EPFO Pension: ಕೇವಲ 10 ವರ್ಷ ಸೇವೆ ಸಲ್ಲಿಸಿದರೆ ಇಪಿ‌ಎಸ್ ಅಡಿಯಲ್ಲಿ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...?

EPFO Pension: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ನಡೆಸುತ್ತಿರುವ ಇಪಿಎಸ್ ಅಡಿಯಲ್ಲಿ ಸಂಘಟಿತ ವಲಯದ ಉದ್ಯೋಗಿಗಳಿಗೆ ನಿಯಮಿತ ಆದಾಯ ದೊರೆಯುತ್ತದೆ. 

Written by - Yashaswini V | Last Updated : Jan 13, 2025, 10:21 AM IST
  • ಇಪಿಎಫ್ ಅಡಿಯಲ್ಲಿ ಮಾಸಿಕ 1,000 ರೂ. ಪಿಂಚಣಿ ಮತ್ತು ಗರಿಷ್ಠ 7,500 ರೂ. ಪಿಂಚಣಿ ಪಡೆಯಬಹುದು.
  • ಆದರೆ ಇದಕ್ಕಾಗಿ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
EPFO Pension: ಕೇವಲ 10 ವರ್ಷ ಸೇವೆ ಸಲ್ಲಿಸಿದರೆ ಇಪಿ‌ಎಸ್ ಅಡಿಯಲ್ಲಿ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...?  title=

EPFO Pension: ಭಾರತದ ಅತಿದೊಡ್ಡ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ನಡೆಸುತ್ತಿರುವ ಉದ್ಯೋಗಿಗಳ ಪಿಂಚಣಿ ಯೋಜನೆ- ಇಪಿ‌ಎಸ್ ಕೂಡ ಒಂದಾಗಿದೆ. ಇದು ಸಂಘಟಿತ ವಲಯದ ಉದ್ಯೋಗಿಗಳಿಗೆ ನಿಯಮಿತ ಆದಾಯವನ್ನು ಒದಗಿಸುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾದ ಈ ಯೋಜನೆಯನ್ನು ನವೆಂಬರ್ 16, 1995ರಲ್ಲಿ ಪ್ರಾರಂಭಿಸಲಾಯಿತು. ಕೇವಲ 10 ವರ್ಷ ಸೇವೆ ಸಲ್ಲಿಸಿದರೆ ಇಪಿ‌ಎಸ್ ಅಡಿಯಲ್ಲಿ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...? 

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಎಂದರೆ ಇಪಿಎಫ್ ನಲ್ಲಿ ಮಾಸಿಕ 1,000 ರೂ. ಪಿಂಚಣಿ ಮತ್ತು ಗರಿಷ್ಠ 7,500 ರೂ. ಪಿಂಚಣಿ ಪಡೆಯಬಹುದು. ಆದರೆ ಇದಕ್ಕಾಗಿ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. 

ಅರ್ಹತಾ ಮಾನದಂಡಗಳು: 
ಇಪಿಎಫ್‌ಓ ಅಡಿಯಲ್ಲಿ ನೀಡಲಾಗುವ ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಪಿಂಚಣಿ ಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸುವುದು ಅಗತ್ಯವಾಗಿದೆ. ಇಪಿಎಸ್ ಅಡಿಯಲ್ಲಿ ಪಿಂಚಣಿ ಪಡೆಯಲು ಉದ್ಯೋಗಿಯೂ ಇಪಿಎಫ್‌ಓ ನೋಂದಾಯಿತ ಸದಸ್ಯರಾಗಿರಬೇಕು. ಅವರ ವೃತ್ತಿ ಜೀವನದ ಉದ್ದಕ್ಕೂ ಇಪಿಎಸ್ ಯೋಜನೆಗೆ ಸತತವಾಗಿ ಕೊಡುಗೆ ನೀಡಿರಬೇಕು. ಪಿಂಚಣಿ ಪಡೆಯಲು 58 ವರ್ಷ ವಯಸ್ಸಾಗಿರಬೇಕು. 

ಇದನ್ನೂ ಓದಿ- ಇನ್ನು ಮುಂದೆ ಸರ್ಕಾರಿ ನೌಕರರ ವೇತನ ಹೆಚ್ಚಾಗುವುದು ಈ ಆಧಾರದಲ್ಲಿ! ಹಾಗಾದರೆ ವೇತನ ಆಯೋಗವನ್ನು ಕೈ ಬಿಡಲಿದೆಯಾ ಸರ್ಕಾರ ?

