ಈ ದಿನಾಂಕದಲ್ಲಿ ಜನಿಸಿದವರು ಕುಬೇರನ ಕುಲದವರು!ಹೆಣ್ಣಾಗಿ ಹುಟ್ಟಿದರೆ ಮನೆಗೆ ಅದೃಷ್ಟ ಲಕ್ಷ್ಮಿ ಪ್ರವೇಶವಾದಂತೆ !ಪತಿಯ ಪಾಲಿಗೂ ಸೌಭಾಗ್ಯದೇವತೆ!

ಈ ಸಂಖ್ಯೆಯ ಅಧಿಪತಿ ಗುರು. ಗುರು ಗ್ರಹವನ್ನು  ಮಕ್ಕಳು, ಜ್ಞಾನ, ಶಿಕ್ಷಣ, ಧಾರ್ಮಿಕ ಚಟುವಟಿಕೆಗಳ ಅಂಶವೆಂದು ಪರಿಗಣಿಸಲಾಗುತ್ತದೆ. 

Written by - Ranjitha R K | Last Updated : Feb 17, 2025, 06:22 PM IST
  • 3 ನೇ ಸಂಖ್ಯೆ ಹೊಂದಿರುವವರು ಅದೃಷ್ಟಶಾಲಿಗಳು
  • ಅವರಿಗೆ ಸರ್ಕಾರಿ ಉದ್ಯೋಗಗಳು ಸಿಗುತ್ತವೆ
  • ಬೆಳೆಯುತ್ತಾ ಹೋದಂತೆ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಲೇ ಇರುತ್ತದೆ.
ಈ ದಿನಾಂಕದಲ್ಲಿ ಜನಿಸಿದವರು ಕುಬೇರನ ಕುಲದವರು!ಹೆಣ್ಣಾಗಿ ಹುಟ್ಟಿದರೆ ಮನೆಗೆ ಅದೃಷ್ಟ ಲಕ್ಷ್ಮಿ ಪ್ರವೇಶವಾದಂತೆ !ಪತಿಯ ಪಾಲಿಗೂ ಸೌಭಾಗ್ಯದೇವತೆ!  title=

ಬೆಂಗಳೂರು : ಸಂಖ್ಯಾಶಾಸ್ತ್ರ ಕೂಡಾ ಜ್ಯೋತಿಷ್ಯದೊಂದಿಗೆ ಬೆಸೆದುಕೊಂಡಿದೆ. ಇದರಲ್ಲಿ ಒಬ್ಬ ವ್ಯಕ್ತಿಯ ಭವಿಷ್ಯವು ಅವನ ಜನ್ಮ ದಿನಾಂಕದ ಆಧಾರದ ಮೇಲೆ ತಿಳಿಯುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದ ಜನರ ಮೂಲ ಸಂಖ್ಯೆ 3 ಆಗಿರುತ್ತದೆ. ಈ ಸಂಖ್ಯೆಯ ಅಧಿಪತಿ ಗುರು. ಗುರು ಗ್ರಹವನ್ನು  ಮಕ್ಕಳು, ಜ್ಞಾನ, ಶಿಕ್ಷಣ, ಧಾರ್ಮಿಕ ಚಟುವಟಿಕೆಗಳ ಅಂಶವೆಂದು ಪರಿಗಣಿಸಲಾಗುತ್ತದೆ. 

3 ನೇ ಸಂಖ್ಯೆ ಹೊಂದಿರುವವರು ಅದೃಷ್ಟಶಾಲಿಗಳು : 
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲ ಸಂಖ್ಯೆ 3 ಆಗಿರುವ ಜನರು ಧೈರ್ಯಶಾಲಿಗಳು, ಹೋರಾಟಗಾರರು ಮತ್ತು ಏನೇ ಸಮಸ್ಯೆಗಳು ಬಂದರೂ ಎದೆಗುಂದುವುದಿಲ್ಲ.ಇತರರು ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದನ್ನು ಇವರು ಇಷ್ಟಪಡುವುದಿಲ್ಲ. ಅವನು ಯಾರ ಮುಂದೆಯೂ ತಲೆ ಬಾಗುವುದಿಲ್ಲ, ಸ್ವಾಭಿಮಾನಿಗಳು.ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸಿಯೆ ತೀರುತ್ತಾರೆ. ಇವರು  ದಾರ್ಶನಿಕ ಸ್ವಭಾವವನ್ನು ಹೊಂದಿರುತ್ತಾರೆ. ಸಂಭವನೀಯ ಘಟನೆಗಳನ್ನು ಮುಂಚಿತವಾಗಿ ಗ್ರಹಿಸಬಲ್ಲರು. 

