DP world ilt20 2025 : ಡೆಸರ್ಟ್ ವೈಪರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ದುಬೈ ಕ್ಯಾಪಿಟಲ್ಸ್ ತಂಡ

DP World International League T20 : ದುಬೈ ಕ್ಯಾಪಿಟಲ್ಸ್ ತಂಡವು ಡೆಸರ್ಟ್ ವೈಪರ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಮಾಂಚಕ ಗೆಲುವು ಸಾಧಿಸಿ ಡಿಪಿ ವರ್ಲ್ಡ್ ಐಎಲ್‌ಟಿ20 ಫೈನಲ್ ತಲುಪಿದೆ. ಡಿಪಿ ವರ್ಲ್ಡ್ ಐಎಲ್‌ಟಿ20 ನ ಸೀಸನ್ 3 ಅನ್ನು ZEE ನ 15-ಲೀನಿಯರ್ ಟಿವಿ ಚಾನೆಲ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್ ZEE5 ಮತ್ತು ಅದರ ಸಿಂಡಿಕೇಟ್ ಪಾಲುದಾರರ ಟಿವಿ ಮತ್ತು ಡಿಜಿಟಲ್ ನೆಟ್‌ವರ್ಕ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Feb 6, 2025, 01:50 PM IST
    • ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಡೆಸರ್ಟ್ ವೈಪರ್ಸ್ ವಿರುದ್ಧ ಗೆಲುವು.
    • 5 ವಿಕೆಟ್‌ಗಳ ಗೆಲುವು ಸಾಧಿಸಲು 189 ರನ್‌ಗಳನ್ನು ಬೆನ್ನಟ್ಟಿದ್ದ ಕ್ಯಾಪಿಟಲ್ಸ್‌
    • ಡಿಪಿ ವರ್ಲ್ಡ್ ಐಎಲ್‌ಟಿ20 ಸೀಸನ್ 3 ವೇಳಾಪಟ್ಟಿ, ತಂಡಗಳು ವಿವಿರ ಇಲ್ಲಿದೆ
DP world ilt20 2025 : ಡೆಸರ್ಟ್ ವೈಪರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ದುಬೈ ಕ್ಯಾಪಿಟಲ್ಸ್ ತಂಡ title=

ದುಬೈ : ದುಬೈ ಕ್ಯಾಪಿಟಲ್ಸ್ ಬುಧವಾರ ಡೆಸರ್ಟ್ ವೈಪರ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಮಾಂಚಕ ಗೆಲುವು ಸಾಧಿಸಿದೆ. ಈ ಮೂಲಕ ಡಿಪಿ ವರ್ಲ್ಡ್ ಐಎಲ್‌ಟಿ20 ಸೀಸನ್ 3 ರ ಫೈನಲ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 

ಹೌದು.. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಅದ್ಭುತ ಪಂದ್ಯದಲ್ಲಿ, ಆಲ್-ರೌಂಡ್ ಮಾಸ್ಟರ್‌ಕ್ಲಾಸ್ ಗುಲ್ಬಾದಿನ್ ನೈಬ್ - ವೈಪರ್ಸ್ ವಿರುದ್ಧ ಸತತ ಮೂರನೇ ಅರ್ಧಶತಕ ಮತ್ತು ಎರಡು ವಿಕೆಟ್‌ಗಳ ಪಡೆದರು. ಇದರಿಂದ ಕ್ಯಾಪಿಟಲ್ಸ್ ತಂಡ ಐದು ವಿಕೆಟ್‌ಗಳ ಗೆಲುವಿಗೆ ಕಾರಣವಾಯಿತು. ಈ ಗೆಲುವು ಟಿ20 ಪಂದ್ಯಗಳಲ್ಲಿ ಎರಡನೇ ಅತ್ಯಧಿಕ ರನ್ ಚೇಸ್‌ಗೆ ಕಾರಣವಾಯಿತು. ಅಲ್ಲದೆ, ವೈಪರ್ಸ್ ವಿರುದ್ಧ ಸತತ ಐದನೇ ಗೆಲುವಿನೊಂದಿಗೆ ಕ್ಯಾಪಿಟಲ್ಸ್‌ ತನ್ನ ಪ್ರಾಬಲ್ಯವನ್ನು ವಿಸ್ತರಿಸಿತು.