ಇಪಿ‌ಎಫ್‌ಓಗೆ ಕೊಡುಗೆ: 
2014ರಿಂದ ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಇಪಿಎಸ್-1995ರ ಅಡಿಯಲ್ಲಿ ಕನಿಷ್ಠ ಪಿಂಚನಿಯನ್ನು ನಿಗದಿಗೊಳಿಸಿದೆ. ಸಂಘಟಿತ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು ತಮ್ಮ ಮೂಲ ವೇತನದ 12% ಅನ್ನು ಇಪಿಎಫ್‌ಓಗೆ ಕೊಡುತೆ ನೀಡುತ್ತಾರೆ. ಇದರಲ್ಲಿ ಉದ್ಯೋಗದಾತರ ಕೊಡುಗೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 8.33% ಮೊತ್ತವನ್ನು ಇಪಿಎಸ್ ಗೆ ನಿಗದಿಪಡಿಸಲಾಗಿದ್ದರೆ, 3.67% ಇಪಿಎಫ್ ಯೋಜನೆಗೆ ಹಾಕಲಾಗುತ್ತದೆ. ಇಪಿಎಸ್ ಪಿಂಚಣಿಗೆ ಅರ್ಹತೆ ಹೊಂದಲು ಕಡ್ಡಾಯವಾಗಿ 10 ವರ್ಷಗಳ ಕಾಲ ಕೆಲಸ ಮಾಡಿರಬೇಕು. 

ಹಾಗಿದ್ದರೆ, 10 ವರ್ಷ ಕೆಲಸ ಮಾಡಿದರೆ ಎಷ್ಟು ಪಿಂಚಣಿ ಪಡೆಯಬಹುದು. ಇಲ್ಲಿದೆ ಇಪಿಎಸ್ ಪಿಂಚಣಿ ಲೆಕ್ಕಾಚಾರ... 
* ಮಾಸಿಕ ಪಿಂಚಣಿ = (ಪಿಂಚಣಿ ವೇತನ x ಪಿಂಚಣಿ ಸೇವೆ) /70 
* ಪಿಂಚಣಿ ವೇತನ: ಕಳೆದ 60 ತಿಂಗಳ ಸಂಬಳದ ಸರಾಸರಿ (ಗರಿಷ್ಠ 15,000 ರೂ.) 
* ಪಿಂಚಣಿ ಪಡೆಯಬಹುದಾದ ಸೇವೆ: ಇಪಿಎಸ್ ಗೆ ಕೊಡುಗೆ ನೀಡಿದ ಒಟ್ಟು ವರ್ಷಗಳ ಸೇವೆ. 

ಇದನ್ನೂ ಓದಿ- Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ 'ನಾರಿಯರಿಗೆ' ಜಾಕ್ ಪಾಟ್..!

ಉದಾಹರಣೆಗೆ ಉದ್ಯೋಗಿಯ ಪಿಂಚಣಿ ವೇತನವು 15,000 ರೂ. ಆಗಿದ್ದರೆ, ಪಿಂಚಣಿ ಸೇವೆಯು  ಕೇವಲ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ ಮಾಸಿಕ ಪಿಂಚಣಿ ಹೀಗಿರುತ್ತದೆ. 
ಮಾಸಿಕ ಪಿಂಚಣಿ = (15,000 x 10)/70 = 2,143 ರೂ. 

ಇಪಿಎಸ್ ಪ್ರಯೋಜನಗಳು: 
ಇಪಿಎಸ್ ಸದಸ್ಯರಿಗೆ ಪಿಂಚನಿಯಲ್ಲದೆ ಇನ್ನೂ ಹಲವು ಪ್ರಯೋಜನಗಳು ಲಭ್ಯವಿವೆ. 
* ನಿವೃತ್ತಿ ನಂತರ ಮಾಸಿಕ ಪಿಂಚಣಿ ಖಾತರಿ. 
* ಒಂದೊಮ್ಮೆ ಇಪಿಎಫ್ ಸದಸ್ಯರು ಮರಣ ಹೊಂದಿದರೆ ಈ ಯೋಜನೆಯು ಕುಟುಂಬ ರಕ್ಷಣೆ ನೀಡುತ್ತದೆ. ಕುಟುಂಬಸ್ಥರು ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಬಹುದು. 
* ಇಪಿಎಫ್ ಅಂಗವೈಕಲ್ಯ ರಕ್ಷಣೆಯನ್ನು ಸಹ ನೀಡುತ್ತದೆ. ಉದ್ಯೋಗಿ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ಪಿಂಚಣಿ ದೊರೆಯುತ್ತದೆ. 
* ಇಪಿಎಸ್ ತೆರಿಗೆ ಪ್ರಯೋಜನಗಳನ್ನು ಕೂಡ ಆಕರ್ಷಿಸುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News