ಆ ನಟ ಮೂರು ಮದುವೆ ಮುಚ್ಚಿಟ್ಟು ನನ್ನ ಗರ್ಭಿಣಿ ಮಾಡಿದ: 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ಸ್ಟಾರ್‌ ನಟಿ!

Tiger Prabhakar Wife: ನಟಿ ಅಂಜು ತಮ್ಮ ಮಾಜಿ ಪತಿ ಟೈಗರ್ ಪ್ರಭಾಕರ್ ಜೊತೆಗಿನ ತಮ್ಮ ಜೀವನದ ಸಿಹಿ-ಕಹಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Written by - Chetana Devarmani | Last Updated : Feb 18, 2025, 02:18 PM IST
  • ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಬಂದ ನಟಿ ಅಂಜು
  • 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಮದುವೆ
  • ಕಣ್ಣೀರಿನ ಕತೆ ಬಿಚ್ಚಿಟ್ಟಿದ್ದಾರೆ ನಟಿ ಅಂಜು
ಆ ನಟ ಮೂರು ಮದುವೆ ಮುಚ್ಚಿಟ್ಟು ನನ್ನ ಗರ್ಭಿಣಿ ಮಾಡಿದ: 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ಸ್ಟಾರ್‌ ನಟಿ! title=

Tiger Prabhakar Wife Anju : ನಟಿ ಅಂಜು ಬಾಲ ಕಲಾವಿದೆಯಾಗಿ ಅಭಿನಯವನ್ನು ಆರಂಭಿಸಿದರು. ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿ ಅಂಜು ಅಭಿನಯಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ಬೋಲ್ಡ್ ಪಾತ್ರಗಳ ಮೂಲಕ ನಟಿ ಅಂಜು ಯುವಕರ ನಿದ್ದೆ ಕದ್ದವರು. ಆದರೆ 17 ನೇ ವಯಸ್ಸಿನಲ್ಲಿ ಅಂಜು ಅವರ ಆ ಒಂದು ನಿರ್ಧಾರ ಜೀವನದ ದಿಕ್ಕನ್ನೇ ಬದಲಿಸಿತು. ತನಗಿಂತ 31 ವರ್ಷ ಹಿರಿಯ ನಟನ ಜೊತೆ ಅಂಜು ಪ್ರೀತಿಸಿ ಮದುವೆಯಾದರು. ಅಲ್ಲಿಂದ ಅವರ ಬಾಳು ಬೇರೆ ದಾರಿಯಲ್ಲೇ ಸಾಗಿತು. 

ನಟಿ ಅಂಜು ತಮ್ಮ ಮದುವೆಯ ಈ ಬಗ್ಗೆ ನಟಾಸ್ ಮೀಡಿಯಾ ಚಾನೆಲ್ ಜೊತೆ ಮಾತನಾಡಿದ್ದಾರೆ. ವೈವಾಹಿಕ ಜೀವನದ ವಿಷಯಕ್ಕೆ ಬಂದಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಾವು ಸಂಪೂರ್ಣವಾಗಿ ಸತ್ಯ ತಿಳಿದುಕೊಳ್ಳಬೇಕು. ಆ ಬಳಿಕವೇ ಸೂಕ್ತವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಆದರೆ ಆ ನಂತರ ಕಷ್ಟಪಡಬಾರದು. ಕೆಲವರು ಅದರಿಂದ ಬರುವ ಕಷ್ಟಗಳನ್ನು ನಿವಾರಿಸಿಕೊಂಡು, ಹೊಂದಿಕೊಂಡು, ತಮ್ಮ ಜೀವನವನ್ನು ಮುಂದುವರಿಸುತ್ತಾರೆ. ಆದರೆ ಕೆಲವು ಜನರಿಗೆ ಅದು ಹಾಗಿರುವುದಿಲ್ಲ. ಜೀವನವು ನಮಗೆ ತಪ್ಪು ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬ ಅಪರಾಧಿ ಭಾವನೆಯನ್ನು ನೀಡುತ್ತದೆ ಎಂದಿದ್ದಾರೆ. 

ಇದನ್ನೂ ಓದಿ: ಎಲ್ಲರ ಎದುರಲ್ಲೇ ಸಾಯಿ ಪಲ್ಲವಿಗೆ ಮುತ್ತಿಟ್ಟ ಅಭಿಮಾನಿ.. ವಿಡಿಯೋ ವೈರಲ್

ಆ ಸಮಯದಲ್ಲಿ ನಾನು ನನ್ನ ನಟನಾ ವೃತ್ತಿಜೀವನವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದೆ. ಆ ಸಮಯದಲ್ಲಿ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೆ. ಅದರಲ್ಲಿ ಟೈಗರ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಟೈಗರ್ ಪ್ರಭಾಕರ್ ನನಗೆ ಕನ್ನಡ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುವ ಆಸೆ ಇದೆಯೇ ಎಂದು ಕೇಳಿದರು. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ ಅಂತ ಹೇಳಿದ್ದೆ ಎಂದಿದ್ದಾರೆ.

