ರಾಜಸ್ಥಾನದ ಅಜ್ಮೀರ್ ಷರೀಫ್ ಎನ್ನುವ ಭಿಕ್ಷುಕನೊಬ್ಬ ಭಿಕ್ಷಾಟನೆಯಿಂದ ಗಳಿಸಿದ ಹಣದಲ್ಲಿ 1.70 ಲಕ್ಷ ರೂಪಾಯಿ ಮೌಲ್ಯದ iPhone 16 Pro Max ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶಾಕ್ ನೀಡಿದ್ದಾನೆ. ಸದ್ಯ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಶೇಖ್ ಎಂಬ ದೈಹಿಕ ಅಂಗವಿಕಲ ವ್ಯಕ್ತಿ ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಆಪಲ್ ಫೋನ್ ಖರೀದಿಸಿದ್ದಾನೆ.
ಶೇಖ್ ಅವರು ದುಬಾರಿ ಫೋನ್ ಅನ್ನು ಹೇಗೆ ಖರೀದಿಸಿದರು ಎಂಬುದನ್ನು ವಿವರಿಸುವ ವೀಡಿಯೊ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಅನೇಕ ಜನರು ಆಘಾತಕ್ಕೊಳಗಾಗಿದ್ದಾರೆ. 1.70 ಲಕ್ಷ ಬೆಲೆಯ ಫೋನ್ ಅನ್ನು ಆಪಲ್ ಸ್ಟೋರ್ನಿಂದ ನಗದು ರೂಪದಲ್ಲಿ ಖರೀದಿಸಲಾಗಿದೆ.
ವಿಡಿಯೋದಲ್ಲಿ ಸಂದರ್ಶಕರು ಶೇಖ್ಗೆ ಫೋನ್ ಖರೀದಿಸಲು ಹಣ ಎಲ್ಲಿಂದ ಬಂತು ಎಂದು ಕೇಳಿದ್ದಾರೆ. ಶೇಖ್ ಶಾಂತವಾಗಿ ಉತ್ತರಿಸುತ್ತಾನೆ, "ಮಾಂಗ್ ಕೆ (ಭಿಕ್ಷೆಯ ಮೂಲಕ)." ಅವರ ನೇರ ಪ್ರತಿಕ್ರಿಯೆಯು ವ್ಯಾಪಕ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಅವನು ಅದನ್ನು ಸಂಪೂರ್ಣ ನಗದು ಪಾವತಿಯೊಂದಿಗೆ ಖರೀದಿಸಿದ್ದೇನೆ, EMI ಇಲ್ಲ" ಎಂದು ಹೇಳಿದರು.
ಈ ಕುರಿತ ವಿಡಿಯೋವನ್ನು rohit_informs ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಿಕ್ಷುಕ ಇದು ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್, ತಾನು ಭಿಕ್ಷಾಟನೆಯ ಮೂಲಕ ಸಂಗ್ರಹಿಸಿದ ಹಣದಿಂದ ಇಎಂಐ ಇಲ್ದೇ ಫುಲ್ ಕ್ಯಾಶ್ ಕೊಟ್ಟೇ ಮೊಬೈಲ್ ಖರೀದಿಸಿರುವುದಾಗಿ ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.