ಏಕದಿನ ಕ್ರಿಕೆಟ್ ಸಾಯುತ್ತಿದೆಯೇ? ಎಂದು ಯುವರಾಜ್ ಸಿಂಗ್ ಹೇಳಿದ್ದೇಕೆ?

ತಿರುವನಂತಪುರಂ ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ 35 ಓವರ್ ಗಳಲ್ಲಿ ಟೀಮ್ ಇಂಡಿಯಾ ಎರಡು ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.

Written by - Zee Kannada News Desk | Last Updated : Jan 15, 2023, 09:07 PM IST
  • ಈ ವೇಳೆ ವಿರಾಟ್ ಕೊಹ್ಲಿ 65 ರನ್ ಗಳಿಸಿದರೆ ಶುಬ್ಮನ್ ಗಿಲ್ 116 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
  • ಚೆನ್ನಾಗಿ ಆಡಿದೆ ಶುಬ್ಮನ್ ಗಿಲ್ ಆಶಾದಾಯಕವಾಗಿ ಶತಕ ಗಳಿಸುತ್ತೀರಿ ಎಂದು ಭಾವಿಸುವೆ,
  • ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗಟ್ಟಿಯಾಗಿ ಕಾಣುತ್ತಿದೆ!
ಏಕದಿನ ಕ್ರಿಕೆಟ್ ಸಾಯುತ್ತಿದೆಯೇ? ಎಂದು ಯುವರಾಜ್ ಸಿಂಗ್ ಹೇಳಿದ್ದೇಕೆ? title=
Photo Courtsey: Twitter

ನವದೆಹಲಿ: ತಿರುವನಂತಪುರಂ ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸಧ್ಯ 35 ಓವರ್ ಗಳಲ್ಲಿ ಟೀಮ್ ಇಂಡಿಯಾ ಎರಡು ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.

ಈ ವೇಳೆ ವಿರಾಟ್ ಕೊಹ್ಲಿ 65 ರನ್ ಗಳಿಸಿದರೆ ಶುಬ್ಮನ್ ಗಿಲ್ 116 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ “ಚೆನ್ನಾಗಿ ಆಡಿದೆ ಶುಬ್ಮನ್ ಗಿಲ್ ಆಶಾದಾಯಕವಾಗಿ ಶತಕ ಗಳಿಸುತ್ತೀರಿ ಎಂದು ಭಾವಿಸುವೆ,ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗಟ್ಟಿಯಾಗಿ ಕಾಣುತ್ತಿದೆ! ಆದರೆ ನಂಗೆ ಕಳವಳಕಾರಿಯಾಗಿರುವುದು ಅರೆ ಭರ್ತಿ ಕ್ರೀಡಾಂಗಣ, ಏಕ ದಿನ ಕ್ರಿಕೆಟ್ ಸಾಯುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ-Brain Stroke: ಕೊವಿಡ್ ವ್ಯಾಕ್ಸಿನ್ ನಿಂದ ಬ್ರೈನ್ ಸ್ಟ್ರೋಕ್ ಅಪಾಯ! ಹೊಸ ಅಧ್ಯಯನ ಹೇಳಿದ್ದೇನು?

ಇದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ “ ಭಾಯ್ ಪ್ಯಾಡ್ಸ್ ಹಾಕಿಕೊಂಡು ಬನ್ನಿ, ಜನರು ಬರ್ತಾರೆ” ಎಂದು ಉತ್ತರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News