Keerthy suresh akka : ಮದುವೆಯಾದ ನಂತರ ಕೀರ್ತಿ ಸುರೇಶ್ ಸಖತ್ ಬೋಲ್ಡ್ ಆಗಿದ್ದಾರೆ.. ಇದೀಗ ಕೀರ್ತಿ ಲೇಡಿ ಡಾನ್ ಪಾತ್ರದಲ್ಲಿ ನಟಿಸಿರುವ "ಅಕ್ಕ" ವೆಬ್ ಸರಣಿಯ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.. ಟೀಸರ್ನಲ್ಲಿ ಮಾಹಾನಟಿಯ ನ್ಯೂ ಲುಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ..
ಕೀರ್ತಿ ಸುರೇಶ್ ಹಿಂದೆಂದೂ ನೋಡಿರದ ಪಾತ್ರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ. "ಅಕ್ಕ"ನ ಸಿನಿಮಾದ ಟೀಸರ್ ನೋಡಿದ ನಂತರ ಅಭಿಮಾನಿಗಳು ಈಗಾಗಲೇ ಶಾಕ್ ಆಗಿದ್ದಾರೆ. ಮಹಾನಟಿ ಈ ರೀತಿ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ನಿರೀಕ್ಷಿಸಿರಲಿಲ್ಲ ಎಂಬ ಕಾಮೆಂಟ್ಗಳು ಬರುತ್ತಿವೆ.
ಇತ್ತೀಚೆಗೆ ಬಿಡುಗಡೆಯಾದ ಅಕ್ಕ ಚಿತ್ರದ ಟೀಸರ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಶ್ ರಾಜ್ ಫಿಲ್ಮ್ಸ್ ಮತ್ತು ನೆಟ್ಫ್ಲಿಕ್ಸ್ ಜಂಟಿಯಾಗಿ ಈ ವೆಬ್ ಸರಣಿಯನ್ನು ನಿರ್ಮಿಸಿವೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ನೆಟ್ಫ್ಲಿಕ್ಸ್ನಲ್ಲಿ ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆಯಾಗಿದೆ.
ಈ ಚಿತ್ರವು ಪೆರ್ನೂರಿನ ಒಬ್ಬ ಹುಡುಗಿ ತನ್ನ ಅಕ್ಕನ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯ ಸುತ್ತ ಸುತ್ತುತ್ತದೆ. ಇದರಲ್ಲಿ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ಸದ್ಯ ಕೀರ್ತಿ ಬೋಲ್ಡ್ ಲುಕ್ ಫೋಟೋಸ್ ಸಖತ್ ವೈರಲ್ ಆಗುತ್ತಿವೆ..
ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಥೋನಿ ಟ್ಯಾಟಿಲ್ ಅವರನ್ನು ಗೋವಾದಲ್ಲಿ ವಿವಾಹವಾದರು. ಮದುವೆಯಾದ ನಂತರವೂ ಮಹಾನಟಿ ಮಂಗಳ ಸೂತ್ರದೊಂದಿಗೆ ಫೋಟೋಶೂಟ್ನಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು. ಇತ್ತೀಚಿಗೆ ತೆರೆಕಂಡ ಬೇಬಿ ಜಾನ್ ಚಿತ್ರ ದೊಡ್ಡ ಹಿಟ್ ಆಗಲಿಲ್ಲ.
ಕೀರ್ತಿ ಪತಿ ಆಂಥೋನಿ ಟ್ಯಾಟಿಲ್ ನಾಚಿಕೆ ಸ್ವಭಾವದವರಾಗಿದ್ದು, ಮಿಡಿಯಾ ಮತ್ತು ಸೋಷಿಯಲ್ ಮೀಡಿಯಾದಲ್ಲಿ ದೂರ ಇರುತ್ತಾರೆ ಅಂತ ಹೇಳಲಾಗಿದೆ. ಮದುವೆಗೆ ಮೊದಲಿನಷ್ಟೇ ತಾವು ಸಂತೋಷದಿಂದ ಇದ್ದಿದ್ದಾಗಿ ನಟಿ ಇತ್ತೀಚಿಗೆ ಹೇಳಿಕೊಂಡಿದ್ದರು.
ಇದರ ನಡುವೆ ಸದ್ಯ ಅಕ್ಕ ಲುಕ್ ನೋಡಿ ನೆಟ್ಟಿಗರು ಹುಚ್ಚರಾಗುತ್ತಿದ್ದಾರೆ. ಜನರು ಈ ಚಿತ್ರವನ್ನು ವೀಕ್ಷಿಸಲು ಆಸಕ್ತಿ ತೋರಿಸುತ್ತಿದ್ದಾರೆ. ರಿಲೀಸ್ ನಂತರ ಪ್ರೇಕ್ಷಕ ಮಹಾಶಯ ಸಿನಿಮಾ ಬಗ್ಗೆ ಏನ್ ಅಂತಾನೆ ಅಂತ ಕಾಯ್ದು ನೋಡಬೇಕಿದೆ..