ರಾಜ್ಯದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್!

Tirumala: ತಿರುಪತಿ ತಿಮ್ಮಪ್ಪನ ಹೋದರೆ ಯಾವಾಗಲೂ ವಿಪರೀತ ಜನ ಎನ್ನುವುದೇ ಸಮಸ್ಯೆ. ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಒಂದು ಕಷ್ಟವಾದರೆ ಅಲ್ಲಿ ತಂಗಲು ರೂಮುಗಳು ಸಿಗುವುದು ಇನ್ನೊಂದು ಕಷ್ಟ. ಭಕ್ತರ ಈ ಕಷ್ಟ ಪರಿಹರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. 

Written by - Yashaswini V | Last Updated : Jan 23, 2025, 09:01 AM IST
  • ಕರ್ನಾಟಕದಿಂದ ತಿರುಪತಿಗೆ ಹೋಗುವ ಭಕ್ತರು ಉಳಿದುಕೊಳ್ಳಲು ಈಗಗಾಲೇ ಒಂದು ಪ್ರವಾಸಿ ಸೌಧ ಇದೆ.
  • ರಾಜ್ಯದಿಂದ ಅಪಾರ ಸಂಖ್ಯೆಯ ಭಕ್ತರು ತಿರುಪತಿಗೆ ಹೋಗುವುದರಿಂದ ಆ ಪ್ರವಾಸಿ ಸೌಧ ಸಾಲದಾಗಿದೆ.
  • ಶೇ. 60ರಷ್ಟು ಆನ್ ಲೈನ್ ಹಾಗು ಶೇ. 40ರಷ್ಟು ಆಫ್ ಲೈನ್ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತದೆ.
ರಾಜ್ಯದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್! title=

Tirupati Darshan: ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಆಸೆ ಬಹುತೇಕ ಜನರಿಗೆ ಇರುತ್ತದೆ. ತಿರುಪತಿ ದರ್ಶನಕ್ಕೆ ಟಿಕೆಟ್ ಪಡೆಯುವುದು ಒಂದು ಹರಸಾಹಸವಾದರೆ, ತಿರುಪತಿಯಲ್ಲಿ ತಂಗಲು ರೂಮುಗಳು ಸಿಗುವುದು ಇನ್ನೊಂದು ಕಷ್ಟ.  ಇದೀಗ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಕರ್ನಾಟಕದ ಭಕ್ತರ ಈ ಕಷ್ಟ ಪರಿಹರಿಸಲು ಕರ್ನಾಟಕ ಸರ್ಕಾರ ತಿರುಪತಿಯಲ್ಲಿ ಮೂರು ವಸತಿ ಸಂಕೀರ್ಣಗಳು ಹಾಗು ಒಂದು ಕಲ್ಯಾಣ ಮಂಟಪ ನಿರ್ಮಿಸುತ್ತಿದೆ.

ಕರ್ನಾಟಕದಿಂದ ತಿರುಪತಿಗೆ ಹೋಗುವ ಭಕ್ತರು ಉಳಿದುಕೊಳ್ಳಲು ಈಗಗಾಲೇ ಒಂದು ಪ್ರವಾಸಿ ಸೌಧ ಇದೆ. ಆದರೆ ರಾಜ್ಯದಿಂದ ಅಪಾರ ಸಂಖ್ಯೆಯ ಭಕ್ತರು ತಿರುಪತಿಗೆ ಹೋಗುವುದರಿಂದ ಆ ಪ್ರವಾಸಿ ಸೌಧ ಸಾಲದಾಗಿದೆ. ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕ ಸರ್ಕಾರ ಹೊಸದಾಗಿ ಮೂರು ವಸತಿ ಸಂಕೀರ್ಣಗಳು ಹಾಗು ಒಂದು ಕಲ್ಯಾಣ ಮಂಟಪ ನಿರ್ಮಿಸುತ್ತಿದೆಯಲ್ಲದೆ ಹಾಲಿ ಇರುವ ಪ್ರವಾಸಿ ಸೌಧವನ್ನೂ ಉನ್ನತ ದರ್ಜೆಗೆ ಏರಿಸುತ್ತಿದೆ.

ಇದನ್ನೂ ಓದಿ- ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ ತಿರುಪತಿ ತಿರುಮಲ ಸನ್ನಿಧಿ !ಇಲ್ಲಿನ ವೆಂಕಟರಮಣನ ಮೂರ್ತಿಗೆ ಜೀವವಿದೆ ಎನ್ನುತ್ತವೆ ಈ ನಿಗೂಢ ಸತ್ಯ

ಸದ್ಯ 110 ಎಸಿ ಕೊಠಡಿಗಳನ್ನು ಒಳಗೊಂಡ (ಹಂಪಿ ಬ್ಲಾಕ್ ಅಥವಾ ಬ್ಲಾಕ್ 2) ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ 132 ಎಸಿರಹಿತ ಕೊಠಡಿಗಳನ್ನು ಒಳಗೊಂಡ ಐಹೊಳೆ ಬ್ಲಾಕ್ ಕೂಡ ಇದೆ. ಈ ಕೊಠಡಿಗಳಿಗೆ 24ಗಂಟೆ ಅವಧಿಗೆ 1,350 ರೂಪಾಯಿ ಮತ್ತು ಜಿ‌ಎಸ್‌ಟಿ ಶುಲ್ಕ ಪಾವತಿಸಬೇಕಾಗುತ್ತದೆ.

ಇದಲ್ಲದೆ ಹೊಸದಾಗಿ ತಿರುಮಲದಲ್ಲಿ ಕಟ್ಟಲಾಗಿರುವ ವಸತಿ ಸಂಕೀರ್ಣ, ಶ್ರೀ ಕೃಷ್ಣದೇವರಾಯ ಬ್ಲಾಕಿನ 36 ಎಸಿ ಸೂಟ್ ಗಳು ಮತ್ತು 500 ಜನರ ಸಾಮರ್ಥ್ಯದ ಕಲ್ಯಾಣಮಂಟಪಗಳ ಕಾಮಗಾರಿ ಮುಗಿದಿದ್ದು ಅಂತಿಮ ಹಂತದ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಕರ್ನಾಟಕ ರಾಜ್ಯ ಛತ್ರದಲ್ಲಿನ 24 ಕೊಠಡಿಗಳನ್ನು ನವೀಕರಿಸಲಾಗಿದೆ. ಮೇ ತಿಂಗಳವೇಳೆಗೆ ಸಂಪೂರ್ಣ ಕೆಲಸ ಮುಗಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ- ಧರ್ಮಸ್ಥಳದಲ್ಲೂ ತಿರುಪತಿ ಮಾದರಿ: ಏನೆಲ್ಲಾ ಹೊಸ ವ್ಯವಸ್ಥೆ ಮಾಡಲಾಗಿದೆ ಗೊತ್ತಾ...?

ಹಾಗಾಗಿ ಇನ್ನು ಮುಂದೆ ರಾಜ್ಯದಿಂದ ತಿರುಪತಿಗೆ ಹೋಗುವವರಿಗೆ ಮೊದಲಿನಷ್ಟು ಸಮಸ್ಯೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲಿ karnatakatemplesaccommodation.com ವೆಬ್ ಸೈಟ್ ಮೂಲಕ ಕೊಠಡಿಗಳನ್ನು ಬುಕ್ ಮಾಡಬಹುದು. ಶೇಕಡಾ 60ರಷ್ಟು ಆನ್ ಲೈನ್ ಮೂಲಕ ಹಾಗು ಶೇಕಡಾ 40ರಷ್ಟು ಆಫ್ ಲೈನ್ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News