರ್ಭದಲ್ಲಿ ಸುಮಾರು 3000 ಜನರು ಹಾಜರಿದ್ದರು. ಇಷ್ಟೊಂದು ಅಭಿಮಾನಿಗಳು ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇನ್ನು ಸಿಡ್ನಿಯಲ್ಲಿ (ಐದನೇ ಟೆಸ್ಟ್‌ಗೂ ಮುನ್ನ) ಮತ್ತೊಂದು ಅಭಿಮಾನಿಗಳ ದಿನ ನಿಗದಿಯಾಗಿತ್ತು. ಆದರೆ ಅಡಿಲೇಡ್‌ನಲ್ಲಿ ಫ್ಯಾನ್ಸ್‌ ಮಾಡಿದ ಅಸಭ್ಯ ಮತ್ತು ಸಂವೇದನಾರಹಿತ ಕಾಮೆಂಟ್‌ಗಳಿಂದ ಆಟಗಾರರು ತುಂಬಾ ನೋವನುಭವಿಸಿದ್ದಾರೆ. ಇದೇ ಕಾರಣದಿಂದ ಅದನ್ನು ರದ್ದುಗೊಳಿಸಲಾಗಿದೆ" ಎಂದು ಹೇಳಿದ್ದಾರೆ.

"ಒಂದಷ್ಟು ಫ್ಯಾನ್ಸ್‌ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಅವರಂತಹ ಆಟಗಾರರನ್ನು ಸಿಕ್ಸರ್ ಬಾರಿಸಲು ಪ್ರಚೋದಿಸುತ್ತಿದ್ದರೆ, ಮತ್ತೊಂದಷ್ಟು ಫ್ಯಾನ್ಸ್‌, ಅವರ ಬಗ್ಗೆ ಬಾಡಿ ಶೇಮಿಂಗ್‌ ಮಾಡಿದ್ದಾರೆ. ತಂಡದ ಆಟಗಾರರ ಫಿಟ್ನೆಸ್ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ" ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

"ಕೆಲವರು ತಮ್ಮ ಸ್ನೇಹಿತರೊಂದಿಗೆ ಫೇಸ್‌ಬುಕ್ ಲೈವ್ ಮಾಡುತ್ತಿದ್ದರು. ಬ್ಯಾಟ್ಸ್‌ಮನ್ ಆಡುವಾಗ ಜೋರಾಗಿ ಮಾತನಾಡುತ್ತಿದ್ದರು. ಅಭಿಮಾನಿಯೊಬ್ಬ ಆಟಗಾರನಿಗೆ ಗುಜರಾತಿಯಲ್ಲಿ 'ಹಾಯ್' ಎಂದು ಹೇಳಲು ನಿರಂತರವಾಗಿ ಪೀಡಿಸುತ್ತಿದ್ದ. ಮತ್ತೊಬ್ಬ ನಿರ್ದಿಷ್ಟ ಆಟಗಾರನ ದೇಹದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಪ್ಪು ದಾರವನ್ನು ಈ ರಾಶಿಯವರು ಕಟ್ಟಬಾರದು.. ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ! ಕೋಟ್ಯಾಧಿಪತಿಯೂ ಬೀದಿಗೆ ಬರುತ್ತಾನೆ

ಇದೇ ಕಾರಣದಿಂದ ಸಿಡ್ನಿಯಲ್ಲಿ ಅಭ್ಯಾಸ ಅವಧಿಯ ಪಂದ್ಯವನ್ನು ನೋಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಆಟಗಾರರಿಗೆ ಅವಮಾನ ಮಾಡಿರುವ ಕಾರಣದಿಂದ ಈ ಆಯೋಜನೆಯನ್ನು ರದ್ದುಗೊಳಿಸಿ ಫ್ಯಾನ್ಸ್‌ ಪ್ರವೇಶವನ್ನು ನಿಷೇಧಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News