ಕರ್ನಾಟಕದ ʼನಂದಿನಿʼಗೆ ಉತ್ತರ ಭಾರತದಲ್ಲಿ ಸಂಕಷ್ಟ: ಹಾಲು ಗ್ರಾಹಕರ ಕೈ ಸೇರದಂತೆ ನಿರಂತರ ಅಡ್ಡಗಾಲು ಹಾಕುತ್ತಿವೆ ಈ ಹಾಲಿನ ಬ್ರ್ಯಾಂಡ್‌ಗಳು

Karnataka Milk Federation: ನವೆಂಬರ್‌ 21 ರಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್)‌ ನವದೆಹಲಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಶುರು ಮಾಡಿದೆ.

Written by - Bhavishya Shetty | Last Updated : Dec 4, 2024, 06:09 PM IST
    • ನವದೆಹಲಿ ಮಾರುಕಟ್ಟೆ ಪ್ರವೇಶಿಸಿದ ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ
    • ನಂದಿನಿ ಹಾಲು ಸ್ಥಳೀಯ ಗ್ರಾಹಕರ ಕೈ ಸೇರದಂತೆ ಪಿತೂರಿ
    • ದೆಹಲಿಗೆ ಬಂದ ಎರಡು ದಿನಗಳಲ್ಲೇ ಭಾರಿ ವಹಿವಾಟು ಶುರು ಮಾಡಿದ್ದ ನಂದಿನಿ
ಕರ್ನಾಟಕದ ʼನಂದಿನಿʼಗೆ ಉತ್ತರ ಭಾರತದಲ್ಲಿ ಸಂಕಷ್ಟ: ಹಾಲು ಗ್ರಾಹಕರ ಕೈ ಸೇರದಂತೆ ನಿರಂತರ ಅಡ್ಡಗಾಲು ಹಾಕುತ್ತಿವೆ ಈ ಹಾಲಿನ ಬ್ರ್ಯಾಂಡ್‌ಗಳು title=
File Photo

Nandini milk: ಇತ್ತೀಚೆಗಷ್ಟೆ ಕರ್ನಾಟಕದಿಂದ ದೆಹಲಿಗೆ ಲಗ್ಗೆ ಇಟ್ಟಿರುವ ಕರ್ನಾಟಕದ ನಂದಿನಿ ಹಾಲಿನ ಬ್ರ್ಯಾಂಡ್‌ಗೆ, ಇನ್ನಿತರ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್‌ಗಳು ಅಡ್ಡಿಪಡಿಸುತ್ತಿವೆ ಎಂಬ ಮಾತು ಕೇಳಿಬರುತ್ತಿವೆ. ದೆಹಲಿಗೆ ಬಂದ ಎರಡು ದಿನಗಳಲ್ಲೇ ಭಾರಿ ವಹಿವಾಟು ಶುರು ಮಾಡಿದ್ದ ನಂದಿನಿಗೆ ಉತ್ತರ ಭಾರತದ ಪ್ರತಿಷ್ಠಿತ ಬ್ಯ್ರಾಂಡ್‌ಗಳು ತಡೆ ಒಡುತ್ತಿದ್ದು, ನಂದಿನಿ ಹಾಲು ಸ್ಥಳೀಯ ಗ್ರಾಹಕರ ಕೈ ಸೇರದಂತೆ ಪಿತೂರಿ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ 'ಅರ್ಥಶಾಸ್ತ್ರ'ದ ಮೂಲ ಪ್ರತಿ..! ನೀವು ತಪ್ಪದೆ ಈ ಒರಿಜಿನಲ್ ಪ್ರತಿ ನೋಡಿ..!

ನವೆಂಬರ್‌ 21 ರಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್)‌ ನವದೆಹಲಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಶುರು ಮಾಡಿದೆ. ಪ್ರಾರಂಭವಾದ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಕರ್ನಾಟಕದ ಬ್ರಾಂಡ್‌, ಇತರ ಹಾಲಿನ ಉತ್ಪನ್ನಗಳ ಕಂಪನಿಗಳಿಗೆ ಸವಾಲೆಸೆದಿತ್ತು.

