ಈ ತಿಂಗಳು 200MP ಕ್ಯಾಮೆರಾ ಹೊಂದಿರುವ Xiaomi 15 Ultra ಬಿಡುಗಡೆ; ಸ್ಯಾಮ್‌ಸಂಗ್‌ಗೆ ದೊಡ್ಡ ಸಂಕಷ್ಟ!

Xiaomi 15 Ultra specifications: Xiaomi 15 Ultra ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ Samsung Galaxy S25 Ultraನೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಇದರಲ್ಲಿಯೂ ಸಹ ಗ್ರಾಹಕರು 1.7 ಅಪರ್ಚರ್ ಹೊಂದಿರುವ 200 ಮೆಗಾಪಿಕ್ಸೆಲ್ ಮಲ್ಟಿ-ಡೈರೆಕ್ಷನಲ್ ಕ್ಯಾಮೆರಾವನ್ನು ಪಡೆಯುತ್ತಾರೆ. ಶಿಯೋಮಿಯ ಮುಂಬರುವ ಫೋನ್ ಸ್ಯಾಮ್‌ಸಂಗ್‌ನ ಉದ್ವಿಗ್ನತೆಯನ್ನು ಹಲವು ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ. 

Written by - Puttaraj K Alur | Last Updated : Feb 7, 2025, 10:50 PM IST
  • ಫೆಬ್ರವರಿ 26ರಂದು Xiaomi 15 Ultra ಬಿಡುಗಡೆಯಾಗುವ ಸಾಧ್ಯತೆ
  • ಭಾರತೀಯ ಮಾರುಕಟ್ಟೆಗೆ 200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌
  • ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ಗೆ ದೊಡ್ಡ ಸಂಕಷ್ಟ ಸೃಷ್ಟಿ
ಈ ತಿಂಗಳು 200MP ಕ್ಯಾಮೆರಾ ಹೊಂದಿರುವ Xiaomi 15 Ultra ಬಿಡುಗಡೆ; ಸ್ಯಾಮ್‌ಸಂಗ್‌ಗೆ ದೊಡ್ಡ ಸಂಕಷ್ಟ!  title=
Xiaomi 15 ultra

Xiaomi 15 Ultra specifications: Xiaomi 15 Ultraಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಇದೆ. ಕಂಪನಿಯು ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಶಿಯೋಮಿಯ ಈ ಮುಂಬರುವ ಸ್ಮಾರ್ಟ್‌ಫೋನ್ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ಗೆ ದೊಡ್ಡ ಸಂಕಷ್ಟವನ್ನು ಸೃಷ್ಟಿಸಲಿದೆ. ಹೌದು, ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿಯ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್ ಶಿಯೋಮಿ 15 ಅಲ್ಟ್ರಾ ಬಗೆಗಿನ ಮಾಹಿತಿ ಬಹಳ ದಿನಗಳಿಂದಲೂ ಸೋರಿಕೆಯಾಗುತ್ತಿವೆ. ಶಿಯೋಮಿ ಅಭಿಮಾನಿಗಳು ಈ ಸ್ಮಾರ್ಟ್‌ಫೋನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗ ಕೊನೆಗೂ ಅವರ ಕಾಯುವಿಕೆ ಕೊನೆಗೊಳ್ಳಲಿದೆ. Xiaomi 15 Ultra ಬಿಡುಗಡೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್‌ಡೇಟ್ ಹೊರಬಂದಿದೆ. ಈ ಪ್ರಮುಖ ಸ್ಮಾರ್ಟ್‌ಫೋನ್ ಫೆಬ್ರವರಿ ತಿಂಗಳಿನಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ವರಿದಿಯಾಗಿದೆ.

ಕಂಪನಿಯ ಸ್ಥಾಪಕರು ಈ ಮುಂಬರುವ ಫೋನ್ ಅನ್ನು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆ ವೀಬೊದಲ್ಲಿ ಬಿಡುಗಡೆ ಮಾಡುವುದನ್ನು ದೃಢಪಡಿಸಿದ್ದಾರೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ನೊಂದಿಗೆ ಶಿಯೋಮಿಯ ಇತ್ತೀಚಿನ ಎಸ್‌ಯುವಿಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಸೋರಿಕೆ ಮಾಹಿತಿ ಪ್ರಕಾರ, ಕಂಪನಿಯು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ Xiaomi 15 ಅಲ್ಟ್ರಾವನ್ನು ಬಿಡುಗಡೆ ಮಾಡುತ್ತದೆ. 

ಇದನ್ನೂ ಓದಿ: ರೆಪೊ ದರದಲ್ಲಿ 0.25% ಇಳಿಕೆ, ಆರ್ಥಿಕ ವೃದ್ಧಿಗೆ ಬಲ;ಭಾರತೀಯ ರಿಸರ್ವ್ ಬ್ಯಾಂಕ್‌ನ ಮಹತ್ವದ ನಿರ್ಧಾರ

ಫೆಬ್ರವರಿ 26ರಂದು ಬಿಡುಗಡೆ?

