ವ್ಹಾವ್‌...!! ಬ್ರಹ್ಮ ಈ ನಟಿಯನ್ನ ಸೃಷ್ಟಿ ಮಾಡೋಕೆ ಎಕ್ಟ್ರಾ ಟೈಮ್‌ ತೊಗೊಂಡಿದ್ದ ಅನ್ಸುತ್ತೆ ಗುರು.. ಎಷ್ಟು ಕ್ಯೂಟ್‌..

Actress Aditi Gautam : ಮಾಸ್ ಮಹಾರಾಜ ರವಿತೇಜ ಜೊತೆ ಒಂದೇ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚೆಲುವೆ ತನ್ನ ಅಪರೂಪದ ಸೌಂದರ್ಯದಿಂದ ಸಿನಿ ಪ್ರೇಕ್ಷಕರ ಮನಗೆದ್ದಳು.. ಜಸ್ಟ್‌ ಸ್ಮೈಲ್‌ ಮಾಡಿದ್ರೆ ಸಾಕು ಪಡ್ಡೆ ಹೈಕ್ಳಿಗೆ ವರ್ಷಗಟ್ಟಲೇ ನಿದ್ದೆ ಬರಲ್ಲ.. ಯಾರಿಕೆ..? ಫೋಟೋ ಸಮೇತ ವಿವರಗಳು ನಿಮಗಾಗಿ..
 

1 /8

ಚಿತ್ರರಂಗದಲ್ಲಿ ನಟಿಯಾಗಿ ಹೆಸರು ಗಳಿಸಬೇಕೆಂದು ಬಯಸಿದ್ದ ಈ ಸುಂದರಿ ಒಂದೇ ಒಂದು ಸಿನಿಮಾ ಮೂಲಕ ತನ್ನ ಆಸೆ ಈಡೇರಿಸಿಕೊಂಡಳು. ಕೇವಲ ಒಂದು ಚಿತ್ರದಿಂದ ಟಾಲಿವುಡ್ ಉದ್ಯಮದಲ್ಲಿ ಜನಪ್ರಿಯರಾದರೂ ಸಹ.. ಯಾಕೋ ಏನೋ ಅದೇ ಕ್ರೇಜ್ ಮುಂದುವರಿಯಲು ಸಾಧ್ಯವಾಗಲಿಲ್ಲ.   

2 /8

ಬಹಳ ದಿನಗಳಿಂದ ಸಿನಿಮಾಗಳಿಂದ ದೂರವಿದ್ದ ನಾಯಕಿ ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಿಯಮಿತವಾಗಿ ಏನನ್ನಾದರೂ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಮೆಚ್ಚಿಸುತ್ತಿದ್ದಾರೆ..   

3 /8

ಇತ್ತೀಚೆಗೆ ಈ ಹಾಟ್‌ ಗೊಂಬೆ ಹಂಚಿಕೊಂಡಿರುವ ಕೆಲವು ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಈಕೆ ಬೇರೆ ಯಾರೂ ಅಲ್ಲ ಶಿಯಾ ಗೌತಮ್. ಈ ಹೆಸರು ಕೇಳಿದಾಗ ನಿಮಗೆ ನೆನಪಾಗದೇ ಇರಬಹುದು.. ಈಕೆ ಮಾಸ್ ಮಹಾರಾಜ ರವಿತೇಜ ನಟನೆಯ 'ನೆನಿಂತೆ' ಚಿತ್ರದ ನಾಯಕಿ.. ಇವಾಗ ಗೊತ್ತಾಯ್ತು ಅಲ್ವಾ..   

4 /8

ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ 2008 ರಲ್ಲಿ ಬಿಡುಗಡೆಯಾಯಿತು. ಆದರೆ ಅದು ಕಮರ್ಷಿಯಲ್ ಹಿಟ್ ಆಗಿರಲಿಲ್ಲ. ಈ ಚಿತ್ರಕ್ಕೆ ಇನ್ನೂ ಪ್ರತ್ಯೇಕ ಅಭಿಮಾನಿ ಬಳಗವಿದೆ. ರವಿತೇಜ ಅವರ ನಟನೆ ಮತ್ತು ಪುರಿ ಸಂಭಾಷಣೆಗಳು ಪ್ರೇಕ್ಷಕರನ್ನು ಆಕರ್ಷಿಸಿದವು.  

5 /8

ಈ ಚಿತ್ರದಲ್ಲಿ ರವಿತೇಜ ಎದುರು ಶಿಯಾ ಗೌತಮ್ ನಟಿಸಿದ್ದರು. ಈ ಚಿತ್ರದ ಮೂಲಕ ಅವರು ಟಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಮೊದಲ ಸಿನಿಮಾದಿಂದಲೇ ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಸಿನಿ ರಸಿಕರ ಮನಗೆದ್ದರು..   

6 /8

ಈ ಚೆಲುವೆಯ ನಿಜವಾದ ಹೆಸರು ಅದಿತಿ ಗೌತಮ್. ಚಿತ್ರರಂಗಕ್ಕೆ ಬಂದ ನಂತರ ಶಿಯಾ ಅಂತ ಹೆಸರನ್ನು ಬದಲಾಯಿಸಿಕೊಂಡರು. ನಟನೆಯಲ್ಲಿ ಆಸಕ್ತಿ ಹೊಂದಿ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದರು. ನೆನಿಂತೆ ಚಿತ್ರದ ಮೂಲಕ ತೆಲುಗು ಪರದೆಗೆ ಪಾದಾರ್ಪಣೆ ಮಾಡಿದರು.    

7 /8

ತೆಲುಗು ಚಿತ್ರವಲ್ಲದೆ.. ರಣಬೀರ್ ಕಪೂರ್ ಅಭಿನಯದ ಬಾಲಿವುಡ್ ಚಿತ್ರ ಸಂಜುದಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರವೂ ಹಿಟ್ ಆಗಲಿಲ್ಲ. ಹೀಗಾಗಿ.. ಈ ಸುಂದರಿಗೆ ಯಾವುದೇ ಆಫರ್‌ಗಳು ಬರಲಿಲ್ಲ. ಇದು ನಿಧಾನವಾಗಿ ಅವರು ಚಲನಚಿತ್ರಗಳಿಂದ ದೂರ ಸರಿಯುವಂತೆ ಮಾಡಿತು.   

8 /8

ಆದರೆ ಶಿಯಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಿಯಮಿತ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅನುಯಾಯಿಗಳ ಗಮನ ಸೆಳೆಯುತ್ತಿದ್ದಾರೆ.. ರವಿತೇಜ ಜೊತೆ 'ನೆನಿಂತೆ' ಚಿತ್ರದಲ್ಲಿ ಸ್ವಲ್ಪ ದಪ್ಪಗೆ ಕಾಣಿಸಿಕೊಂಡಿದ್ದ ಶಿಯಾ ಈಗ ಬಳುಕುವ ಬಳ್ಳಿಯಂತಾಗಿದ್ದಾರೆ..