ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ. ಮಳೆಯಿಂದ, ರೋಗದಿಂದ ಭೂಮಿಯಿಂದ ತೊಂದರೆಯಾಗುತ್ತದೆ. ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂದು, ಈಗಲೂ ಅಂತಹ ಪರಿಸ್ಥಿತಿದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು. ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ. ಈ ಸಂವತ್ಸರದ ಕಡೆವರೆಗೂ ಈ ತೊಂದರೆ ಇದೆ. ಅಚ್ಛರಿಯ ಅವಘಡ ಕಾದಿದೆ ಎಂದು ಈ ಹಿಂದೆ ಹೇಳಿದ್ದೆ. ಅದನ್ನು ಆಗುತ್ತದೆ ಕಾದು ನೋಡಿ. ಬೆಂಕಿಯಿಂದ ಹೆಚ್ಚು ಸಮಸ್ಯೆ ಇದೆ. ಅಪಮೃತ್ಯು ಹೆಚ್ಚಿದೆ. ಅಶಾಂತಿಯಾಗಿ ಕಲಹಗಳು ಹೆಚ್ಚಾಗುತ್ತವೆ. ಒಂದೆಡೆ ಪ್ರಕೃತಿ ವಿಕೋಪ, ಮತಾಂದತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ.
ಭೂಮಿ ಕುಸಿಯುತ್ತದೆ, ರೋಗ ಹೆಚ್ಚಾಗುತ್ತವೆ : ಕೋಡಿಶ್ರೀ ಕರಾಳ ಭವಿಷ್ಯ!