ಶಿಯೋಮಿ ಸಿಇಒ ಲೀ ಜುನ್ ಪ್ರಕಾರ, ಶಿಯೋಮಿ 15 ಅಲ್ಟ್ರಾ ಫೆಬ್ರವರಿ ತಿಂಗಳಿನಲ್ಲಿಯೇ ಬಿಡುಗಡೆಯಾಗಲಿದೆ. ಆದರೆ ಅವರು ನಿಖರ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ನೀಡಿಲ್ಲ. ಕೆಲ ಸೋರಿಕೆ ಮಾಹಿತಿ ಪ್ರಕಾರ, ಈ ಸ್ಮಾರ್ಟ್‌ಫೋನ್ ಫೆಬ್ರವರಿ 26ರಂದು ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಕಂಪನಿಯು ತನ್ನ pre-orders ಪ್ರಾರಂಭಿಸಿದ ತಕ್ಷಣವೇ ಅದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ.  ಶಿಯೋಮಿಯು ಈಗಾಲಗೇ ಮಿ ಮಾಲ್‌ನಲ್ಲಿ pre-orders ತೆಗೆದುಕೊಳ್ಳುತ್ತಿದೆ. ಕಂಪನಿಯು ಮೊದಲು ತನ್ನ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಮಾರ್ಚ್ ಮೊದಲ ವಾರದಲ್ಲಿ Xiaomi 15 Ultraವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು. ಮಾರ್ಚ್ ಮೊದಲ ವಾರದಲ್ಲಿ MWC ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಕಂಪನಿಯು ಇದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಬಹುದೆಂಬ ಭರವಸೆ ಇದೆ.

ಸ್ಯಾಮ್‌ಸಂಗ್‌ನ ಸಂಕಷ್ಟ!!

Xiaomi 15 Ultraನಲ್ಲಿ ಒಂದಕ್ಕಿಂತ ಹೆಚ್ಚು ಅದ್ಭುತ ವೈಶಿಷ್ಟ್ಯಗಳು ಲಭ್ಯವಿರಲಿವೆ. ಈ ಶಿಯೋಮಿ ಫೋನ್ ಬಿಡುಗಡೆಯಾಗುವ ಮೊದಲೇ ಅದರ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ ಸುದ್ದಿಯಲ್ಲಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 200-ಮೆಗಾಪಿಕ್ಸೆಲ್ 4.3X ಆಪ್ಟಿಕಲ್ ಜೂಮ್ ಸೆನ್ಸಾರ್ ಹೊಂದಿರುತ್ತದೆ. ಇದರ ಹೊರತಾಗಿ 50 ಮೆಗಾಪಿಕ್ಸೆಲ್‌ಗಳ ಇನ್ನೂ 3 ಸೆನ್ಸಾರ್‌ಗಳು ಇರುತ್ತವೆ. ಇದು 50MP 1 ಇಂಚಿನ ಸೆನ್ಸಾರ್‌ಅನ್ನು ಹೊಂದಿದ್ದು, ಇದು ಪ್ರಾಥಮಿಕ ಕ್ಯಾಮೆರಾ ಆಗಿರುತ್ತದೆ. ಇದರ ಹೊರತಾಗಿ 50MP ಅಲ್ಟ್ರಾ ವೈಡ್ ಸೆನ್ಸರ್ ಕೂಡ ಇರುತ್ತದೆ. ಇದರೊಂದಿಗೆ 50MP ಟೆಲಿಫೋಟೋ ಸೆನ್ಸರ್ ಸಹ ಲಭ್ಯವಿರುತ್ತದೆ. 

ಇದನ್ನೂ ಓದಿ: ಸಾವಿನ ಇಷ್ಟು ದಿನಗಳ ಬಳಿಕ ವಿವಾದವಾದ ರತನ್ ಟಾಟಾ ವಿಲ್ !500 ಕೋಟಿ ಮೌಲ್ಯದ ಆಸ್ತಿಯನ್ನು ಈ ಮಹಿಳೆಯ ಹೆಸರಿಗೆ ಬರೆದಿದ್ದ ರತನ್ ಟಾಟಾ ! ಅಷ್ಟಕ್ಕೂ ಯಾರೀ ಮೋಹಿನಿ ?

Xiaomi 15 Ultra ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ Samsung Galaxy S25 Ultraನೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಇದರಲ್ಲಿಯೂ ಸಹ ಗ್ರಾಹಕರು 1.7 ಅಪರ್ಚರ್ ಹೊಂದಿರುವ 200 ಮೆಗಾಪಿಕ್ಸೆಲ್ ಮಲ್ಟಿ-ಡೈರೆಕ್ಷನಲ್ ಕ್ಯಾಮೆರಾವನ್ನು ಪಡೆಯುತ್ತಾರೆ. ಶಿಯೋಮಿಯ ಮುಂಬರುವ ಫೋನ್ ಸ್ಯಾಮ್‌ಸಂಗ್‌ನ ಉದ್ವಿಗ್ನತೆಯನ್ನು ಹಲವು ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ. 

Xiaomi 15 Ultraನ ವೈಶಿಷ್ಟ್ಯಗಳು

ಶಿಯೋಮಿ 15 ಅಲ್ಟ್ರಾದ ಕೆಲವು ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, 16GB ವರೆಗೆ RAM ಮತ್ತು 1TB ವರೆಗೆ ಸ್ಟೋರೇಜ್‌ಅನ್ನು ಇದರಲ್ಲಿ ಕಾಣಬಹುದು. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು IP68+IP69 ರೇಟಿಂಗ್‌ನೊಂದಿಗೆ ಬಿಡುಗಡೆ ಮಾಡಬಹುದು. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ 90W ವೇಗದ ಚಾರ್ಜಿಂಗ್ ಲಭ್ಯವಿರುತ್ತದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು 2K ಕ್ವಾಡ್-ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಬಹುದು. ಮೊದಲಿನಿಂದಲೂ Xiaomi 15 Ultra ಆಂಡ್ರಾಯ್ಡ್ 15ಗೆ ಬೆಂಬಲ ಪಡೆಯಬಹುದು. ಶಿಯೋಮಿ ಈ ಪ್ರಮುಖ ಫೋನ್ ಅನ್ನು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲು ಸಾಧ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News