ಉತ್ತರಾಖಂಡ: ಕರ್ನಾಟಕದ ಪಾಲಿಗೆ ಇದೊಂದು ಅಪಾರ ಹೆಮ್ಮೆಯ ಕ್ಷಣವಾಗಿದ್ದು 15 ವರ್ಷದ ಶೂಟರ್ ಮಾಸ್ಟರ್ ಜೊನಾಥನ್ ಗೇವಿನ್ ಆಂಟೋನಿ ಅವರು ಉತ್ತರಾಖಂಡದಲ್ಲಿ ನಡೆದ 2025 ರ ರಾಷ್ಟ್ರೀಯ 0.177 ಏರ್ ಪಿಸ್ತೂಲ್ ಶೂಟಿಂಗ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹಾಕ್-ಐ ಸ್ಪೋರ್ಟ್ಸ್ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಎ-ಗ್ರೇಡ್ ಪ್ರಮಾಣೀಕೃತ ತರಬೇತುದಾರ ಶ್ರೀ ಶರಣೇಂದ್ರ ಕೆ.ವೈ ಅವರ ಪರಿಣಿತ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಜೋನಾಥನ್ ಅವರು ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಕೌಶಲ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ : ಪೊಲೀಸ್ ಠಾಣೆಗೆ ಬಂದು ಗಂಡ ನಾಪತ್ತೆ ಎಂದು ನಾಟಕವಾಡಿದ ಚಾಲಾಕಿ ಪತ್ನಿ !
ಅದ್ಬುತ ಪ್ರದರ್ಶನ ನೀಡಿದ ಜೊನಾಥನ್ ಗೇವಿನ್ ಆಂಟೋನಿ:
ಅರ್ಹತಾ ಸುತ್ತು: 578/600
ಫೈನಲ್ ಸ್ಕೋರ್: 240.7
ಜೊನಾಥನ್ನ ಅವರ ಶೂಟಿಂಗ್ ಪಯಣವವು ಕೋಚ್ ಶರಣೇಂದ್ರ ಕೆವೈ ಅವರ ಅಡಿಯಲ್ಲಿ ಪ್ರಾರಂಭವಾಯಿತು.ಅವರ ಮಾರ್ಗದರ್ಶನ ಮತ್ತು ಸತತ ಪರಿಶ್ರಮದ ಫಲವಾಗಿ ಇಂದು ಚಿನ್ನದ ಪದಕವನ್ನು ಗೆಲ್ಲುವಂತಾಗಿದೆ.ಜೊತೆಗೆ ಈ ಸಾಧನೆಯ ಹಾದಿಯಲ್ಲಿ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವರ ತಾಯಿ ಆನ್ಸಿಯವರ ಪಾತ್ರವೂ ದೊಡ್ಡದು.ತಾಯಿಯ ಪ್ರೋತ್ಸಾಹ, ಮಾರ್ಗದರ್ಶಕ ಶರಣೇಂದ್ರರ ಅತ್ಯುತ್ತಮ ತರಬೇತಿ ಇವೆಲ್ಲದರ ಒಟ್ಟು ಫಲವೇ ಈ ಸಾಧನೆಯಾಗಿದೆ.
ಇದನ್ನೂ ಓದಿ: ಈ ಪ್ರಾಣಿಯ ಮಾಂಸ ತಿನ್ನುವ ಮುನ್ನ ಎಚ್ಚರ..! ಎಕ್ಸ್ ರೇನಲ್ಲಿ ಪತ್ತೆಯಾಯ್ತು ಜೀವ ತೆರೆಯುವ "ಹುಳು"..
ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ
ಈ ಚಿನ್ನದ ಪದಕವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಈ ಮೂಲಕ ಭಾರತದ ಶೂಟಿಂಗ್ ಕ್ರೀಡೆಗಳಲ್ಲಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.ಜೊನಾಥನ್ ಅವರ ಯಶಸ್ಸು ರಾಷ್ಟ್ರದಾದ್ಯಂತ ಮಹತ್ವಾಕಾಂಕ್ಷಿ ಹೊಂದಿರುವ, ಯುವ ಶೂಟರ್ಗಳಿಗೆ ಸ್ಫೂರ್ತಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.