Dr Rajkumar English: ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗವೇ ಮೆಚ್ಚಿ ಕೊಂಡಾಡಿದ ಕನ್ನಡದ ಹೆಮ್ಮೆಯ ನಟ ಡಾ. ರಾಜ್ ಕುಮಾರ್ ಅವರಿಗೆ ವಿಶೇಷ ಸ್ಥಾನಮಾನವನ್ನು ಕನ್ನಡಿಗರು ಕೊಟ್ಟಿದ್ದಾರೆ. ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದ ಅಣ್ಣಾವ್ರು ಕನ್ನಡ ಸಿನಿರಂಗಕ್ಕೆ ಮತ್ತು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಂತಿಂಥದ್ದಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗವೇ ಮೆಚ್ಚಿ ಕೊಂಡಾಡಿದ ಕನ್ನಡದ ಹೆಮ್ಮೆಯ ನಟ ಡಾ. ರಾಜ್ ಕುಮಾರ್ ಅವರಿಗೆ ವಿಶೇಷ ಸ್ಥಾನಮಾನವನ್ನು ಕನ್ನಡಿಗರು ಕೊಟ್ಟಿದ್ದಾರೆ. ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದ ಅಣ್ಣಾವ್ರು ಕನ್ನಡ ಸಿನಿರಂಗಕ್ಕೆ ಮತ್ತು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಂತಿಂಥದ್ದಲ್ಲ
ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಅಗಲಿ 20 ವರ್ಷಗಳೇ ಕಳೆದಿದ್ದರೂ ಇಂದಿಗೂ ಅವರನ್ನು ಸಿನಿಪ್ರಿಯರು ಮರೆತಿಲ್ಲ. ಕನ್ನಡ ಚಿತ್ರರಂಗದ ಹಿರಿಯರನ್ನು ನೆನಪಿಸಿಕೊಂಡಾಗಲೆಲ್ಲಾ ಮೊದಲಿಗೆ ನೆನಪಿಗೆ ಬರುವುದು ರಾಜ್ ಕುಮಾರ್ ಅವರ ಹೆಸರು.
ಅಂದಹಾಗೆ ಸಿನಿರಂಗದಲ್ಲಿ ಅಷ್ಟೆಲ್ಲಾ ಸಾಧನೆ ಮಾಡಿರುವ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಓದಿದ್ದು ಕೇವಲ ನಾಲ್ಕನೇ ತರಗತಿ. ಆದರೆ ಕನ್ನಡದ ಮೇಲೆ ಅವರಿಗಿದ್ದ ಅಭಿಮಾನ ಎಂಥಹವರನ್ನೂ ಬೆರಗುಗೊಳಿಸುವಂತಹದ್ದು. ಅಷ್ಟೊಂದು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದ ರಾಜ್ ಕುಮಾರ್ ಅವರು ಸಿನಿಮಾರಂಗಕ್ಕೆ ಕಾಲಿಟ್ಟ ಬಳಿಕ ಕೆಲವು ಸಿನಿಮಾಗಳಲ್ಲಿ ಇಂಗ್ಲಿಷ್ ಭಾಷೆಯಲ್ಲೂ ಅಲ್ಪ ಸ್ವಲ್ಪ ಮಾತಾಡುವುದನ್ನು ಕಲಿತಿದ್ದರು.
ಅಷ್ಟಕ್ಕೂ ಅಣ್ಣಾವ್ರಿಗೆ ಇಂಗ್ಲಿಷ್ ಕಲಿಸಿಕೊಟ್ಟಿದ್ದು ಯಾರು? ಅವರು ಮೊದಲು ಮಾತನಾಡಿದ್ದ ಆ ಮೂರು ವಾಕ್ಯಗಳು ಯಾವುವು ಎಂಬುದನ್ನು ತಿಳಿಯೋಣ. ಬೆಂಗಳೂರು ನಾಗೇಶ್ ಅವರು ಅಣ್ಣಾವ್ರ ಆಪ್ತರಲ್ಲಿ ಒಬ್ಬರು. ಇವರೇ ಮೊದಲ ಬಾರಿಗೆ ಅಣ್ಣಾವ್ರಿಗೆ ಇಂಗ್ಲೀಷ್ ಕಲಿಸಿದ್ದು. ಇತ್ತೀಚೆಗೆ ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದರು.
