ZEENIA ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ, ನೆಚ್ಚಿನ ಸಿಎಂ ಕೇಜ್ರಿವಾಲ್ 

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ,ಆದರೆ ಎಎಪಿ ಮಾಜಿ ಸಿಎಂ ಕೇಜ್ರಿವಾಲ್ ನೇತೃತ್ವದಲ್ಲಿಯೇ ಚುನಾವಣೆಯ ಕಣಕ್ಕೆ ಇಳಿದಿದೆ.

Written by - Manjunath N | Last Updated : Feb 5, 2025, 10:12 PM IST
  • ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ,
  • ಆದರೆ ಎಎಪಿ ಮಾಜಿ ಸಿಎಂ ಕೇಜ್ರಿವಾಲ್ ನೇತೃತ್ವದಲ್ಲಿಯೇ ಚುನಾವಣೆಯ ಕಣಕ್ಕೆ ಇಳಿದಿದೆ.
  • ಜಿನಿಯಾ ಸಮೀಕ್ಷೆಯ ಪ್ರಕಾರ,ಶೇ 50 ರಷ್ಟು ಜನರು ತಮ್ಮ ನೆಚ್ಚಿನ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.
ZEENIA ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ, ನೆಚ್ಚಿನ ಸಿಎಂ ಕೇಜ್ರಿವಾಲ್  title=

ನವದೆಹಲಿ: ಬುಧವಾರದಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 60% ರಷ್ಟು ಮತದಾನವಾಗಿದೆ.ಮತದಾನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಹೊರಬಿದ್ದಿವೆ, ಇದು ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ತೀವ್ರ ಪೈಪೋಟಿಯ ಸುಳಿವು ನೀಡಿದೆ.

ಜೀ ನ್ಯೂಸ್-ಐಸಿಪಿಎಲ್ ಎಐ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಎಎಪಿ 33 ರಿಂದ 38 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಬಿಜೆಪಿ 31 ರಿಂದ 36 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.ಇನ್ನೊಂದೆಡೆಗೆ ಕಾಂಗ್ರೆಸ್ 0 ರಿಂದ 2 ಸ್ಥಾನಗಳನ್ನು ಪಡೆಯಲಿದೆ. ಈ ಬಾರಿ ಕಳೆದುಹೋದ ಮತ ಪ್ರಮಾಣವನ್ನು ಮರಳಿ ಪಡೆಯುವ ಮೂಲಕ ಕಾಂಗ್ರೆಸ್ ಎಎಪಿಗೆ ನಷ್ಟ ಮಾಡುವ ಸಾಧ್ಯತೆಯಿದೆ.

ಅಂತಿಮ ಫಲಿತಾಂಶಕ್ಕೂ ಮುನ್ನ ಜೀ ನ್ಯೂಸ್ ಹಾಗೂ ಐಸಿಪಿಎಲ್ ಸಂಸ್ಥೆಗಳು ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ AI ಸಮೀಕ್ಷೆಯನ್ನು ನಡೆಸಿದ್ದವು.ಈ ಸಮೀಕ್ಷೆಯಲ್ಲಿ, 5 ಲಕ್ಷ ಜನರಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗಿತ್ತು. ಇದರಲ್ಲಿ ಯಮುನಾ ನೀರು ಮತ್ತು ದೆಹಲಿ ಗಲಭೆಗಳು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ಸಿಎಂ ಬಗ್ಗೆಯೂ ಹೇಳಿಕೊಂಡಿದ್ದರು.

