How to remove yellow stain from teeth: ನಗು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಅನೇಕ ಬಾರಿ ಜನರು ಹಳದಿ ಮತ್ತು ಕೊಳಕು ಹಲ್ಲುಗಳಿಂದ ಮುಕ್ತವಾಗಿ ನಗಲು ಸಾಧ್ಯವಾಗುವುದಿಲ್ಲ. ಕೊಳಕು ಮತ್ತು ಹಳದಿ ಹಲ್ಲುಗಳು ಮುಖದ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಇದರಿಂದಾಗಿ ನಿಮ್ಮ ಹಲ್ಲುಗಳು ದುರ್ಬಲವಾಗುತ್ತವೆ. ಇದರಿಂದ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ವೈದ್ಯರು ಹಲ್ಲುಗಳನ್ನು ಸ್ವಚ್ಛವಾಗಿಡಲು ದಿನಕ್ಕೆ ಎರಡು ಬಾರಿ ಹಲ್ಲುಜ್ಜಲು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ಹಲ್ಲುಗಳನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಆದರೆ ಕೆಲವು ಜನರ ಹಲ್ಲುಗಳು ಎರಡು ಬಾರಿ ಹಲ್ಲುಜ್ಜಿದ ನಂತರವೂ ಹಳದಿ ಬಣ್ಣದಲ್ಲಿರುತ್ತವೆ. ಇಂಹತ ಪರಿಸ್ಥಿತಿಯಲ್ಲಿ ಹಲ್ಲುಗಳ ಹಳದಿ ಬಣ್ಣವನ್ನು ತೊಡೆದುಹಾಕಲು ಈ ಮನೆಮದ್ದುಗಳನ್ನು ಪ್ರಯತ್ನಿಸಿರಿ.
ಹಳದಿ ಹಲ್ಲುಗಳಿಗೆ ಮನೆಮದ್ದುಗಳು
* ತೆಂಗಿನ ಎಣ್ಣೆ ಹಳದಿ ಹಲ್ಲುಗಳಿಗೆ ತುಂಬಾ ಪರಿಣಾಮಕಾರಿ. ನಿಮ್ಮ ಹಲ್ಲುಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ನಂತರ ನಿಮ್ಮ ಕೈಗಳಿಂದ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಹಳದಿ ಹಲ್ಲುಗಳು ಬಿಳಿಯಾಗುತ್ತವೆ.
ಇದನ್ನೂ ಓದಿ: ತಿನ್ನಬೇಕೆಂದು ಎಷ್ಟೇ ಆಸೆಯಾಗಿದ್ದರೂ ಸಹ... ಈ ಆರೋಗ್ಯ ಸಮಸ್ಯೆ ಇದ್ದವರು ಕಲ್ಲಂಗಡಿ ಹಣ್ಣು ತಿನ್ನಬಾರದು!
* ತೆಂಗಿನ ಎಣ್ಣೆಯನ್ನು ಅರಿಶಿನದೊಂದಿಗೆ ಬೆರೆಸಿ ನಿಮ್ಮ ಹಲ್ಲುಗಳಿಗೆ ಉಜ್ಜಿದರೆ, ಇದು ನಿಮ್ಮ ಹಳದಿ ಹಲ್ಲುಗಳನ್ನು ಬಿಳಿಯನ್ನಾಗಿ ಮಾಡುತ್ತದೆ. ಇದು ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸುತ್ತದೆ ಮತ್ತು ಹಲ್ಲುಗಳ ಮೇಲಿನ ಹಳದಿ ಪದರವು ಕ್ರಮೇಣ ಕಣ್ಮರೆಯಾಗುತ್ತದೆ.
* ಅಡುಗೆ ಸೋಡಾ, ತೆಂಗಿನ ಎಣ್ಣೆ ಮತ್ತು ಅರಿಶಿನವನ್ನು ಬೆರೆಸಿ ಹಲ್ಲುಗಳಿಗೆ ಉಜ್ಜುವುದರಿಂದ ಹಳದಿ ಹಲ್ಲುಗಳು ಬಿಳಿಯಾಗುತ್ತವೆ. ಹೀಗೆ 15 ದಿನಗಳ ಕಾಲ ಮಾಡಿದರೆ ನಿಮ್ಮ ಹಲ್ಲುಗಳು ಮತ್ತೆ ಹೊಳಪು ಪಡೆಯುತ್ತವೆ.
* ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಹಲ್ಲುಗಳಲ್ಲಿ ಸಿಲುಕಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಆದ್ದರಿಂದ ಪುದೀನ ರಸವನ್ನು ಅರಿಶಿನದೊಂದಿಗೆ ಬೆರೆಸಿ ಹಲ್ಲುಜ್ಜಿಕೊಳ್ಳಿ. ಇದು ನಿಮ್ಮ ಹಲ್ಲುಗಳನ್ನು ಆರೋಗ್ಯವಾಗಿಡುತ್ತದೆ ಮತ್ತು ಹಲ್ಲುನೋವಿನಿಂದ ಪರಿಹಾರವನ್ನು ನೀಡುತ್ತದೆ.
* ಹಳದಿ ಹಲ್ಲುಗಳನ್ನು ತೊಡೆದುಹಾಕಲು ಕಿತ್ತಳೆ ಸಿಪ್ಪೆ ತುಂಬಾ ಪರಿಣಾಮಕಾರಿ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ನಂತರ ಅದನ್ನು ಪುಡಿ ಮಾಡಿ. ಈಗ ಆ ಪುಡಿಯಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಹಳದಿ ಹಲ್ಲುಗಳು ಹಾಲಿನಂತೆ ಬೆಳ್ಳಗಾಗುತ್ತವೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.