ನಾಗಪುರ: ಕಂಗನಾ ರಣಾವತ್ ಅವರ ಬಹು ನಿರೀಕ್ಷಿತ ಚಿತ್ರ ಎಮರ್ಜೆನ್ಸಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು,ಈಗ ಈ ಚಿತ್ರವು ಜನವರಿ 17, 2025 ರಂದು ಬೃಹತ್ ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗಲಿದೆ.ಅದಕ್ಕೂ ಮೊದಲು ನಟಿ ಕಂಗಾನಾ ಜನವರಿ 11 ರಂದು ನಾಗಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಈ ಪ್ರದರ್ಶನಕ್ಕೆ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಕೂಡ ಹಾಜರಿದ್ದರು.
ಈ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಎಕ್ಷ್ ಸಾಮಾಜಿಕ ವೇದಿಕೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ 'ಇಂದು ನಾಗ್ಪುರದಲ್ಲಿ ಕಂಗನಾ ರಾವತ್ ಮತ್ತು ಅನುಪಮ್ ಖೇರ್ ಅವರು ಭಾಗವಹಿಸಿದ್ದ 'ಎಮರ್ಜೆನ್ಸಿ' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದೆ. ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಅಂತಹ ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯೊಂದಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಭಾರತದ ಇತಿಹಾಸದಲ್ಲಿ ಮಹತ್ವದ ಅವಧಿಯನ್ನು ಚಿತ್ರಿಸುವ ಈ ಚಿತ್ರವನ್ನು ಎಲ್ಲರೂ ವೀಕ್ಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಮನವಿ ಮಾಡಿದ್ದಾರೆ.
ನಟ ಅನುಪಮ್ ಖೇರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.ಇದರಲ್ಲಿ ನಟಿ ಕಂಗನಾ ಅವರು ಅನುಪಮ್ ಖೇರ್ ತಾಯಿ ದುಲಾರಿ ಅವರ ಆಶೀರ್ವಾದವನ್ನು ಪಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ.
Joined the special screening of the movie Emergency, featuring @KanganaTeam Ji and Shri @AnupamPKher Ji, in Nagpur today. I wholeheartedly thank the filmmakers and actors for presenting the dark chapter of our nation's history with such authenticity and excellence. I urge… pic.twitter.com/a6S0f5Q5bG
— Nitin Gadkari (@nitin_gadkari) January 11, 2025
ಈ ಕುರಿತಾಗಿ ಬರೆದುಕೊಂಡಿರುವ ಅನುಪಮ್ ಖೇರ್ 'ಕಂಗನಾ ಮತ್ತು ದುಲಾರಿ ಇಬ್ಬರು ಬಹುದೊಡ್ಡ ಮಹಿಳಾ ಶಕ್ತಿಗಳು, ಕೆಲವು ದಿನಗಳ ಹಿಂದೆ, ಕಂಗನಾ ಅವರು ಇದ್ದಕ್ಕಿಂದಂತೆ ನನ್ನ ತಾಯಿಯಿಂದ ಆಶೀರ್ವಾದ ಪಡೆಯಲು ನಿರ್ಧರಿಸಿದರು.ಆಗ ಒಳ್ಳೆಯ ಬಟ್ಟೆ ಧರಿಸಲು ಸಮಯ ಸಿಗಲಿಲ್ಲ, ಇದಕ್ಕಾಗಿ ನಾನು ಅವರನ್ನು ರೇಗಿಸಿದೆ. ನನ್ನ ತಾಯಿ ಪ್ರೀತಿಯಿಂದ ಆಶೀರ್ವದಿಸುತ್ತಾ ಮನಸ್ಸು ಒಳ್ಳೆಯದಿದ್ದರೆ ಬಟ್ಟೆಗಳು ಅಷ್ಟು ಮುಖ್ಯವಾಗಲ್ಲ' ಎಂದು ಹೇಳಿದರು. ಇನ್ನು ಮುಂದುವರೆದು 'ಪ್ರೀತಿಯ ಕಂಗನಾ ನೀವು ಅಮ್ಮನನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು.ನೀವಿಬ್ಬರೂ ಮಹಿಳಾ ಸಬಲೀಕರಣದ ದೊಡ್ಡ ಉದಾಹರಣೆ! ನಮ್ಮ ಎಮರ್ಜೆನ್ಸಿ ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೈ ಹೋ!” ಎಂದು ಅವರು ಬರೆದುಕೊಂಡಿದ್ದಾರೆ.
EMERGENCY FIRST SCREENING: What an exhilarating response from the audiences at the first special screening of our film at Nagpur with @nitin_gadkari ji . I also watched the complete film for the first time. OUTSTANDING! The world, especially the younger Indian generation should… pic.twitter.com/1a2ecDhwa7
— Anupam Kher (@AnupamPKher) January 12, 2025
ತುರ್ತು ಪರಿಸ್ಥಿತಿ ಸಿನಿಮಾ:
ಕಂಗನಾ ರನೌತ್ ಅವರ ನಿರ್ದೇಶನದ ಚಿತ್ರ 'ಎಮರ್ಜೆನ್ಸಿ'. ಬಿಡುಗಡೆಗೂ ಮುನ್ನ ಹಲವು ಬಾರಿ ವಿಳಂಬವಾಯಿತು. ಆದಾಗ್ಯೂ, ಈಗ ಜನವರಿ 17, 2025 ರಂದು ಬಿಡುಗಡೆಯಾಗಲಿದ್ದು. ಈ ಚಿತ್ರದಲ್ಲಿ ಕಂಗನಾ ರಣಾವತ್, ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ಅಶೋಕ್ ಛಬ್ರಾ, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ವಿಶಾಕ್ ನಾಯರ್ ಮತ್ತು ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.