ಸಾರ್ವಜನಿಕರ ಮೊದಲ ಆಯ್ಕೆ:

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ, ಆದರೆ ಎಎಪಿ ಮಾಜಿ ಸಿಎಂ ಕೇಜ್ರಿವಾಲ್ ನೇತೃತ್ವದಲ್ಲಿಯೇ ಚುನಾವಣೆಯ ಕಣಕ್ಕೆ ಇಳಿದಿದೆ.ಜಿನಿಯಾ ಸಮೀಕ್ಷೆಯ ಪ್ರಕಾರ,ಶೇ 50 ರಷ್ಟು ಜನರು ತಮ್ಮ ನೆಚ್ಚಿನ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.ಶೇ 30 ರಷ್ಟು ಜನರು ಬಿಜೆಪಿಯ ಪರ್ವೇಶ್ ವರ್ಮಾ ಮತ್ತು ಶೇ. 20 ರಷ್ಟು ಜನರು ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಅವರನ್ನು ತಮ್ಮ ನೆಚ್ಚಿನ ಮುಖ್ಯಮಂತ್ರಿ ಎಂದು ಹೆಸರಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ 48 ಕೋಟಿ ಶಿಕ್ಷಣ ಸಾಲ ಮನ್ನಾ!...... ಯಾರಿಗೆಲ್ಲ ಆಗಿದೆ, ಇಲ್ಲಿದೆ ನೋಡಿ

ಜಿನಿಯಾ ಸಮೀಕ್ಷೆಯ ಪ್ರಕಾರ, ದೆಹಲಿ ಚುನಾವಣೆಯಲ್ಲಿ ಪ್ರಮುಖ ಸಮಸ್ಯೆಯೆಂದರೆ ಕಾನೂನು ಸಮಸ್ಯೆ ಎನ್ನಲಾಗಿದೆ. ಶೇ 30 ರಷ್ಟು ಜನರು ಕಾನೂನು ಮತ್ತು ಸುವ್ಯವಸ್ಥೆಯನ್ನು ಅತಿ ದೊಡ್ಡ ಸಮಸ್ಯೆ ಎಂದು ಪರಿಗಣಿಸಿದ್ದಾರೆ.ಇದರ ನಂತರ, ಶೇ. 25 ರಷ್ಟು ಜನರು ನೀರನ್ನು, ಶೇ. 20 ರಷ್ಟು ಜನರು ರಸ್ತೆಗಳನ್ನು, ಶೇ. 15 ರಷ್ಟು ಜನರು ಹಣದುಬ್ಬರವನ್ನು ಮತ್ತು ಶೇ. 10 ರಷ್ಟು ಜನರು ನಿರುದ್ಯೋಗವನ್ನು ದೊಡ್ಡ ಸಮಸ್ಯೆಯೆಂದು ಪರಿಗಣಿಸಿದ್ದಾರೆ. ಇದಲ್ಲದೆ, ಶೇಕಡಾ 55 ರಷ್ಟು ಜನರು ಮದ್ಯ ಹಗರಣವು ಚುನಾವಣೆಗಳ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ, ಆದರೆ ಶೇಕಡಾ 45 ರಷ್ಟು ಜನರು ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ದೆಹಲಿ ಚುನಾವಣೆಯ ಮೇಲೆ ಗಲಭೆಯ ಅಂಶವು ಪರಿಣಾಮ ಬೀರಿದೆ ಎಂದು ಶೇಕಡಾ 60 ರಷ್ಟು ಜನರು ಒಪ್ಪಿಕೊಂಡಿದ್ದಾರೆ, ಆದರೆ ಶೇಕಡಾ 30 ರಷ್ಟು ಜನರು ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ.

ಯಾರಿಗೆ ಎಷ್ಟು ಸ್ಥಾನ?

ಜಿನಿಯಾ ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ (ಎಎಪಿ) 33-38 ಸ್ಥಾನಗಳನ್ನು, ಭಾರತೀಯ ಜನತಾ ಪಕ್ಷ (ಬಿಜೆಪಿ) 31-36 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 0-2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ. ಗೆಲ್ಲುವ ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ ನಲ್ಲಿ ಭದ್ರವಾಗಿದೆ. ಫೆಬ್ರವರಿ 8 ರಂದು ಅಂತಿಮ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News