ಗುಜರಾತ್‌ ಹಾಗೂ ಅಕ್ಕಪಕ್ಕದ ರಾಜ್ಯಗಳ ಹಾಲು ಒಕ್ಕೂಟಗಳು ನವದೆಹಲಿ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಹೊಂದಿದ್ದು, ಈ ಮಧ್ಯೆ ದಿಢೀರ್‌ ಆಗಿ ನಂದಿನಿ ಬ್ರ್ಯಾಂಡ್‌ ಬಂದು ತನ್ನ ಪ್ರಾಬಲ್ಯ ಸ್ಥಾಪಿಸಲು ಶುರುಮಾಡುತ್ತಿರುವ ಭಯದಿಂದ ಅದಕ್ಕೆ ಬ್ರೇಕ್‌ ಹಾಕುವ ಕಾರ್ಯ ಮಾಡಲಾಗುತ್ತಿದೆ.

ಕೆಎಂಎಫ್‌ ವ್ಯಾಪ್ತಿಯಲ್ಲಿ 16 ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳಿದ್ದು, ಕರ್ನಾಟಕದಲ್ಲಿ ದೈನಂದಿನ ಹಾಲಿನ ಸಂಗ್ರಹಣೆ ಮಟ್ಟವು ಕೋಟಿ ಲೀಟರ್‌ ಗಡಿ ದಾಟಿದೆ. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಹಾಲು ಸಂಗ್ರಹಣೆ ಆಗುತ್ತಿರುವ ನಿಟ್ಟಿನಲ್ಲಿ ತನ್ನ ಮಾರುಕಟ್ಟೆ ವಿಸ್ತರಣಾ ವ್ಯಾಪ್ತಿಯನ್ನು ದೆಹಲಿಗೂ ಪಸರಿಸಿದೆ.

ದೇಶದ ಸಹಕಾರಿ ಹೈನು ಉದ್ಯಮದಲ್ಲಿ ಗುಜರಾತ್‌ನ ಅಮುಲ್‌ ಅಗ್ರಸ್ಥಾನದಲ್ಲಿದ್ದು, ಅಮುಲ್‌ ನಂತರದ ಸ್ಥಾನವನ್ನು ಕೆಎಂಎಫ್‌ ಹೊಂದಿದೆ. ಹೀಗಾಗಿ ವಿದೇಶಕ್ಕೂ ಹಾಲು ಮತ್ತು ಹಾಲಿನ ಉತ್ಪನ್ನವನ್ನು ರಫ್ತು ಮಾಡುತ್ತಿರುವುದರ ಜೊತೆಗೆ, ದಕ್ಷಿಣ ಭಾರತದ ರಾಜ್ಯಗಳಲ್ಲೂ ತನ್ನ ವಹಿವಾಟನ್ನು ವಿಸ್ತರಿಸಿದೆ.

ದೆಹಲಿಯಲ್ಲಿ ನಂದಿನಿ ಬ್ರ್ಯಾಂಡ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಉತ್ತರ ಭಾರತದ ಹಾಲು ಒಕ್ಕೂಟಗಳು ಕೆಎಂಎಫ್‌ಗೆ ತೆರೆಮರೆಯಲ್ಲೇ ತಡೆಯೊಡ್ಡುತ್ತಿವೆ.

ಇದನ್ನೂ ಓದಿ: ಸಿಎಂ ಹೇಳಿದ್ದೇ ಅಂತಿಮ, ಅದರ ಬಗ್ಗೆ ಮರುಪ್ರಶ್ನೆ ಇಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಅದರಲ್ಲೂ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್‌ವೊಂದು ನಂದಿನಿ ಹಾಲಿನ ಖರೀದಿ ಉದ್ದೇಶಕ್ಕಾಗಿಯೇ ದೆಹಲಿ ಸೇರಿದಂತೆ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿದೆ. ಆ ಸಿಬ್ಬಂದಿಗಳು ಪ್ರತಿನಿತ್ಯ ನಂದಿನಿ ಹಾಲಿನ ಪ್ಯಾಕೆಟ್‌ಗಳನ್ನು ಖರೀದಿಸಿ, ಬೀದಿಗಳಿಗೆ ಚೆಲ್ಲುತ್ತಿದ್ದಾರೆ. ಆ ಮೂಲಕ ಸ್ಥಳೀಯ ಮಾರುಕಟ್ಟೆಯಲ್ಲಿ ನಂದಿನಿ ಹಾಲಿಗೆ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಕೆಎಂಎಫ್‌ ಉತ್ಪನ್ನ ಮೂಲಗಳು ಹೇಳಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News