"ರಾಜ್‌ಕುಮಾರ್ ಅವರಿಗೂ ನನ್ನನ್ನು ಕಂಡರೆ ವಿಶ್ವಾಸ. ನಾನು ಓದಿದ್ದೀನಿ ಅಂತ ಹೇಳಿ ಅವರಿಗೆ ಗೌರವ. ಅವರಿಗೂ ನನಗೂ ಸುಮಾರು 30 ವರ್ಷದ ಸ್ನೇಹ. ಜೊತೆಯಲ್ಲೇ ಕೆಲಸ, ಜೊತೆಯಲ್ಲೇ ಊಟ, ಜೊತೆಯಲೇ ನಿದ್ದೆ, ಜೊತೆಯಲ್ಲಿಯೇ ಟ್ರಾವೆಲಿಂಗ್. ಶೂಟಿಂಗ್‌ನಲ್ಲಿ ಗ್ಯಾಪ್ ಇದ್ದಾಗ ಸಂಜೆಯ ಹೊತ್ತು ವಾಕಿಂಗ್ ಹೋಗುತ್ತಿದ್ದೇವು. ಆಗ ನಾನು ಅಣ್ಣ ನೀವು ಯಾಕೆ ಇಂಗ್ಲಿಷ್ ಕಲಿಯಬಾರದು ಅಂತ ಕೇಳಿದೆ. ಅದಕ್ಕೆ ಅವರು, ಹೋಗ್ರಿ ನಾಗೇಶ್ ನಾಲ್ಕನೇ ಕ್ಲಾಸ್ ಓದಿರೋನು ನನಗೆಲ್ಲಿ ಇಂಗ್ಲಿಷ್ ಬರುತ್ತೆ ಅಂದ್ರು. ಹಾಗೆ ಹೇಳಬೇಡಿ. ನಿಮಗೆ ಕಲಿಯುವುದಕ್ಕೆ ಆಸಕ್ತಿ ಇದ್ದರೆ ನಾನು ನಿಮಗೆ ಇಂಗ್ಲಿಷ್ ಹೇಳಿಕೊಡುತ್ತೇನೆ ಅಂದೆ. ಆಯ್ತು ಅದನ್ನು ನೋಡಿ ಬಿಡೋಣ ಅಂದರು" ಎಂದು ಬೆಂಗಳೂರು ನಾಗೇಶ್ ಹೇಳಿದರು.
"ಅಂದಿನಿಂದ ಹೌ ಆರ್ ಯು.., ವೆನ್ ಆರ್ ಯು ಕಮಿಂಗ್.., ಆರ್ ಯು ಕಮಿಂಗ್..? ಈತರ ಸಣ್ಣ ಪುಟ್ಟ ಪದಗಳನ್ನು ಹೇಳುತ್ತಿದ್ದೆ. ಮಾರನೇ ದಿನ ಬಂದಾಗ ಗುರುಗಳೇ ನಾನು ಹೇಳಲಾ ಅಂದರು. ಅಯ್ಯೋ ಗುರುಗಳೇ ಅನ್ನಬೇಡಿ. ನಾನು ನಿಮ್ಮ ಶಿಷ್ಯ. ನೀವು ನನ್ನ ಗುರುಗಳು ಅಂತ ಹೇಗಿದೆ. ಎಷ್ಟು ಪರ್ಫೆಕ್ಟ್ ಆಗಿ ಹೇಳೋರು ಅಂದರೆ, ಮುಂದಿನ ದಿನಗಳಲ್ಲಿ ಎರಡು ಕನಸು ಸಿನಿಮಾದಲ್ಲಿ ಷೇಕ್ಸ್‌ಪಿಯರ್ ಪಾಠ ಮಾಡುತ್ತಾರೆ. ಆ ಮನುಷ್ಯನಿಗೆ ಅಷ್ಟು ಆಸಕ್ತಿ" ಎಂದು ಹಳೆಯ ಸುಂದರ ದಿನಗಳನ್ನು ನೆನಪಿಸಿಕೊಂಡರು.