ಇದನ್ನೂ ಓದಿ:ಟೀಂ ಇಂಡಿಯಾ ಇನ್ನು ಕನಸು ಮಾತ್ರ.. ಏಕಾಏಕಿ ತಂಡಕ್ಕೆ ವಿದಾಯ ಹೇಳಿದ ಮೂರು ಸ್ಟಾರ್‌ ಆಟಗಾರರು!

ಸಂಜೆ ಆರಂಭದಲ್ಲಿ, ಅಲೆಕ್ಸ್ ಹೇಲ್ಸ್ ಕೇವಲ 32 ಎಸೆತಗಳಲ್ಲಿ 67 ರನ್ ಗಳಿಸಿ, ಮ್ಯಾಕ್ಸ್ ಹೋಲ್ಡನ್ ಜೊತೆ 98 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿ ವೈಪರ್ಸ್‌ಗೆ ಅದ್ಭುತ ಆರಂಭವನ್ನು ನೀಡಿದರು. ಆದರೂ, ಕ್ಯಾಪಿಟಲ್ಸ್ ಅದ್ಭುತ ಆಟದ ವೈಖರಿ, ವೈಪರ್ಸ್ ಅನ್ನು 189/7ಕ್ಕೆ ಸೀಮಿತಗೊಳಿಸಿತು.

ಪ್ಲೇಆಫ್‌ನ ಒತ್ತಡದ ನಡುವೆಯೂ ಗುರಿಯನ್ನು ಬೆನ್ನಟ್ಟಿದ ದುಬೈ ಕ್ಯಾಪಿಟಲ್ಸ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 47 ರನ್‌ಗಳ ಸ್ಥಿರ ಪವರ್‌ಪ್ಲೇ ಆಟವಾಡಿತು. ಐದನೇ ಓವರ್‌ನಲ್ಲಿ ಸ್ಯಾಮ್ ಕರನ್ ಬೌಲಿಂಗ್‌ಗೆ ಆಡಮ್ ರೋಸಿಂಗ್ಟನ್ ಮೂರು ಬೌಂಡರಿ ಬಾರಿಸಿದರು.  

ಗುಲ್ಬಾದಿನ್ ನೈಬ್ ಮತ್ತು ನಾಯಕ ಸ್ಯಾಮ್ ಬಿಲ್ಲಿಂಗ್ಸ್ ರನ್ ಚೇಸ್ ಆಟ ತಂಡಕ್ಕೆ ಜೀವ ನೀಡಿತು. ಕೊನೆಯ ಓವರ್‌ನಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 12 ರನ್‌ಗಳು ಬೇಕಾಗಿದ್ದವು ಮತ್ತು ಮೊದಲ ಎರಡು ಎಸೆತಗಳಲ್ಲಿ ನೈಬ್ ಆರು ರನ್‌ಗಳನ್ನು ಗಳಿಸಿದರು. ಮುಂದಿನ ಎಸೆತದಲ್ಲಿ ಧ್ರುವ್ ಪರಾಶರ್ ಸ್ಕೋರ್‌ಗಳನ್ನು ಸಮಬಲಗೊಳ್ಳುತ್ತಿದ್ದಂತೆ ಔಟ್‌ ಆದರು. ಆದರೆ ಕೊನೆಯ ಎಸೆತದಲ್ಲಿ ಸಿಕಂದರ್ ರಜಾ ಬೌಂಡರಿ ಬಾರಿಸಿ ರನ್ ಚೇಸ್ ಅನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ:Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!