ನಾನು ಮುಂದೆ ಕನ್ನಡ ಚಿತ್ರ ಮಾಡಲಿದ್ದೇನೆ ಎಂದು ಹೇಳಿದರು. ಆ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿ ನಟಿಸುತ್ತೀರಾ ಎಂದು ಕೇಳಿದರು. ಆ ಸಮಯದಲ್ಲಿ ನನಗೆ ಮಲಯಾಳಂ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆ ಚಿತ್ರದಲ್ಲಿ ನಾನು ಮತ್ತು ಖುಷ್ಬು ನಟಿಸಬೇಕಿತ್ತು. ನಾನು ಇದನ್ನು ಟೈಗರ್ ಪ್ರಭಾಕರ್ ಗೆ ಹೇಳಿದೆ. ಅವರು ತಕ್ಷಣ ನನಗೇ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದರು ಎಂದಿದ್ದಾರೆ.

ನಂತರ, ನಾನು ಕುಳಿತು ಯೋಚಿಸಿದಾಗ, ಕನ್ನಡದಲ್ಲಿ ನಟಿಸುವುದರಿಂದ ಹೊಸ ಭಾಷೆಯಲ್ಲಿ ನಟಿಸಲು ಅವಕಾಶ ಸಿಗುತ್ತದೆ ಎಂದು ನಿರ್ಧರಿಸಿದೆ. ನಾನು ಅವರೊಟ್ಟಿಗೆ ನಟಿಸುವ ಅವಕಾಶವನ್ನು ಆರಿಸಿಕೊಂಡೆ. ಆ ಚಿತ್ರದ ಮೂಲಕ ನನಗೆ ಅವರ ಪರಿಚಯವಾಯಿತು. ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ನನಗೆ ಸಿನಿಮಾ ಮಾಡುವ ಆಸೆ ಇತ್ತು. ಟೈಗರ್ ಪ್ರಭಾಕರ್ ನನ್ನಲ್ಲಿ ತೋರಿಸಿದ ಆಸಕ್ತಿ ಅವರನ್ನು ಮದುವೆಯಾಗಬಹುದು ಎಂದು ನಿರ್ಧರಿಸುವಂತೆ ಮಾಡಿತು ಎಂದಿದ್ದಾರೆ.

ನಾನು ಅವರನ್ನು ಮದುವೆಯಾದಾಗ, ಅವರಿಗೆ ಬಹುತೇಕ ನನ್ನ ತಂದೆಯ ವಯಸ್ಸು. ಆದರೆ ನಾನು ಅದ್ಯಾವುದನ್ನೂ ಗಮನಿಸಲಿಲ್ಲ. ನಿಜ ಹೇಳಬೇಕೆಂದರೆ ನಾವು ಅಧಿಕೃತವಾಗಿ ಮದುವೆಯಾಗಿಲ್ಲ. ನಾವು ಒಟ್ಟಿಗೆ ವಾಸಿಸುತ್ತಿದ್ದೆವು. ಆಗ ನನಗೆ ಕೆಲವು ವಿಷಯಗಳು ಅರ್ಥವಾದವು. ಹಿಂದೆ, ಅವರು ಮದುವೆಯಾಗಿದ್ದರು. ಒಂದು ಮಗು ಕೂಡ ಇದೆ. ನನಗೆ ಅವರ ಹೆಂಡತಿ ಅವರನ್ನು ಬಿಟ್ಟು ಹೋಗಿದ್ದಾರೆ ಅಂತ ಮಾತ್ರ ತಿಳಿದಿತ್ತು. ಆದರೆ, ಅವರು ಅದಕ್ಕೂ ಮೊದಲೇ ಮದುವೆಯಾಗಿದ್ದರು ಮತ್ತು ಅವರ ಪತ್ನಿಗೆ ನನಗಿಂತ ಹಿರಿಯರಾದ 3 ಗಂಡು ಮಕ್ಕಳಿದ್ದಾರೆ ಗೊತ್ತಿರಲಿಲ್ಲ. ಅದರ ಬಗ್ಗೆ ನನ್ನ ಬಳಿ ಬಾಯಿ ತೆರೆಯಲೂ ಇಲ್ಲ ಎಂದು ನಟಿ ಅಂಜು ಹೇಳಿದ್ದಾರೆ. 