ಇದನ್ನೂ ಓದಿ : ಈ 5 ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿ ಹೊಂದಲ್ಲ; ಅವರು ಬಡವರಾಗಿಯೇ ಸಾಯುತ್ತಾರೆ!!

ಯಶಸ್ಸು ಕಟ್ಟಿಟ್ಟ ಬುತ್ತಿ : 
ಅವರಿಗೆ ಸರ್ಕಾರಿ ಉದ್ಯೋಗಗಳು ಸಿಗುತ್ತವೆ. ಅವರು ಪೊಲೀಸ್, ಆಡಳಿತ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಅಥವಾ ಧಾರ್ಮಿಕ ವಿದ್ವಾಂಸರಾಗುತ್ತಾರೆ. ಮೂರು ಮುಲಾಂಕ ಹೊಂದಿರುವವರು ತಮ್ಮ ಕೆಲಸದಲ್ಲಿ ನುರಿತವರು. ಅವರು ಶಿಕ್ಷಕರು, ಬರಹಗಾರರು, ಪ್ರಾಧ್ಯಾಪಕರೂ ಆಗಿರಬಹುದು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ,  ಯಶಸ್ಸಿನ ಉತ್ತುಂಗಕ್ಕೆ ಏರುವರು. 

ಆರ್ಥಿಕ ಪರಿಸ್ಥಿತಿ ಹೇಗಿದೆ? : 
ಮೂರು ಮುಲಾಂಕ ಹೊಂದಿರುವವರು ಹುಟ್ಟುವಾಗ ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಆದರೆ ಬೆಳೆಯುತ್ತಾ ಹೋದಂತೆ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಲೇ ಇರುತ್ತದೆ. ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಹೊಂದಿರುತ್ತಾರೆ. ಇದರಿಂದಾಗಿ ಅವರು ಏಕಕಾಲದಲ್ಲಿ ವಿವಿಧ ವಿಧಾನಗಳಿಂದ ಹಣ ಗಳಿಸುತ್ತಲೇ ಇರುತ್ತಾರೆ.  

ಸಹೋದರರಿಂದ ಸಹಾಯ  : 
ತಮ್ಮ ಸಹೋದರ ಸಹೋದರಿಯರೊಂದಿಗೆ ಬಲವಾದ ಸಂಬಂಧವನ್ನು ಹೊಂದಿರುತ್ತಾರೆ.ಕಷ್ಟದ ಸಮಯದಲ್ಲಿ, ಅವನಿಗೆ ಸಹೋದರ ಸಹೋದರಿಯರಿಂದ ಸಹಾಯ ಸಿಗುತ್ತದೆ.ಇವರಿಗೆ ಸ್ನೇಹಿತರ ಸಂಖ್ಯೆ ತುಂಬಾ ಹೆಚ್ಚು. ಪೋಷಕರಿಂದ ವಿಶೇಷ ಪ್ರೀತಿ ಸಿಗುತ್ತದೆ. 

ಇದನ್ನೂ ಓದಿ : ಈ 4 ನಕ್ಷತ್ರದಲ್ಲಿ ಜನಿಸಿದ ಹುಡುಗಿಯರು ಲಕ್ಷ್ಮಿ ದೇವಿಯ ಪುನರ್ಜನ್ಮ! ಸಾಕ್ಷಾತ್‌ ದೇವಿಯ ಪ್ರತಿರೂಪವೇ ಇವರು

ದಾಂಪತ್ಯ ಜೀವನ ಹೇಗಿರುತ್ತದೆ ?: 
3ನೇ ಸಂಖ್ಯೆ ಹೊಂದಿರುವ ಜನರ ಪ್ರೇಮ ಸಂಬಂಧ ಶಾಶ್ವತವಲ್ಲ. ಆದರೆ, ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅವರಿಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದು. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News