ಕ್ರಿಕೆಟ್ ಅಭಿಮಾನಿಗಳು ಈ ಆಕ್ಷನ್-ಪ್ಯಾಕ್ಡ್ ಟೂರ್ನಮೆಂಟ್ ಅನ್ನು ZEE ನ 15 ಲೀನಿಯರ್ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು: Pictures SD, Pictures HD, Zee Cinema HD, Zee Anmol Cinema 2, Zee Action, Zee Biskope, Zee Zest SD, Zee Cinemalu HD, Zee Telugu HD, Zee Thirai, Zee Tamil HD, Zee Kannada HD, Zee Zest HD, &Flix SD ಮತ್ತು &Flix HD. ಭಾರತದ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ZEE5 ನಲ್ಲಿ ಉಚಿತವಾಗಿ ವೀಕ್ಷಿಸಬಹುದು. 

ಸಂಕ್ಷಿಪ್ತ ಸ್ಕೋರ್‌ಗಳು ಈ ರೀತಿ ಇವೆ..

ದುಬೈ ಕ್ಯಾಪಿಟಲ್ಸ್ ತಂಡವು ಡೆಸರ್ಟ್ ವೈಪರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು
ಡೆಸರ್ಟ್ ವೈಪರ್ಸ್ 20 ಓವರ್‌ಗಳಲ್ಲಿ 189/7 (ಅಲೆಕ್ಸ್ ಹೇಲ್ಸ್ 67, ಮ್ಯಾಕ್ಸ್ ಹೋಲ್ಡನ್ 36, ಡ್ಯಾನ್ ಲಾರೆನ್ಸ್ 35, ಗುಲ್ಬಾದಿನ್ ನೈಬ್ 25ಕ್ಕೆ 2, ಕೈಸ್ ಅಹ್ಮದ್ 29ಕ್ಕೆ 2)
ದುಬೈ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 193/5 (ಗುಲ್ಬಾದಿನ್ ನೈಬ್ 62, ಆಡಮ್ ರೋಸಿಂಗ್ಟನ್ 44, ಸ್ಯಾಮ್ ಬಿಲ್ಲಿಂಗ್ಸ್ 38, ಲಾಕಿ ಫರ್ಗುಸನ್ 32ಕ್ಕೆ 2, ಡೇವಿಡ್ ಪೇನ್ 31ಕ್ಕೆ 1)

ಗುರುವಾರ (ಫೆಬ್ರವರಿ 06) ವೇಳಾಪಟ್ಟಿ: ಎಂಐ ಎಮಿರೇಟ್ಸ್ vs ಶಾರ್ಜಾ ವಾರಿಯರ್ಸ್ – ರಾತ್ರಿ 8 ಗಂಟೆ IST– ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ.. ಡಿಪಿ ವರ್ಲ್ಡ್ ಐಎಲ್‌ಟಿ 20 ರ ಮೂರನೇ ಸೀಸನ್ ಜನವರಿ 11 ರಿಂದ ಫೆಬ್ರವರಿ 9, 2025 ರವರೆಗೆ ನಡೆಯಲಿದೆ. ಎಲ್ಲಾ 34 ಪಂದ್ಯಗಳು ಮೂರು ಸ್ಥಳಗಳಲ್ಲಿ ನಡೆಯಲಿವೆ - ದುಬೈ, ಅಬುಧಾಬಿ ಮತ್ತು ಶಾರ್ಜಾ. ಅಂತರರಾಷ್ಟ್ರೀಯ ಲೀಗ್‌ನ 6 ಫ್ರಾಂಚೈಸ್ ತಂಡಗಳಲ್ಲಿ ಅಬುಧಾಬಿ ನೈಟ್ ರೈಡರ್ಸ್, ಡೆಸರ್ಟ್ ವೈಪರ್ಸ್, ದುಬೈ ಕ್ಯಾಪಿಟಲ್ಸ್, ಗಲ್ಫ್ ಜೈಂಟ್ಸ್, ಎಂಐ ಎಮಿರೇಟ್ಸ್ ಮತ್ತು ಶಾರ್ಜಾ ವಾರಿಯರ್ಜ್ ಸೇರಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News