highest runs in one ball: ಕ್ರಿಕೆಟ್ ಜಗತ್ತೇ ಕಂಡು ಕೇಳಿರದ ದಾಖಲೆಯ ಬಗ್ಗೆ ಈ ವರದಿಯಲ್ಲಿ ತಿಳಿಯೋಣ. ಒಂದು ಎಸೆತಕ್ಕೆ ಹೆಚ್ಚೆಂದರೆ 6 ರನ್ ಕಲೆ ಹಾಕಬಹುದು. ಅದೂ ಕೂಡ ಸಿಕ್ಸರ್ ಬಾರಿಸಿದರೆ. ಇಲ್ಲವೇ ಅಸಂಭವ ಘಟನೆಗಳ ಸಂದರ್ಭದಲ್ಲಿ ಅದಕ್ಕಿಂತ ಒಂದೆರಡು ಅಂಕಿ ಹೆಚ್ಚಾಗಿ ಸೇರ್ಪಡೆಗೊಳ್ಳಬಹುದೇನೋ... ಆದರೆ ಎಂದಾದರೂ ಒಂದೇ ಎಸೆತಕ್ಕೆ ಬರೋಬ್ಬರಿ 286 ರನ್ ಕಲೆ ಹಾಕಿರುವ ಬಗ್ಗೆ ಕೇಳಿದ್ದೀರಾ? ಕೇಳಿದ್ದರೂ ಅದ್ಹೇಗೆ ಎಂಬ ಪ್ರಶ್ನೆ ಉದ್ಭವಿಸಿದ್ಯಾ? ಇದಕ್ಕೆ ಈ ವರದಿಯಲ್ಲಿದೆ ನೋಡಿ ಉತ್ತರ.
ಇದನ್ನೂ ಓದಿ: ಸೀರೇಲಿ ಹುಡ್ಗಿರ ನೋಡಲೆಬಾರದು..! ಬಹುಷಃ ಈ ಸುಂದರಿ ನೋಡಿ ಈ ಮಾತು ಹೇಳಿರಬೇಕು..
ಅದು 1894ರಲ್ಲಿ ನಡೆದ ಘಟನೆ. ಅಂದರೆ ಸರಿಸುಮಾರು 130 ವರ್ಷಗಳಷ್ಟು ಹಳೆಯದ್ದು. ಬ್ಯಾಟ್ಸ್‌ಮನ್‌ಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಬೃಹತ್ ರನ್ ಕಲೆ ಹಾಕಿದ್ದರು. ಈ ಅಸಂಭವ ದಾಖಲೆ ಬಗ್ಗೆ, ಜನವರಿ 1894 ರಲ್ಲಿ ಲಂಡನ್‌ನಿಂದ ಪ್ರಕಟವಾದ 'ಪಾಲ್-ಮಾಲ್ ಗೆಜೆಟ್' ನಲ್ಲಿ ಉಲ್ಲೇಖಿಸಲಾಗಿದೆ ಎಂದು ESPN Cricinfo ಹೇಳಿದೆ.
1894ರ ಈ ಪಂದ್ಯದ ದೃಶ್ಯಗಳು ಯಾವುದೇ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, 1894 ರ ಜನವರಿ 15ರಂದು ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಮತ್ತು ಸ್ಕ್ರ್ಯಾಚ್-ಇಲೆವೆನ್ ಹೆಸರಿನ ಎರಡು ತಂಡಗಳ ನಡುವೆ ಪಂದ್ಯ ನಡೆದಿತ್ತು.
ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್ಸ್ ಕ್ರೀಸ್‌ನಲ್ಲಿದ್ದರು. ಈ ವೇಳೆ ದಾಂಡಿಗನೊಬ್ಬ ಸಿಕ್ಸರ್ ಬಾರಿಸಲೆಂದು ಬೀಸಿದ ರಭಸಕ್ಕೆ ಚೆಂಡು ಮರದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆ ಬಾಲ್ ತೆಗೆಯಲೆಂದು ಎದುರಾಳಿ ತಂಡ ಪ್ರಯತ್ನಿಸುತ್ತಿದ್ದರೆ, ಇತ್ತ ಕ್ರೀಸ್‌ನಲ್ಲಿದ್ದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಓಡಿದ್ದರು. ಮರದಲ್ಲಿ ಸಿಕ್ಕಿಬಿದ್ದ ಚೆಂಡನ್ನು ತೆಗೆಯುವುದು ಬಹುತೇಕ ಅಸಾಧ್ಯವಾಗಿತ್ತು. ಇದರಿಂದಾಗಿ ಬೌಲಿಂಗ್ ತಂಡವು ಚೆಂಡನ್ನು ಕಳೆದುಕೊಂಡಿದೆ ಎಂದು ಘೋಷಿಸಲು ಅಂಪೈರ್‌ಗಳಿಗೆ ಮನವಿ ಮಾಡಿತು. ಹೀಗೆ ಘೋಷಣೆ ಮಾಡಿದರೆ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವುದನ್ನು ತಡೆಯಬಹುದಿತ್ತು.
ಆದರೆ ಅಂಪೈರ್ ಆ ಮನವಿಯನ್ನು ಒಪ್ಪಿರಲಿಲ್ಲ. ಫೀಲ್ಡಿಂಗ್ ತಂಡವು ಮರವನ್ನು ಕತ್ತರಿಸಲು ನಿರ್ಧರಿಸಿತು. ಆದರೆ ಕೊಡಲಿ ಸಿಗದೆ ಆ ಪ್ರಯತ್ನವೂ ವಿಫಲವಾಯಿತು. ಕೊನೆಗೆ ಹಲವಾರು ಗಂಟೆಗಳ ಪ್ರಯತ್ನಗಳ ನಂತರ, ರೈಫಲ್‌ನಲ್ಲಿ ಗುರಿಯಿಟ್ಟು ಚೆಂಡನ್ನು ಮರದಿಂದ ಬೀಳಿಸಲಾಯಿತು. ಇಷ್ಟು ಹೊತ್ತಿಗಾಗಲೇ ಬ್ಯಾಟ್ಸ್‌ಮನ್ 286 ರನ್ ಗಳಿಸಿದ್ದ.
ಇದನ್ನೂ ಓದಿ: ಎಂಗೇಜ್ ಆದ್ರಾ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ? ಕೈಯಲ್ಲಿನ ಉಂಗುರ ನೋಡಿ ರಕ್ಷಿತಾ ಶಾಕ್! ಆ ಲಕ್ಕಿ ಮ್ಯಾನ್ ಯಾರು?
ಇಷ್ಟೊಂದು ರನ್ ಕಲೆಹಾಕಲು ಕ್ರೀಸ್‌ನಲ್ಲಿದ್ದ ಬ್ಯಾಟ್ಸ್‌ಮನ್‌ಗಳು ಬರೋಬ್ಬರಿ 6 ಕಿಲೋಮೀಟರ್‌ಗಳಷ್ಟು ದೂರ ಪಿಚ್‌ನಲ್ಲಿ ಓಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