ನನಗೆ ವಿಷಯ ತಿಳಿದಾಗ ನಾನು ದಿಗ್ಭ್ರಮೆಗೊಂಡೆ.  ಮೂರು ಮದುವೆ ಮುಚ್ಚಿಟ್ಟು ನನ್ನನ್ನ ಜೊತೆಗಿದ್ದ ಎಂದು ತಿಳಿಯಿತು. ನಾನು ಇಡೀ ಕುಟುಂಬದ ಇಚ್ಛೆಗೆ ವಿರುದ್ಧ ನಿಂತು ಪ್ರಭಾಕರ್‌ನನ್ನು ಮದುವೆಯಾದೆ.  ಏನೇ ಆದರೂ ನಾವು ನಿಭಾಯಿಸಿಕೊಂಡು ಬದುಕುತ್ತೇವೆ ಎಂದು ನಾನು ಭಾವಿಸಿದೆ. ಆದರೆ ಅಷ್ಟರಲ್ಲಿ ಅವನು ಇನ್ನೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಅಷ್ಟೊತ್ತಿಗೆ ನನಗೆ ಮಗನಿದ್ದ. ಅವನು ನನ್ನ ಜೊತೆ ಕಷ್ಟ ಅನುಭವಿಸಬಾರದೆಂದು ನಾನು ಪ್ರಭಾಕರ್‌ನಿಂದ ದೂರವಾದೆ ಎಂದು ಹೇಳಿದರು.

ನನ್ನ ಮಗುವಿಗೆ ಎರಡು ವರ್ಷವಾಗಿದ್ದಾಗ, ಅವನ ನಿಧನದ ಎಂಬ ಸುದ್ದಿ ನನಗೆ ಬಂತು. ನಾನು ಬರುವುದಿಲ್ಲ ಅಂತ ಹೇಳಿದೆ. ಕೊನೆಯ ಬಾರಿ ಅವನಿಗೆ ನೀನು ಸತ್ತರೂ... ನಾನು ಈ ಮನೆಗೆ ಕಾಲಿಡುವುದಿಲ್ಲ ಎಂದಿದ್ದೆ. ಅವರು ಸತ್ತಾಗ ನನಗೆ ಅವರ ಮುಖ ನೋಡಲೂ ಆಗಲಿಲ್ಲ. ನನ್ನ ಮಗ ತನ್ನ ತಂದೆಯನ್ನು ಎಂದಿಗೂ ನೋಡಲೇ ಇಲ್ಲ ಎಂದು ಹೇಳಿದರು.

1995 ರಲ್ಲಿ ತಮಗಿಂತ 31 ವರ್ಷ ದೊಡ್ಡವರಾದ ನಟ ಟೈಗರ್ ಪ್ರಭಾಕರ್ ಅವರನ್ನು ಮಟಿ ಅಂಜು ವಿವಾಹವಾದರು. ನಂತರ ಅವರು 1996 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಒಬ್ಬ ಮಗನಿದ್ದಾನೆ. ಕನ್ನಡ ನಟ ಟೈಗರ್ ಪ್ರಭಾಕರ್ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಫೋನ್ಸಾ ಮೇರಿ ಮತ್ತು ನಟಿ ಜಯಮಾಲಾ ಸೇರಿದಂತೆ 3 ಜನರನ್ನು ನಟ ಟೈಗರ್ ಪ್ರಭಾಕರ್ ವಿವಾಹವಾದರು ಎಂಬ ವದಂತಿ ಇದೆ. ನಟಿ ಅಂಜು ಟೈಗರ್ ಪ್ರಭಾಕರ್ ಅವರ ನಾಲ್ಕನೇ ಪತ್ನಿಯಂತೆ ಎನ್ನಲಾಗುತ್ತದೆ. ಟೈಗರ್ ಪ್ರಭಾಕರ್ ಪ್ರೀತಿಯಲ್ಲಿ ಬಿದ್ದಾಗ ಅಂಜುಗೆ 17 ವರ್ಷ ಮತ್ತು ಟೈಗರ್ ಪ್ರಭಾಕರ್‌ಗೆ 48 ವರ್ಷ ವಯಸ್ಸಾಗಿತ್ತು. 

ಇದನ್ನೂ ಓದಿ: ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆಯಾದ ಖ್ಯಾತ ನಟಿ.. ಬೆದರಿಕೆ ಮಧ್ಯೆಯೂ ಒಂದಾದ ಸ್ಟಾರ್‌ ಜೋಡಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News