IND vs ENG, 2nd ODI: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಹಿಟ್ಮ್ಯಾನ್ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ೨ನೇ ಏಕದಿನ ಪಂದ್ಯದಲ್ಲಿ ರೋಹಿತ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಮತ್ತೆ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 304 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್ ಶರ್ಮಾ (119) ಹಾಗೂ ಶುಭ್ಮನ್ ಗಿಲ್ (60) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 136 ರನ್ಗಳ ಜೊತೆಯಾಟ ನೀಡಿತು. ದೀರ್ಘ ಕಾಲದಿಂದ ಕಳಪೆ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮಾ ಇದೀಗ ಮತ್ತೆ ಅಬ್ಬರಿಸಿದ್ದಾರೆ. ಒಟ್ಟು 90 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 12 ಬೌಂಡರಿಗಳಿದ್ದ ಅಮೋಘ ಶತಕ ಸಾಧನೆ ಮಾಡಿದರು. ಇದು ರೋಹಿತ್ ಶರ್ಮಾರ 32 ಏಕದಿನ ಶತಕವಾಗಿದ್ದು, ಅವರ ವೃತ್ತಿ ಜೀವನದ 2ನೇ ವೇಗದ ಶತಕವಾಗಿದೆ. ರೋಹಿತ್ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದನ್ನೂ ಓದಿ: ಜಡೇಜಾ ಅಬ್ಬರದ ಬೌಲಿಂಗ್, ಹಿಟ್ ಮ್ಯಾನ್ನ ಬ್ಯಾಟಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್..
ದ್ರಾವಿಡ್ ಮತ್ತು ಗೇಲ್ ದಾಖಲೆ ಧೂಳಿಪಟ!
𝙄. 𝘾. 𝙔. 𝙈. 𝙄
1⃣1⃣9⃣ Runs
9⃣0⃣ Balls
1⃣2⃣ Fours
7⃣ SixesCaptain Rohit Sharma dazzled and how! ✨ ✨
Relive that stunning 𝗧𝗢𝗡 🎥 🔽 #TeamIndia | #INDvENG | @ImRo45 | @IDFCFIRSTBank https://t.co/0cabujjxah
— BCCI (@BCCI) February 9, 2025
ರೋಹಿತ್ ಶರ್ಮಾರಿಗೆ ಇದು 49ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಈ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಭಾರತದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ರನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ರೋಹಿತ್, ವಿರಾಟ್ ಕೊಹ್ಲಿ (81) ಮತ್ತು ಸಚಿನ್ ತೆಂಡೂಲ್ಕರ್ (100) ನಂತರದ ಸ್ಥಾನದಲ್ಲಿದ್ದಾರೆ.
ಗೇಲ್ ದಾಖಲೆ ಉಡೀಸ್!
ಈ ಪಂದ್ಯದಲ್ಲಿ ರೋಹಿತ್ ಒಟ್ಟು 7 ಸಿಕ್ಸರ್ ಸಿಡಿಸಿದ್ದು, ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ರನ್ನೂ ಹಿಂದಿಕ್ಕಿದ್ದಾರೆ. ಹಿಟ್ಮ್ಯಾನ್ ಇಂದಿನ ಪಂದ್ಯದ 7 ಸಿಕ್ಸರ್ಗಳು ಸೇರಿದಂತೆ ಒಟ್ಟು 332ಕ್ಕೆ ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ 331 ಸಿಕ್ಸರ್ಗಳನ್ನು ಸಿಡಿಸಿದ್ದು, ಪಾಕಿಸ್ತಾನದ ಶಾಹಿದ್ ಅಫ್ರಿದಿ 351 ಏಕದಿನ ಸಿಕ್ಸರ್ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
𝗔 𝘀𝘂𝗽𝗲𝗿 𝘀𝗵𝗼𝘄 𝘁𝗼 𝘀𝗲𝗮𝗹 𝗮 𝘄𝗶𝗻 𝗶𝗻 𝗖𝘂𝘁𝘁𝗮𝗰𝗸! ✅
The Rohit Sharma-led #TeamIndia beat England by 4⃣ wickets in the 2nd ODI & take an unassailable lead in the ODI series! 👏 👏
Scorecard ▶️ https://t.co/NReW1eEQtF#INDvENG | @IDFCFIRSTBank pic.twitter.com/G63vdfozd5
— BCCI (@BCCI) February 9, 2025
ಇದನ್ನೂ ಓದಿ: ಮಳೆಯೂ ಬಂದಿಲ್ಲ, ಆಟಗಾರನೂ ಗಾಯಗೊಂಡಿಲ್ಲ... ಆದ್ರೂ ಸ್ಥಗಿತವಾಯ್ತು ಭಾರತ vs ಇಂಗ್ಲೆಂಡ್ ಪಂದ್ಯ! ಕಾರಣವೇನು?
ಭಾರತಕ್ಕೆ ಸರಣಿ ಕೈವಶ!
ಇನ್ನು ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದ ಭಾರತ ತಂಡವು ಒಂದು ಪಂದ್ಯ ಬಾಕಿ ಇರುವಂತೆಯೇ 2-0ರಿಂದ ಸರಣಿಯನ್ನು ಕೈವಶ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಜೋ ರೂಟ್ (69), ಬೆನ್ ಡಕೆಟ್ (65), ಲಿಯಾಮ್ ಲಿವಿಂಗ್ಸ್ಟೋನ್ (41), ಜೋಸ್ ಬಟ್ಲರ್ (34), ಹ್ಯಾರಿ ಬ್ರೂಕ್ (31) ಮತ್ತು ಫಿಲಿಪ್ ಸಾಲ್ಟ್ (26) ರನ್ ಗಳಿಸಿದರು. ಭಾರತ ಪರ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ 35 ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ (119), ಶುಭಮನ್ ಗಿಲ್ (60), ಶ್ರೇಯಸ್ ಅಯ್ಯರ್ (44) ಮತ್ತು ಅಕ್ಸರ್ ಪಟೇಲ್ ಔಟಾಗದೆ 41 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.