ಕಿರುತೆರೆ ಸ್ಟಾರ್‌ ನಟಿಯ ದಾಂಪತ್ಯದಲ್ಲಿ ಬಿರುಕು.. ಬಿಗ್‌ ಬಾಸ್‌ನಿಂದ ಬರುತ್ತಿದ್ದಂತೆ ಡಿವೋರ್ಸ್‌! ಕೊನೆಗೂ ಜನ ಅನ್ಕೊಂಡಿದ್ದೇ ಆಯ್ತು?

Famous Tv Serial Actress divorce: ಬಿಗ್‌ ಬಾಸ್‌ ಕನ್ನಡ, ಹಿಂದಿ, ತಮಿಳು, ತೆಲುಗುವಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಶೋ ನಿಂದ ಹೊರ ಬಂದ ಖ್ಯಾತ ನಟಿಯೊಬ್ಬರು ಗಂಡನಿಂದ ವಿಚ್ಛೇದನ ಪಡೆದಿದ್ದು, ಎಲ್ಲರಿಗೂ ಶಾಕ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ನಟಿ ವೀಣಾ ನಾಯರ್ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ವೀಣಾ ನಾಯರ್ ಮತ್ತು ಆರ್ ಜೆ ಅಮನ್ ಭೈಮಿ ಅಲಿಯಾಸ್ ಸ್ವಾತಿ ಸುರೇಶ್ ಇಬ್ಬರೂ ಕುಟುಂಬ ನ್ಯಾಯಾಲಯಕ್ಕೆ ತಮ್ಮ ವಿಚ್ಛೇದನದ ಕೊನೆಯ ಹಂತಗಳನ್ನು ಪೂರ್ಣಗೊಳಿಸಿದರು.

2 /7

ವೀಣಾ ನಾಯರ್ ಮತ್ತು ಆರ್ ಜೆ ಅಮನ್ 2014 ರಲ್ಲಿ ವಿವಾಹವಾದರು. ಅವರಿಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. 2022 ರಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬರಲು ಆರಂಭಿಸಿತು. 

3 /7

ವೀಣಾ ನಾಯರ್ ಅವರು ತಾವು ಇನ್ನು ಮುಂದೆ ಗಂಡನ ಒಟ್ಟಿಗೆ ಇರಲ್ಲ ಎಂದು ದೃಢಪಡಿಸಿದರು. ಕಾನೂನುಬದ್ಧವಾಗಿ ಬೇರ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು, ಮತ್ತು ಮೂರು ವರ್ಷಗಳ ನಂತರ ಕಾನೂನುಬದ್ಧವಾಗಿ ಡಿವೋರ್ಸ್‌ ಪಡೆದು ಬೇರ್ಪಟ್ಟಿದ್ದಾರೆ.

4 /7

ವೀಣಾ ಈ ಹಿಂದೆ ಸಂದರ್ಶನವೊಂದರಲ್ಲಿ ತಾನು ಜೀವನದಲ್ಲಿ ಸಂತೋಷವಾಗಿದ್ದೇನೆ. ತನ್ನ ಮಗ ಇಬ್ಬರೊಂದಿಗೂ ಬೆಳೆಯುತ್ತಾನೆ ಎಂದು ಹೇಳಿದ್ದರು. ಅವನಿಗೆ ತಂದೆಯ ಪ್ರೀತಿ ಸಿಗುತ್ತಿದೆ. ನಾನು ನಿಮಗೆ ತಾಯಿಯ ಪ್ರೀತಿಯನ್ನು ಮಾತ್ರ ನೀಡಬಲ್ಲೆ ಎಂದಿದ್ದರು.

5 /7

ನಮ್ಮ ನಡುವಿನ ಸಮಸ್ಯೆ ನಮಗಷ್ಟೇ ಸೀಮಿತ. ಪ್ರತಿಯೊಬ್ಬರ ಜೀವನದಲ್ಲೂ ಎಲ್ಲದಕ್ಕೂ ಒಂದು ಪೂರ್ಣವಿರಾಮ ಇದ್ದೇ ಇರುತ್ತದೆ. ಈ ವಿಷಯದಲ್ಲೂ ಇದೇ ರೀತಿಯ ಪೂರ್ಣವಿರಾಮ ಬೀಳಲಿದೆ ಎಂದಿದ್ದರು. 

6 /7

ಬಿಗ್ ಬಾಸ್ ತನ್ನ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಿದೆ ಎಂಬ ವರದಿಗಳನ್ನು ವೀಣಾ ನಿರಾಕರಿಸಿದರು. ಒಂದು ಶೋನಿಂದಾಗಿ ಕುಟುಂಬ ಒಡೆಯುವುದಿಲ್ಲ ಹಲವಾರು ದಿನಗಳವರೆಗಿನ ಬಿರುಕಿನಿಂದ ಅದು ಸಂಭವಿಸುತ್ತದೆ. ಬಿಗ್ ಬಾಸ್ ನಿಂದಾಗಿ ನನ್ನ ಕುಟುಂಬ ಮುರಿದು ಬಿದ್ದಿದೆ ಎಂದು ಹೇಳುವ ಅನೇಕ ಕಾಮೆಂಟ್‌ಗಳನ್ನು ನಾನು ನೋಡಿದೆ. ಅದು ನಿಜವಲ್ಲ ಎಂದಿದ್ದಾರೆ.

7 /7

ವೀಣಾ ನಾಯರ್ ಮಿನಿಸ್ಕ್ರೀನ್ ಸರಣಿಯ ಮೂಲಕ ನಟನಾ ಜಗತ್ತಿಗೆ ಪ್ರವೇಶಿಸಿದರು. ನಂತರ ಹಾಸ್ಯನಟಿಯಾಗಿಯೂ ಗುರುತಿಸಿಕೊಂಡರು. ಚಲನಚಿತ್ರಗಳಲ್ಲಿಯೂ ಸಕ್ರಿಯರಾದರು. ವೀಣಾ ಬಿಗ್ ಬಾಸ್ ಮಲಯಾಳಂನ ಎರಡನೇ ಸೀಸನ್‌ನಲ್ಲಿ ಸ್ಪರ್ಧಿಸಿದ್ದರು.