ಅಡುಗೆ ಮನೆಯಲ್ಲಿರುವ ಈ 2 ವಸ್ತುಗಳನ್ನು ಬಳಸಿ ಹಳೆಯ ಕೂಲರ್ ಅನ್ನು 'ಎಸಿ' ಆಗಿ ಪರಿವರ್ತಿಸಿ..! ಇಲ್ಲಿದೆ ಸಿಂಪಲ್ ಟ್ರಿಕ್

Simple Cooler Tips: ಇನ್ನೇನು ಬೇಸಿಗೆ ಕಾಲ ಆರಂಭವಾಗುತ್ತಿದೆ. ಬೇಸಿಗೆಯಲ್ಲಿ 'ಎಸಿ' ಖರೀದಿಸುವ ಚಿಂತೆಯೇ ಬೇಕಿಲ್ಲ. ನಿಮ್ಮ ಮನೆಯಲ್ಲಿ ಕೂಲರ್ ಇದ್ರೆ ಅದನ್ನೇ ಎಸಿ ರೀತಿ ಪರಿವರ್ತಿಸಬಹುದು. 

Written by - Yashaswini V | Last Updated : Feb 3, 2025, 12:31 PM IST
  • ಬೇಸಿಗೆ ಕಾಲದಲ್ಲಿ ಹೊಸ 'ಎಸಿ' ಖರೀದಿಸುವ ಅಗತ್ಯವಿಲ್ಲ
  • ನಿಮ್ಮ ಮನೆಯಲ್ಲಿ ಕೂಲರ್ ಇದ್ದರೆ ಅದನ್ನೇ 'ಎಸಿ' ಆಗಿ ಪರಿವರ್ತಿಸಬಹುದು
  • ಕೂಲರ್ ಅನ್ನು ಎಸಿಯಂತೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಅಡುಗೆ ಮನೆಯಲ್ಲಿರುವ ಈ 2 ವಸ್ತುಗಳನ್ನು ಬಳಸಿ ಹಳೆಯ ಕೂಲರ್ ಅನ್ನು 'ಎಸಿ' ಆಗಿ ಪರಿವರ್ತಿಸಿ..! ಇಲ್ಲಿದೆ ಸಿಂಪಲ್ ಟ್ರಿಕ್  title=

Simple Cooler Tips: ಬೇಸಿಗೆ ಆರಂಭಕ್ಕೂ ಮೊದಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಬರೀ ಫ್ಯಾನ್, ಕೂಲರ್ ನಲ್ಲಿ ದಿನದೂಡುವುದು ಅಸಾಧ್ಯ ಎನಿಸುತ್ತಿರುವ ಈ ವೇಳೆಯಲ್ಲಿ 'ಎಸಿ' ಖರೀದಿಸುವ ಬಗ್ಗೆ ಚಿಂತಿಸುತ್ತಿರುವವರಿಗೆ ನಿಮ್ಮ ಮನೆಯಲ್ಲಿರುವ ಹಳೆ ಕೂಲರ್ ಅನ್ನು 'ಎಸಿ' ಆಗಿ ಪರಿವರ್ತಿಸುವ ಜಬರ್ದಸ್ತ್ ಉಪಾಯ ಇಲ್ಲಿದೆ. 

ಹೌದು, ಎಸಿ ಕೊಳ್ಳುವುದಷ್ಟೇ ದುಬಾರಿಯಲ್ಲ. ಎಸಿ ನಿರ್ವಹಣೆಯ ಜೊತೆಗೆ ಎಸಿ ಬಳಕೆಯಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಕೂಲರ್ ಅತ್ಯುತ್ತಮ ಪರಿಹಾರ ಎಂತಲೇ ಹೇಳಬಹುದು. ಇನ್ನೂ ಮುಖ್ಯವಾದ ವಿಷಯವೆಂದರೆ, ಕೂಲರ್ ನಿಂದಲೇ ಎಸಿಯಂತಹ ಹವಾ ಪಡೆಯಬಹುದು. ಇದಕ್ಕಾಗಿ ಹೆಚ್ಚು ಹಣ ವ್ಯಯಿಸುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಅಡುಗೆ ಮನೆಯಲ್ಲಿರುವ ಎರಡೇ ಎರಡು ವಸ್ತುಗಳನ್ನು ಬಳಸಿದರೆ ಸಾಕು. 

ಇದನ್ನೂ ಓದಿ- ಮೊಬೈಲ್‌ನಲ್ಲಿ App ಡೌನ್‌ಲೋಡ್ ಮಾಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವೇ ಖಾಲಿಯಾಗುತ್ತೆ ಖಾತೆ..!

ಮೊದಲನೆಯದಾಗಿ ಕೂಲರ್ ನಿಂದ ಎಸಿಯಂತಹ ಹವಾ ಪಡೆಯಲು ಅದನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ಅವಶ್ಯಕ. ಆಗಷ್ಟೇ ಬಿಸಿಲಿನ ತಾಪದಿಂದ ಪರಿಹಾರ ದೊರೆಯುತ್ತದೆ. ಇದಲ್ಲದೆ, ಕೂಲರ್ ನಿಂದ ತಂಪಾದ ಗಾಳಿ ಪಡೆಯಲು ನಿಮ್ಮ ಅಡುಗೆ ಮನೆಯಲ್ಲಿರುವ ಎರಡು ವಸ್ತುಗಳು ಕೂಡ ಸಹಕಾರಿ ಆಗಲಿವೆ. 

ಐಸ್ ಕ್ಯೂಬ್ಸ್: 
ನಿಮ್ಮ ಅಡುಗೆ ಮನೆಯಲ್ಲಿರುವ ಫ್ರಿಜ್‌ನಿಂದ ಐಸ್ ಕ್ಯೂಬ್‌ಗಳನ್ನು ತೆಗೆದು ಕೂಲರ್ ನೀರಿನೊಂದಿಗೆ ಹಾಕಿದರೆ ಕೂಲರ್ ಸಹ ಎಸಿಯಂತೆ ತಂಪಾದ ಹವಾ ನೀಡುತ್ತದೆ. ಬಿಳಿ ಗಾಳಿಯಿಂದ ಪರಿಹಾರ ಪಡೆಯಲು ಇದು ಅತ್ಯುತ್ತಮ ಮಾರ್ಗವಾಗಿದೆ. 

ಇದನ್ನೂ ಓದಿ- ಜಬರ್ದಸ್ತ್ ಫೀಚರ್ಸ್ ಜೊತೆಗೆ ಕೇವಲ 5,000 ರೂ.ನಲ್ಲಿ ಸಿಗುತ್ತೆ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್‌!

ಉಪ್ಪು: 
ಐಸ್ ಕ್ಯೂಬ್‌ಗೆ ಉಪ್ಪು ಸೇರಿಸುವುದರಿಂದ ಐಸ್ ಬೇಗ ಕರಗುವುದಿಲ್ಲ. ಜೊತೆಗೆ ಕೂಲರ್ ನೀರು ಹೆಚ್ಚು ಸಮಯದವರೆಗೆ ತಂಪಾಗಿರಿಸುತ್ತದೆ. ಇದು ಕೂಲರ್‌ನ ಕೂಲಿಂಗ್ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತದೆ. ಈ ರೀತಿಯಾಗಿ ನಯಾ ಪೈಸೆಯನ್ನೂ ಖರ್ಚು ಮಾಡದೆ ನೀವು ಕೂಲರ್‌ನಿಂದ ಎಸಿಯಂತ ಹವಾ ಪಡೆಯಬಹುದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News