ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ. ಮಳೆಯಿಂದ, ರೋಗದಿಂದ ಭೂಮಿಯಿಂದ ತೊಂದರೆಯಾಗುತ್ತದೆ. ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂದು, ಈಗಲೂ ಅಂತಹ ಪರಿಸ್ಥಿತಿದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು. ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ. ಈ ಸಂವತ್ಸರದ ಕಡೆವರೆಗೂ ಈ ತೊಂದರೆ ಇದೆ. ಅಚ್ಛರಿಯ ಅವಘಡ ಕಾದಿದೆ ಎಂದು ಈ ಹಿಂದೆ ಹೇಳಿದ್ದೆ. ಅದನ್ನು ಆಗುತ್ತದೆ ಕಾದು ನೋಡಿ.
ವಿವಾದದ ಮಧ್ಯೆಯೇ ಸಾವರ್ಕರ್ ಫೋಟೋ ಅದ್ಧೂರಿ ಮೆರವಣಿಗೆ. ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಮೆರವಣಿಗೆ. ಗ್ರಾಮದ ಯುವಕರಿಂದ ಸಾವರ್ಕರ್ ಭಾವಚಿತ್ರದ ಅದ್ಧೂರಿ ಮೆರವಣಿಗೆ. 101 ಮಹಿಳೆಯರ ಪೂರ್ಣಕುಂಭ ಸಮೇತ ಭಾವಚಿತ್ರದ ಮೆರವಣಿಗೆ. ಮೆರವಣಿಗೆಯಲ್ಲಿ ಶಾಸಕ ಅಮೃತ ದೇಸಾಯಿ ಭಾಗಿ.
ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಆ ಜಾಗ ಕಂದಾಯ ಇಲಾಖೆಯದ್ದು ಅಂತ ಸರ್ಕಾರ ಡಿಕ್ಲೇರ್ ಮಾಡಿದೆ. ಅದು ಸರ್ಕಾರದ್ದು ಅಂದಮೇಲೂ ಸಹ ಅಲ್ಲಿಯ ಶಾಸಕ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಹಿಂದೂಗಳ ಮೇಲೆಯೇ ಹೆಚ್ಚು ಕೇಸ್ಗಳಾಗಿವೆ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಮೇಲೆ ಜನರು ಸಿಟ್ಟಾಗಿದ್ದಾರೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.