ಫತೇಪುರ: ಭಾರತವು ಶೀಘ್ರದಲ್ಲಿಯೇ ಮಂಗಳ ಗ್ರಹಕ್ಕೆ ಕಾಲಿಡಲಿದೆ ಎಂದು ಇಸ್ರೋದ ಮಾಜಿ ಮುಖ್ಯಸ್ಥ ಎ.ಎಸ್. ಕಿರಣ್ ಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರದಂದು ಫತೇಪುರದ ಗೋಯೆಂಕಾ ದೇವಸ್ಥಾನಕ್ಕೆ ಭೇಟಿ ನೀಡಿ ಮಾ ಬೀರಾ ಬಾರ್ಜಿಗೆ ಪೂಜೆ ಸಲ್ಲಿಸಿದರು.ತದನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎ.ಎಸ್.ಕಿರಣ್ ಕುಮಾರ್ ಅವರು 'ಇಸ್ರೋ ಸಂಸ್ಥೆ ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಐದು ಅಗ್ರ ದೇಶಗಳಲ್ಲಿ ಇರಿಸಿದೆ' ಎಂದು ಅವರು ಹೇಳಿದರು.
ಇನ್ನು ಚಂದ್ರಯಾನ 2 ರ ವೈಫಲ್ಯದ ಅನುಭವದ ಬಗ್ಗೆ ಮಾತನಾಡುತ್ತಾ 'ಈ ವೈಫಲ್ಯವು ಕಲಿಕೆಯ ಅನುಭವವಾಗಿದೆ. ಇಂತಹ ವೈಫಲ್ಯಗಳಿಗೆ ಹೆದರುವ ಬದಲು ಅವುಗಳ ಅನುಭವದಿಂದ ಮತ್ತೆ ಮುಂದುವರೆಯಬೇಕು.ಈಗ ಭಾರತ ದೇಶವು ಶೀಘ್ರದಲ್ಲೇ ತನ್ನ ಮಂಗಳ ಗ್ರಹದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಸಾಧಿಸಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ-"ಮಾರುತ" ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ - ಗಾಯಕಿಯರು!
ಕಿರಣ್ ಕುಮಾರ್ 2015 ರಿಂದ 2018 ರವರೆಗೆ ಇಸ್ರೋ ಮುಖ್ಯಸ್ಥರಾಗಿದ್ದರು. ಅವರ ನಾಯಕತ್ವದಲ್ಲಿ, ಭಾರತವು ಒಂದೇ ಕಾರ್ಯಾಚರಣೆಯಲ್ಲಿ 144 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಚಂದ್ರಯಾನ-1 ರ ಯಶಸ್ಸಿಗೆ ಮತ್ತು ಮಂಗಳಯಾನಕ್ಕಾಗಿ ನಿರ್ಮಿಸಿದ ಮಾರ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆಯ ಅಭಿವೃದ್ಧಿಯಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2014 ರಲ್ಲಿ ಪದ್ಮಶ್ರೀ, 2019 ರಲ್ಲಿ ಫ್ರೆಂಚ್ ಸರ್ಕಾರದಿಂದ ಮಾನ್ಯತೆ ಮತ್ತು 2018 ರಲ್ಲಿ ಅಂತರರಾಷ್ಟ್ರೀಯ ವಾನ್ ಕಾರ್ಮನ್ ವಿಂಗ್ಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಅಷ್ಟೇ ಅಲ್ಲದೆ ಅವರು ಇಸ್ರೋ ಪ್ರಶಸ್ತಿ (2006), ಭಾಸ್ಕರ ಪ್ರಶಸ್ತಿ (2007) ಮತ್ತು ISRO ಕಾರ್ಯಕ್ಷಮತೆ ಶ್ರೇಷ್ಠತೆ ಪ್ರಶಸ್ತಿ (2008) ಗಳನ್ನು ಸಹ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.