Malavya Rajyoga Impact: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರಸ್ತುತ ಶುಕ್ರನು ತನ್ನ ಉಚ್ಚ ರಾಶಿಯಾದ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದಾಗಿ ಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಮಾಲವ್ಯ ರಾಜಯೋಗ ನಿರ್ಮಾಣವಾಗಿದೆ.
ಮಾಲವ್ಯ ರಾಜಯೋಗ ರಚನೆಯಿಂದಾಗಿ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರ ಬದುಕಿನಲ್ಲಿ ಅದೃಷ್ಟವೇ ಬದಲಾಗಲಿದೆ. ಅವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದ್ದು, ಅಪಾರ ಹಣ ಕೈ ಸೇರಲಿದೆ. ಭೂಮಿ, ಆಸ್ತಿ ಖರೀದಿ ಯೋಗವೂ ಇದೆ ಎನ್ನಲಾಗುತ್ತಿದೆ.
ಮೇಷ ರಾಶಿ:
ಮಾಲವ್ಯ ರಾಜಯೋಗವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಪ್ರಮೋಷನ್, ಸನ್ಮಾನವನ್ನು ನೀಡಲಿದೆ. ಜೀವನದಲ್ಲಿ ತಲೆದೂರಿದ್ದ ದೊಡ್ಡ ಸಮಸ್ಯೆಗಳು ಮಂಜಿನಂತೆ ಕರಗಲಿವೆ. ನಿಮ್ಮ ವಿರುದ್ಧ ಯಾರೇ ಪಿತೂರಿ ಮಾಡಿದರೂ ಕೆಲಸದಲ್ಲಿ ಜಯ ನಿಮ್ಮದೇ ಆಗಿರಲಿದೆ.
ಇದನ್ನೂ ಓದಿ- Magha Purnima 2025: ಮಾಘ ಪೂರ್ಣಿಮೆಯಂದು ಈ 2 ರಾಶಿಗಳ ಅದೃಷ್ಟವೇ ಬದಲಾಗಲಿದೆ!!
ವೃಷಭ ರಾಶಿ:
ಶುಕ್ರ ಸಂಚಾರದಿಂದ ಈ ರಾಶಿಯವರ ಜೀವಂದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ಉದ್ಯೋಗ ರಂಗದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ಆದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ.
ಮಿಥುನ ರಾಶಿ:
ಶುಕ್ರನ ಪ್ರಭಾವದಿಂದ ಕೌಟುಂಬಿಕ ಸುಖ ಹೆಚ್ಚಾಗಲಿದೆ. ಹೂಡಿಕೆಯಿಂದ ಲಾಭವಾಗಲಿದ್ದು ಹೊಸ ಮನೆ, ಆಸ್ತಿ ಖರೀದಿ ಯೋಗವಿದೆ. ವ್ಯಾಪಾರಸ್ಥರಿಗೆ ಭರ್ಜರಿ ಲಾಭ ದೊರೆಯಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವಿರಿ.
ಸಿಂಹ ರಾಶಿ:
ಶುಕ್ರ ಸಂಚಾರ ಮಾಲವ್ಯ ರಾಜಯೋಗದಿಂದ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಕೀರ್ತಿ, ಗೌರವ ಹೆಚ್ಚಾಗಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದೆ. ದಿಢೀರ್ ಧನಲಾಭದಿಂದ ಸಾಲದಿಂದ ಪರಿಹಾರ ಪಡೆಯುವಿರಿ.
ಇದನ್ನೂ ಓದಿ- ಧನಿಷ್ಠ ನಕ್ಷತ್ರಕ್ಕೆ ಸೂರ್ಯನ ಪ್ರವೇಶ: ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಶ್ರೀಮಂತಿಕೆಯ ಯೋಗ!!
ವೃಶ್ಚಿಕ ರಾಶಿ:
ಮಾಲವ್ಯ ರಾಜಯೋಗವು ಈ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಹಠಾತ್ ಧನಲಾಭವು ನಿಮ್ಮ ಮನೆಯಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.