Namma Metro Price Hike: ಬೆಂಗಳೂರಿನ ಜನತೆಗೆ BMRCL ಬಿಗ್ ಶಾಕ್ ನೀಡಿದೆ. ʼನಮ್ಮ ಮೆಟ್ರೋʼ ಪ್ರಯಾಣ ದರವನ್ನು ಕೊನೆಗೂ ಏರಿಕೆ ಮಾಡಿದ್ದು, ಈ ಬಗ್ಗೆ ಶನಿವಾರ ತನ್ನ ಟ್ವಿಟರ್ ಖಾತೆಯಲ್ಲಿ ಅಧಿಕೃತ ಆದೇಶವನ್ನು ಪ್ರಕಟಿಸಿದೆ.
ʼನಮ್ಮ ಮೆಟ್ರೋʼ ಪ್ರಯಾಣ ದರವನ್ನು ಶೇ.46ರಷ್ಟು ಏರಿಕೆ ಮಾಡಲಾಗಿದೆ. ಪ್ರಯಾಣ ದರವನ್ನ ಕನಿಷ್ಠ 10 ರೂ.ನಿಂದ 90 ರೂ.ವರೆಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳಿಂದ ಪ್ರಯಾಣ ದರದ ಬಗ್ಗೆ ಚರ್ಚಿಸಲು ವಿಶೇಷ ಸಭೆಗಳು ನಡೆದಿದ್ದವು. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರವು ಏರಿಕೆಯಾಗಿದೆ.
ಪ್ರಯಾಣ ದರ ಏರಿಕೆ ಕುರಿತ ಮಾಹಿತಿ:
ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/jFNMnePq7L— ನಮ್ಮ ಮೆಟ್ರೋ (@OfficialBMRCL) February 8, 2025
ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿಯು ದೇಶದ ಇತರ ರಾಜ್ಯಗಳು, ಸಿಂಗಪುರದ ಮೆಟ್ರೋ ಪರಿಷ್ಕರಣೆ ಕ್ರಮವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ಮಾಡಿದೆ ಎಂದು ವರದಿಯಾಗಿದೆ. 2017ರಲ್ಲಿ 10% ರಿಂದ 15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮೆಟ್ರೋ ಕಾಮಗಾರಿಗಾಗಿ ಸಾಲದ ಮೇಲಿನ ಬಡ್ಡಿ, ಕಾರ್ಯಾಚರಣೆಯ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮುಂತಾದ ವಿವಿಧ ವೆಚ್ಚವು ಪ್ರತಿವರ್ಷವೂ ಹೆಚ್ಚಳವಾಗುತ್ತಿರುವ ಹಿನ್ನೆಲೆ ದರ ಏರಿಕೆ ಅನಿವಾರ್ಯವಾಗಿದೆ ಅಂತಾ BMRCLನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರವು ಬ್ರೇಕ್ ಹಾಕಿತ್ತು. ಇದೀಗ ಅಂತಿಮವಾಗಿ ದರ ಏರಿಕೆ ಮಾಡಲಾಗಿದೆ. ವಿಶೇಷ ದಿನಗಳಲ್ಲಿ, ನಾನ್ ಪೀಕ್ ಅವರ್ಗಳಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ನೀಡಲು ಸಮಿತಿಯು ಶಿಫಾರಸು ಮಾಡಿದೆ. ನಾಳೆಯಿಂದಲೇ ನಮ್ಮ ಮೆಟ್ರೋದ ಪರಿಷ್ಕೃತ ದರವು ಜಾರಿಗೆ ಬರಲಿದ್ದು, ಇದರಿಂದ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಹೊರೆಯಲಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್
* ಮೆಟ್ರೋ ಪ್ರಯಾಣ ದರ ಶೇ.46ರಷ್ಟು ಹೆಚ್ಚಳ
* ಪರಿಷ್ಕೃತ ದರ ನಾಳೆ (ಫೆ.8) ಬೆಳಗ್ಗೆಯಿಂದಲೇ ಅನ್ವಯ
* ಸ್ಮಾರ್ಟ್ ಕಾರ್ಡ್ನಲ್ಲಿ 90ರೂ. ಇರಲೇಬೇಕು
* ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ.5 ರಿಯಾಯಿತಿ
ಪರಿಷ್ಕೃತ ದರ ಹೀಗಿದೆ ನೋಡಿ
* 0-2 KM - 10 ರೂಪಾಯಿ
* 2-4KM- 20 ರೂಪಾಯಿ
* 4-6KM- 30 ರೂಪಾಯಿ
* 6-8KM-40 ರೂಪಾಯಿ
* 8-10KM -50 ರೂಪಾಯಿ
* 10-15KM-60 ರೂಪಾಯಿ
* 15-20KM-70 ರೂಪಾಯಿ
* 20-25KM-80 ರೂಪಾಯಿ
* 25-30KM-90 ರೂಪಾಯಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.